ಮೀರತ್ ಪುರಸಭೆಗೆ ಹೊಸದಾಗಿ ಚುನಾಯಿತ ಸದಸ್ಯರ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ‘ವಂದೇ ಮರತಂ’ ಹಾಡು ಮುಸ್ಲಿಂ ಸದಸ್ಯರಿಂದ ವಿರೋಧ

ಎಮ್.ಐ.ಎಮ್. ಮತ್ತು ಭಾಜಪ ಸದಸ್ಯರಲ್ಲಿ ಮಾರಾಮಾರಿ

ಮೇರಠ (ಉತ್ತರಪ್ರದೇಶ) – ಇಲ್ಲಿಯ ಪುರಸಭೆ ಮತ್ತು ನಗರ ಪಂಚಾಯತಿಯ ಹೊಸದಾಗಿ ಚುನಾಯಿತಗೊಂಡ ಸದಸ್ಯರ ಪ್ರಮಾಣವಚನದ ಸಮಾರಂಭದಲ್ಲಿ `ವಂದೇ ಮಾತರಮ್’ ಹಾಡಲು ಮತ್ತು ಆ ಸಮಯದಲ್ಲಿ ಎದ್ದು ನಿಲ್ಲಲು ಎಮ್.ಐ.ಎಮ್. ಸದಸ್ಯರು ವಿರೋಧಿಸಿದರು. ಆ ಸಮಯದಲ್ಲಿ ಭಾಜಪದ ಸದಸ್ಯರು ವಿರೋಧಿಸಿದಾಗ ಇಬ್ಬರ ನಡುವೆ ಮಾರಾಮಾರಿ ನಡೆಯಿತು. ತದನಂತರ ಪೊಲೀಸರು ಹಸ್ತಕ್ಷೇಪ ಮಾಡಿ ಎಲ್ಲರನ್ನೂ ಸಭಾಗೃಹದಿಂದ ಹೊರಗೆ ಕಳಿಸಿದರು. ಇಲ್ಲಿಯ ಚೌಧರಿ ಚರಣಸಿಂಹ ವಿಶ್ವವಿದ್ಯಾಲಯದ ನೇತಾಜಿ ಸುಭಾಷಚಂದ್ರ ಸಭಾಗೃಹದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಪ್ರಮಾಣವಚನ ಸಮಾರಂಭದಲ್ಲಿ ಆಯುಕ್ತ ಜೆ. ಸೆಲ್ವಾ ಕುಮಾರಿ ಮಹಾಪೌರ ಹಾಗೂ ನಗರಸೇವಕರಿಗೆ ಪ್ರಮಾಣವಚನವನ್ನು ಬೋಧಿಸುವವರಿದ್ದರು. ಆ ಸಮಯದಲ್ಲಿ ಎಮ್.ಐ.ಎಮ್. ಸದಸ್ಯರು `ನಾವು ಭಾರತ ಜಿಂದಾಬಾದ ಹೇಳುತ್ತೇವೆ; ಆದರೆ ವಂದೇ ಮಾತರಮ್ ಹೇಳುವುದಿಲ್ಲ. ಇದು ಭಾಜಪ ಕಾರ್ಯಕ್ರಮವಲ್ಲ. ಪುರಸಭೆಯ ಕಾರ್ಯಕ್ರಮವಾಗಿದೆ’ ಎಂದು ಹೇಳಿದರು. ತದನಂತರ ಈ ವಿವಾದ ಪ್ರಾರಂಭವಾಯಿತು.

(ಸೌಜನ್ಯ : ABP NEWS)

ಸಂಪಾದಕರ ನಿಲುವು

* ಕೇಂದ್ರ ಸರಕಾರವು ಈಗ `ವಂದೇ ಮಾತರಮ್’ಗೆ ರಾಷ್ಟ್ರಗೀತೆಯಂತೆ ಸ್ಥಾನಮಾನಯನ್ನು ನೀಡಿ ಅದನ್ನು ಹಾಡುವುದು ಅನಿವಾರ್ಯಗೊಳಿಸುವ ನಿಯಮವನ್ನು ಮಾಡಬೇಕು ಮತ್ತು ಹೇಳದೇ ಇರುವವರ ಮೇಲೆ ದೇಶದ್ರೋಹದ ದೂರನ್ನು ದಾಖಲಿಸಿ ಕಾರಾಗೃಹಕ್ಕೆ ದಬ್ಬುವ ಶಿಕ್ಷೆ ನೀಡಲು ಕಾನೂನಿನಲ್ಲಿ ನಿಬಂಧನೆಗಳನ್ನು ರಚಿಸಬೇಕು ಎಂದೇ ದೇಶಭಕ್ತರಿಗೆ ಅನಿಸುತ್ತದೆ !