ಅನಂತನಾಗದಲ್ಲಿ ಸರ್ಕಸ್ ನ ಹಿಂದೂ ಕಾರ್ಮಿಕನ ಹತ್ಯೆ !

ಕಾಶ್ಮೀರದಲ್ಲಿ ಜಿಹಾದಿ ಭಯೋತ್ಪಾದಕರಿಂದ ಹಿಂದೂಗಳ ಹತ್ಯೆ ಮುಂದುವರಿಕೆ !

ಅನಂತನಾಗ (ಜಮ್ಮು ಕಾಶ್ಮೀರ) – ಜಿಹಾದಿ ಭಯೋತ್ಪಾದಕರು ಇಲ್ಲಿಯ ‘ಅಮ್ಯೂಸ್ಮೆಂಟ್ ಪಾರ್ಕ್’ ನ ಸರ್ಕಸನಲ್ಲಿ ಕೆಲಸ ಮಾಡುವ ದೀಪು ಎಂಬ ಹಿಂದೂ ಕಾರ್ಮಿಕನ ಮೇಲೆ ಗುಂಡಿನ ದಾಳಿ ಮಾಡಿ ಹತ್ಯೆ ಮಾಡಿದ್ದಾರೆ.

(ಸೌಜನ್ಯ – India Today)

ದೀಪು ಇವನು ಉಧಮಪುರದ ನಿವಾಸಿಯಾಗಿದ್ದಾನೆ. ಈ ಪ್ರಕರಣದ ದೂರು ದಾಖಲಾಗಿ ತನಿಖೆ ನಡೆಯುತ್ತಿದೆ ಎಂದು ಜಮ್ಮು ಕಾಶ್ಮೀರ ಪೊಲೀಸರು ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ. ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ ಇವರು ಟ್ವೀಟ್ ಮೂಲಕ ಹತ್ಯೆ ಖಂಡಿಸಿದ್ದಾರೆ.

ಸಂಪಾದಕೀಯ ನಿಲುವು

ಎಲ್ಲಿಯವರೆಗೆ ಕಾಶ್ಮೀರದಲ್ಲಿನ ಜಿಹಾದಿ ಮಾನಸಿಕತೆ ನಾಶ ಮಾಡುವುದಿಲ್ಲ, ಅಲ್ಲಿಯವರೆಗೆ ಅಲ್ಲಿಯ ಭಯೋತ್ಪಾದನೆ ಬೇರು ಸಹಿತ ಎಂದೂ ಕೂಡ ನಾಶವಾಗಲು ಸಾಧ್ಯವಿಲ್ಲ !