ಅಲಿಗಡ ಮುಸ್ಲಿಂ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಅಫಿಫುಲ್ಲಾ ಖಾನ ಇವರ ಮೇಲೆ ವಿದ್ಯಾರ್ಥಿನಿಯ ಲೈಂಗಿಕ ಕಿರುಕುಳ ನೀಡಿದ ಆರೋಪ

  • ದೂರು ದಾಖಲಿಸಿದ್ದರೂ ವಿಶ್ವವಿದ್ಯಾಲಯದ ಕುಲಸಚಿವರಿಂದ ನಿರ್ಲಕ್ಷ್ಯ !

  • ಪೊಲೀಸರಿಂದ ದೂರು ದಾಖಲು !

ಪ್ರಾಧ್ಯಾಪಕ ಅಫಿಫುಲ್ಲಾ ಖಾನ

ಅಲಿಗಡ (ಉತ್ತರಪ್ರದೇಶ) – ಅಲಿಗಡ ಮುಸ್ಲಿಂ ವಿಶ್ವವಿದ್ಯಾಲಯದ (ಎ.ಎಂ.ಯೂ.ನ) ಪ್ರಾಧ್ಯಾಪಕ ಅಫಿಫುಲ್ಲಾ ಖಾನ ಇವರ ವಿರುದ್ಧ ಲೈಂಗಿಕ ಕಿರುಕುಳದ ಗಂಭೀರ ಆರೋಪ ಮಾಡಲಾಗಿದೆ. ಈ ಪ್ರಕರಣದಲ್ಲಿ ಪೊಲೀಸರು ದೂರನ್ನು ದಾಖಲಿಸಿದ್ದಾರೆ. ಆರೋಪ ಮಾಡಿರುವ ಸಂಬಂಧಿಸಿದ ವಿದ್ಯಾರ್ಥಿನಿಯು ವಿಶ್ವವಿದ್ಯಾಲಯದಲ್ಲಿ ಪಿ.ಎಚ್.ಡಿ.(ವಿದ್ಯಾವಾಚಸ್ಪತಿ) ಮಾಡುತ್ತಿದ್ದು ಅವಳ ಥೀಸೀಸ್ ಸಲ್ಲಿಸುವ ಸಮಯದಲ್ಲಿ ಆರೋಪಿ ಪ್ರಾಧ್ಯಾಪಕನು ಅವಳ ಬಳಿ ಅಶ್ಲೀಲ ಬೇಡಿಕೆಯನ್ನು ಮಂಡಿಸಿದನು. ಇದನ್ನು ವಿರೋಧಿಸಿ ಪೀಡಿತೆಯು ಮೇ 2 ರಂದು ವಿಶ್ವವಿದ್ಯಾಲಯದ ಕುಲಸಚಿವರ ಬಳಿ ದೂರು ದಾಖಲಿಸಿದಾಗ ಅದನ್ನು ನಿರ್ಲಕ್ಷ ಮಾಡಲಾಗಿದೆ. ಕೊನೆಯಲ್ಲಿ ಮೇ 27 ರಂದು ಪೊಲೀಸರಲ್ಲಿ ದೂರನ್ನು ದಾಖಲಿಸಿದ ಬಳಿಕ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಾಧ್ಯಾಪಕರ ವಿರುದ್ಧ ದೂರು ದಾಖಲಿಸಲಾಯಿತು.

ಪೀಡಿತೆಯು, ‘2017 ರಿಂದ ಅವಳು ವಿಶ್ವವಿದ್ಯಾಲಯದಲ್ಲಿ ಪಿ.ಎಚ್.ಡಿ. ಮಾಡುತ್ತಿದ್ದು, ಕಳೆದ 5 ವರ್ಷಗಳಿಂದ ಪ್ರಾಧ್ಯಾಪಕ ಖಾನ ನನ್ನನ್ನು ಚುಡಾಯಿಸುತ್ತಿದ್ದನು. ಹಾಗೂ ಅವನು ನನ್ನನ್ನು ಅಯೋಗ್ಯ ರೀತಿಯಲ್ಲಿ ಸ್ಪರ್ಶಿಸುತ್ತಿದ್ದರು. ಸೂಕ್ತವಲ್ಲದ ಸಮಯದಲ್ಲಿ ನನಗೆ ಅವರು ಕಾರ್ಯಾಲಯಕ್ಕೆ ಕರೆಸುತ್ತಿದ್ದರು. ಆವಶ್ಯಕತೆಯಿಲ್ಲದಿರುವಾಗಲೂ ನಾನು ಅಧ್ಯಯನ ಮಾಡುತ್ತಿದ್ದ ಸ್ಥಳಕ್ಕೆ ಬಂದು ನನ್ನ ಪಕ್ಕದಲ್ಲಿ ಕುಳಿತುಕೊಳ್ಳುತ್ತಿದ್ದರು. ನನ್ನ ಬಟ್ಟೆ ಅಲಂಕಾರಗಳ ವಿಷಯದಲ್ಲಿ ತಪ್ಪಾಗಿ ಟೀಕೆ ಮಾಡುವುದು ಮುಂತಾದ ಕೃತ್ಯಗಳನ್ನು ಅವರು ಮಾಡುತ್ತಿದ್ದರು. ಇದನ್ನು ಮೊದಲು ನಾನು ನಿರ್ಲಕ್ಷಿಸಿದೆನು; ಆದರೆ ಬಳಿಕ ನಾನು ಈ ಕೃತ್ಯಗಳನ್ನು ವಿರೋಧಿಸತೊಡಗಿದೆನು. ಮೇ 1 ರಂದು ನಾನು ನನ್ನ ಕೊನೆಯ ಪ್ರಬಂಧವನ್ನು ಸಲ್ಲಿಸಲು ಹೋಗಿದ್ದಾಗ 6 ತಿಂಗಳ ಹಿಂದೆ ನನ್ನ ಎಲ್ಲ ಕಾರ್ಯಗಳು ಸಮರ್ಪಕವಾಗಿದೆಯೆಂದು ಹೇಳುವ ಪ್ರಾಧ್ಯಾಪಕ ಖಾನ ಒಮ್ಮಿಂದೊಮ್ಮೆಲೆ ನನ್ನನ್ನು ವಿರೋಧಿಸತೊಡಗಿದರು ಮತ್ತು ನನ್ನ ಸಂಶೋಧನೆ ತಪ್ಪಾಗಿದೆಯೆಂದು ಹೇಳಲು ಪ್ರಾರಂಭಿಸಿದರು. ಇದಲ್ಲದೇ ನನ್ನಲ್ಲಿ ಅಶ್ಲೀಲ ಬೇಡಿಕೆಯನ್ನು ಮಾಡತೊಡಗಿದರು.’ ಎಂದು ಹೇಳಿದಳು. ಈಗ ಈ ಪ್ರಕರಣವನ್ನು ನಿಷ್ಪಕ್ಷವಾಗಿ ವಿಚಾರಣೆ ನಡೆಸುತ್ತಿರುವುದಾಗಿ ಪೊಲೀಸ ಅಧಿಕಾರಿಗಳು ಹೇಳಿದ್ದಾರೆ.

ಸಂಪಾದಕೀಯ ನಿಲುವು

ಈ ಪ್ರಕರಣದಲ್ಲಿ ಕೇವಲ ಕಾಮುಕ ಪ್ರಾಧ್ಯಾಪಕರಷ್ಟೇ ಅಲ್ಲ. ಅವರನ್ನು ರಕ್ಷಿಸಲು ಪ್ರಯತ್ನಿಸುವ ವಿಶ್ವವಿದ್ಯಾಲಯದ ಕುಲಸಚಿವರ ಮೇಲೆಯೂ ಕಠಿಣ ಕ್ರಮ ಕೈಕೊಳ್ಳುವುದು ಆವಶ್ಯಕ !