೪ ಶಾಸಕರ ಮನೆ ಮೇಲೆ ದಾಳಿ
ಇಂಫಾಳ (ಮಣಿಪುರ) – ಮಣಿಪುರದಲ್ಲಿ ಹಿಂದೂ ಮತ್ತು ಕ್ರೈಸ್ತ ಹಿಂದುಳಿದವರ್ಗ ಇವರ ನಡುವೆ ಕಳೆದ ಕೆಲವು ವಾರಗಳಿಂದ ನಡೆಯುತ್ತಿರುವ ಹಿಂಸಾಚಾರವು ಮೇ ೨೮ ರಂದು ಮತ್ತೆ ಭುಗಿಲೆದ್ದಿದೆ. ಈ ದಿನ ರಾಜ್ಯದಲ್ಲಿ ನಡೆದ ವಿವಿಧ ಘಟನೆಗಳಲ್ಲಿ ಓರ್ವ ಮಹಿಳೆ ಸೇರಿದಂತೆ ೧೦ ಮಂದಿ ಸಾವನ್ನಪ್ಪಿದ್ದಾರೆ. ಇದರಲ್ಲಿ ಅಸ್ಸಾಂ ಪೊಲೀಸರ ೨ ಕಮಾಂಡೊ ಸೇರಿದ್ದಾರೆ. ರಾಜ್ಯದಲ್ಲಿ ೪೦೦ ಮನೆಗಳಿಗೆ ಬೆಂಕಿ ಹಚ್ಚಿದ ಘಟನೆ ನಡೆದಿದೆ. ಸಿಟ್ಟಿಗೆದ್ದ ಜನಸಮೂಹ ೪ ಶಾಸಕರ ಮನೆಗಳ ಮೇಲೂ ದಾಳಿ ಮಾಡಿದೆ. ಇಂಫಾಳ ಪೂರ್ವ, ಇಂಫಾಳ ಪಶ್ಚಿಮ, ಬಿಷ್ಣುಪುರ್ ಮತ್ತು ಕಕ್ಚಿಂಗ್ ಜಿಲ್ಲೆಗಳಲ್ಲಿ ನಕ್ಸಲೀಯರು ಮತ್ತು ಭದ್ರತಾ ಪಡೆಗಳ ನಡುವೆ ಗುಂಡಿನ ಚಕಮಕಿ ನಡೆದಿದೆ ಎಂದು ವರದಿಯಾಗಿದೆ. ಸೇನಾ ಮುಖ್ಯಸ್ಥ ಮನೋಜ್ ಪಾಂಡೆ ಇವರು ಕಳೆದ ೨ ದಿನಗಳಿಂದ ಮಣಿಪುರದಲ್ಲಿದ್ದಾರೆ. ಭದ್ರತಾ ಪಡೆಗಳ ಎನ್‌ಕೌಂಟರ್‌ನಲ್ಲಿ ಇದುವರೆಗೆ ಸುಮಾರು ೪೦ ನಕ್ಸಲೀಯರು ಹತರಾಗಿದ್ದಾರೆ.
Houses set on fire, forces out after fresh violence in Manipur https://t.co/hs30lZ57Wx
— TOI India (@TOIIndiaNews) May 23, 2023