ಕರ್ನಾಟಕದಲ್ಲಿ ೩೪ ಸಚಿವರಗಳಲ್ಲಿ ೧೬ ಸಚಿವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲು !

ಬೆಂಗಳೂರು – ರಾಜ್ಯದಲ್ಲಿನ ಹೊಸ ಸರಕಾರದ ಮಂತ್ರಿ ಮಂಡಲದಲ್ಲಿನ ೩೪ ಸಚಿವರಲ್ಲಿ ೧೬ ಸಚಿವರ ಮೇಲೆ ಕ್ರಿಮಿನಲ್ ಕೇಸ್ ದಾಖಲಾಗಿದೆ. ಕೆಲವರ ವಿರುದ್ಧ ಆರೋಪ ಪತ್ರದ ದಾಖಲಿಸಲಾಗಿದೆ. ಆದರೆ ಯಾವುದೇ ಪ್ರಕರಣದಲ್ಲಿ ಕೂಡ ತೀರ್ಪು ಬಂದಿಲ್ಲ.

೧. ಅಪರಾಧಗಳಲ್ಲಿ ೪೨ ಪ್ರಕರಣಗಳ ಸಹಿತ ಬಿ. ನಾಗೇಂದ್ರ ಮಂಚೂಣಿಯಲ್ಲಿದ್ದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಇವರ ವಿರುದ್ಧ ೧೯ ಪ್ರಕರಣಗಳು ಇದೆ. ನಾಗೇಂದ್ರ ಇವರ ವಿರುದ್ಧ ೨೧ ಪ್ರಕರಣದಲ್ಲಿ ಲೋಕಾಯುಕ್ತರಿಂದ ವಿಚಾರಣೆ ನಡೆಯುತ್ತಿದೆ. ಕೇಂದ್ರದಲ್ಲಿ ಆಯೋಗದಿಂದ ೪ ಪ್ರಕರಣದಲ್ಲಿ ವಿಚಾರಣೆ ನಡೆಯುತ್ತಿದ್ದು ಸಿ.ಐ.ಡಿ. ಒಂದು ಪ್ರಕರಣದ ವಿಚಾರಣೆ ನಡೆಯುತ್ತಿದೆ. ೧೯೫೭ ರಲ್ಲಿ ಗಣಿ ನಿಯಂತ್ರಣ ಅಭಿವೃದ್ಧಿ ಕಾನೂನಿನ ಅಡಿಯಲ್ಲಿ ನಾಗೇಂದ್ರ ಇವರ ಮೇಲೆ ಪ್ರಕರಣ ದಾಖಲಿಸಲಾಗಿದೆ. ಇದರ ಜೊತೆಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಇವರ ವಿರುದ್ಧ ಸಾಕ್ಷಿ ನಾಶದ ಬಗ್ಗೆ, ಸುಳ್ಳು ಮಾಹಿತಿ ಪೂರೈಕೆ, ಲಂಚ ಹಾಗೂ ಮೋಸ ಮುಂತಾದ ಆರೋಪಾದಕಲಾಗಿವೆ.

೨. ಮುಖ್ಯಮಂತ್ರಿ ಸಿದ್ದರಾಮಯ್ಯ ಇವರ ವಿರುದ್ಧ ಲಂಚ, ಕಾನೂನ ಬಾಹಿರ ಸಭೆ ನಡೆಸುವುದು, ಇಂತಹ ೧೩ ಪ್ರಕರಣಗಳಿವೆ. ಜಮೀರ್ ಅಹಮದ್ ಖಾನ್ ಇವರ ವಿರುದ್ಧ ಹತ್ಯೆ, ದಾಳಿ ನಡೆಸುವುದು, ಬಲವಂತವಾಗಿ ಮಹಿಳೆಯರನ್ನು ಅವಮಾನಿಸಿ ಆತ್ಮಹತ್ಯೆಗೆ ಕಾರಣಕರ್ತರಾಗುವುದು, ಮೋಸ, ಬೆದರಿಕೆ ಇಂತಹ ೬ ಗಂಭೀರ ಪ್ರಕರಣಗಳಿರುವುದು. ಪ್ರಿಯಾಂಕ ಖರ್ಗೆ ಇವರ ವಿರುದ್ಧ ೯. ಈಶ್ವರ ಖಂಡ್ರೆ ೭, ಎಂ.ಬಿ. ಪಾಟೀಲ ೫, ರಾಮಲಿಂಗ ರೆಡ್ಡಿ ೪, ಗೃಹ ಸಚಿವ ಡಾ. ಜಿ ಪರಮೇಶ್ವರ ೩, ಎಚ್. ಕೆ. ಪಾಟೀಲ ೨, ಡಿ ಸುಧಾಕರ್ ೨, ಕೃಷ್ಣ ಬೈರೇಗೌಡ ೧, ಎನ್. ಚಲುವರಾಯಸ್ವಾಮಿ ೧ ಮತ್ತು ಕೆ.ಎಚ್ .ಮುನಿಯಪ್ಪ ೧ ಹೀಗೆ ಇವರ ವಿರುದ್ಧ ಕ್ರಿಮಿನಲ್ ಕೇಸ ಗಳಿರುವುದು.

ಸಂಪಾದಕೀಯ ನಿಲುವು

ದೇಶದಲ್ಲಿನ ಹೆಚ್ಚಿನ ರಾಜಕಾರಣಿಗಳ ವಿರುದ್ಧ ವಿವಿಧ ಪ್ರಕಾರದ ದೂರು ದಾಖಲಾಗಿವೆ. ಕೆಲವರು ಜೈಲಿನಿಂದಲೇ ಚುನಾವಣೆಗೆ ಸ್ಪರ್ಧಿಸುತ್ತಾರೆ, ಈ ಪರಿಸ್ಥಿತಿ ಪ್ರಜಾಪ್ರಭುತ್ವಕ್ಕೆ ಮಾರಕವಾಗಿದೆ !