ರಾಜ್ಯದಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಂದ ಬಜರಂಗ ದಳ ಮತ್ತು ಭಾಜಪ ಕಾರ್ಯಕರ್ತರ ಮೇಲೆ ಮಾರಣಾಂತಿಕ ಹಲ್ಲೆ !

ಕರ್ನಾಟಕ ರಾಜ್ಯದಲ್ಲಿ ಅಸುರಕ್ಷಿತ ಹಿಂದೂಗಳು

ಬಜರಂಗ ದಳದ ಸ್ಥಳೀಯ ಸಂಚಾಲಕ ಮಹೇಂದ್ರ ಮತ್ತು ಭಾಜಪ ಪ್ರಶಾಂತ ನಾಯಕ

ಪುತ್ತೂರು – ಕಾಂಗ್ರೆಸ್ಸಿನ ಕಾರ್ಯಕರ್ತರು ಬಂಟ್ವಾಳದ ಮಾಣಿ ಗ್ರಾಮದಲ್ಲಿ ಬಜರಂಗ ದಳದ ಸ್ಥಳೀಯ ಸಂಚಾಲಕ ಮಹೇಂದ್ರ ಮತ್ತು ಭಾಜಪ ಪ್ರಶಾಂತ ನಾಯಕ ಇವರ ಮೇಲೆ ಕತ್ತಿಯಿಂದ ಆಕ್ರಮಣ ಮಾಡಿದರು. ಇದರಲ್ಲಿ ಅವರು ಗಂಭೀರವಾಗಿ ಗಾಯಗೊಂಡರು. ಚಿಕಿತ್ಸೆಗಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ರಾಜ್ಯದ ವಿಧಾನಸಭೆ ಚುನಾವಣೆಯ ತೀರ್ಪಿನ ಸಮಯದಲ್ಲಿ ನಡೆದ ಜಗಳವು ಆಕ್ರಮಣದಲ್ಲಿ ಮುಕ್ತಾಯಗೊಂಡಿರುವ ಶಂಕೆಯನ್ನು ವ್ಯಕ್ತಪಡಿಸಲಾಗುತ್ತಿದೆ. ಪೊಲೀಸರು ಈ ಪ್ರಕರಣದಲ್ಲಿ ತನಿಖೆಯನ್ನು ನಡೆಸುತ್ತಿದ್ದಾರೆ.

(ಸೌಜನ್ಯ:Public TV)