ಬಂಗಾಳದಲ್ಲಿ ೩೪ ಸಾವಿರ ಕೇಜಿ ಸ್ಪೋಟಕಗಳ ಸಂಗ್ರಹ ವಶ !

  • ೧೦೦ ಜನರ ಬಂಧನ

  • ಪಟಾಕಿಗಳ ಮೇಲೆ ನಿಷೇಧ !

  • ಕಾನೂನು ಬಾಹಿರ ಪಟಾಕಿಗಳ ನಿರ್ಮಾಣದಿಂದಾದ ಸ್ಫೋಟದಲ್ಲಿ ೧೭ ಜನರು ಸಾವನ್ನಪ್ಪಿರುವುದರಿಂದ ಕ್ರಮ ಕೈಗೊಂಡಿರುವ ಬಂಗಾಳ ಸರಕಾರದ ಪೊಲೀಸರು !

ಕೊಲಕಾತಾ (ಬಂಗಾಳ) – ಬಂಗಾಳ ಪೋಲೀಸರು ರಾಜ್ಯದಲ್ಲಿ ವಿವಿಧ ಸ್ಥಳಗಳಲ್ಲಿ ದಾಳಿ ನಡೆಸಿ ೩೪ ಸಾವಿರ ಕೆಜಿ ಸ್ಪೋಟಕಗಳ ಸಂಗ್ರಹ ಮತ್ತು ಕಾನೂನುಬಾಹಿರ ತಯಾರಿಸುವ ಪಟಾಕಿಗಳನ್ನು ವಶಪಡಿಸಿಕೊಂಡಿದ್ದಾರೆ. ಹಾಗೂ ಈ ಪ್ರಕರಣದಲ್ಲಿ ೧೦೦ ಕ್ಕೂ ಹೆಚ್ಚಿನ ಜನರನ್ನು ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ಒಟ್ಟು ೧೩೨ ದೂರಗಳು ದಾಖಲಿಸಲಾಗಿದೆ. ಪೊಲೀಸರು ಈ ದಾಳಿಯ ನಂತರ ಪಟಾಕಿ ನಿರ್ಮಾಣದ ಮೇಲೆ ನಿಷೇಧ ಹೇರಿದೆ. ಪೊಲೀಸರು ನಡೆಸಿರುವ ದಾಳಿಯ ಸ್ಥಳದಲ್ಲಿ ಕಾನೂನ ಬಾಹಿರವಾಗಿ ಪಟಾಕಿಗಳು ನಿರ್ಮಿಸಲಾಗುತ್ತಿತ್ತು. ಅದಕ್ಕಾಗಿ ಸ್ಪೋಟಕಗಳ ಉಪಯೋಗ ಮಾಡಲಾಗುತ್ತಿತ್ತು. ಕಳೆದ ೮ ದಿನದಲ್ಲಿ ರಾಜ್ಯದ ಅನೇಕ ಸ್ಥಳದಲ್ಲಿ ಕಾನೂನು ಬಾಹಿರ ತಯಾರಿಸಲಾಗುವ ಸಮಯದಲ್ಲಿ ನಡೆದಿರುವ ಸ್ಪೋಟದಿಂದ ಬೆಂಕಿ ಅನಾಹುತ ಘಟಿಸಿದ್ದವು. ಇದರಲ್ಲಿ ೧೭ ಜನರು ಸಾವನ್ನಪ್ಪಿದ್ದರು. ಅದರ ನಂತರ ಪೊಲೀಸರು ಮೇಲಿನ ಕ್ರಮ ಕೈಗೊಂಡರು.

ಸಂಪಾದಕರ ನಿಲುವು

ಕಾನೂನುಬಾಹಿರ ಪಟಾಕಿ ತಯಾರಿಸಲಾಗುತ್ತಿತ್ತು, ಇದು ಪೊಲೀಸರಿಗೆ ಮೊದಲು ತಿಳಿದಿರಲಿಲ್ಲ, ಎಂದು ಯಾರಾದರೂ ನಂಬಬಹುದೇ ? ಭ್ರಷ್ಟಾಚಾರದಿಂದ ಪೊಲೀಸರು ಇದನ್ನು ನಿರ್ಲಕ್ಷಿಸುತ್ತಿದ್ದಾರೆ, ಇದೇ ಇದರಿಂದ ಸ್ಪಷ್ಟವಾಗುತ್ತಿದೆ. ಸಂಬಂಧ ಪಟ್ಟ ಭ್ರಷ್ಟ ಪೊಲೀಸರು ಮತ್ತು ಸರಕಾರಿ ಅಧಿಕಾರಿಗಳ ಮೇಲೆ ಕೂಡ ಕ್ರಮ ಕೈಗೊಳ್ಳುವುದು ಅವಶ್ಯಕವಾಗಿದೆ !