ಕಾಂಕೇರ (ಛತ್ತೀಸಗಡ) – ಇಲ್ಲಿನ ಆಹಾರ ನಿರೀಕ್ಷಕ ರಾಜೇಶ ವಿಶ್ವಾಸ ಇವರ 1 ಲಕ್ಷ ರೂಪಾಯಿಯ ಮೊಬೈಲ ಇಲ್ಲಿನ ಖೇರಕಟ್ಟಾ-ಪರಲಕೋಟ ಡ್ಯಾಂ ನಲ್ಲಿ ಬಿದ್ದಾಗ ಅದನ್ನು ಹುಡುಕಲು 4 ದಿನಗಳ ವರೆಗೆ ಪಂಪ್ ಮೂಲಕ ನೀರನ್ನು ಹೊರತೆಗೆಯಲಾಯಿತು. ತದನಂತರ ಅವನ ಮೊಬೈಲ ಸಿಕ್ಕಿತು. ಈ ಡ್ಯಾಂ 15 ಅಡಿ ಆಳವಿದೆ. ಅದರಲ್ಲಿ 10 ಅಡಿ ವರೆಗಿನ ನೀರನ್ನು ಹೊರತೆಗೆಯಲಾಯಿತು. ಹೊರತೆಗೆದ ನೀರಿನಿಂದ ನೂರಾರು ಎಕರೆ ಹೊಲಗಳಿಗೆ ನೀರು ಪೂರೈಕೆಯಾಗಬಹುದಾಗಿತ್ತು. ಈ ಸಂದರ್ಭದಲ್ಲಿ ದೂರು ದಾಖಲಿಸಿದ ಬಳಿಕ ರಾಜೇಶ ವಿಶ್ವಾಸನನ್ನು ಅಮಾನತ್ತುಗೊಳಿಸಲಾಗಿದ್ದು, ಈ ಪ್ರಕರಣದ ವಿಚಾರಣೆ ನಡೆಸಲು ಸಮಿತಿಯನ್ನು ರಚಿಸಲಾಗಿದೆ.
Food inspector Rajesh Vishwas has been suspended for pumping out lakhs of litres of water from a dam to recover his mobile phone. pic.twitter.com/10lpTfyZ2Q
— Anshul Saxena (@AskAnshul) May 26, 2023
ಸಂಪಾದಕರ ನಿಲುವುಇಂತಹವರಿಗೆ ಅಮಾನತ್ತಲ್ಲ, ಬಂಧಿಸಿ ಅನೇಕ ದಿನಗಳ ಕಾಲ ನೀರಿಲ್ಲದೇ ಇರುವಂತೆ ಶಿಕ್ಷೆಯನ್ನು ವಿಧಿಸಬೇಕು ! |