ಭುವನೇಶ್ವರ (ಓರಿಸ್ಸಾ) – ಓರಿಸ್ಸಾ ಸರಕಾರವು ರಾಜ್ಯದ ಶಿವಮಂದಿರದಲ್ಲಿ ಗಾಂಜಾ ಅರ್ಪಿಸುವುದು ಮತ್ತು ಅದರ ಪ್ರಸಾದವನ್ನು ವಿತರಿಸುವುದರ ಮೇಲೆ ನಿರ್ಬಂಧ ಹೇರಿದೆ. ರಾಜ್ಯ ಸರಕಾರದ ಈ ನಿರ್ಣಯದ ಬಳಿಕ ವಿವಾದ ಪ್ರಾರಂಭವಾಗಿದೆ.
1. ಓರಿಯಾ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿ ಇಲಾಖೆಯು ಈ ಸಂದರ್ಭದಲ್ಲಿ ಒಂದು ಸುತ್ತೋಲೆಯನ್ನು ಜಾರಿಗೊಳಿಸಿದೆ. ಆಧ್ಯಾತ್ಮಿಕ ಮುಖಂಡ ಮತ್ತು ಸಮಾಜ ಸುಧಾರಕ ಪದ್ಮಶ್ರೀ ಪುರಸ್ಕೃತ ಬಾಬಾ ಬಲಿಯಾ ಇವರ ಹೇಳಿಕೆಯ ಮೇರೆಗೆ ಇಲಾಖೆಯು ಈ ಕ್ರಮವನ್ನು ಕೈಕೊಂಡಿತ್ತು. ಅನೇಕ ಶಿವಮಂದಿರದ ಪೂಜಾರಿಗಳು ಇದನ್ನು ತಪ್ಪಾಗಿ ಹೇಳಿದ್ದಾರೆ.
2. ಸಾಂಸ್ಕೃತಿಕ ಇಲಾಖೆಯ ಸಚಿವ ಅಶ್ವಿನಿ ಪಾತ್ರಾ ಇವರು, ಭಗವತಿ ದೇವಸ್ಥಾನದಲ್ಲಿ ಯಾವ ರೀತಿ ಪ್ರಾಣಿಗಳ ಬಲಿ ನೀಡುವುದರ ಮೇಲೆ ನಿರ್ಬಂಧ ವಿಧಿಸಲಾಗಿದೆಯೋ, ಅದೇ ರೀತಿ ಗಾಂಜಾ ಮೇಲೆಯೂ ನಿರ್ಬಂಧ ವಿಧಿಸುವ ಆವಶ್ಯಕತೆಯಿದೆಯೆಂದು ಹೇಳಿದ್ದಾರೆ.
Re-Up: Odisha bans ganja in Shiva shrines across state https://t.co/TCuIleW16O
— OTV (@otvnews) May 23, 2023
ಸಂಪಾದಕರ ನಿಲುವುಹಿಂದೂಗಳ ದೇವಸ್ಥಾನಗಳಲ್ಲಿ ಏನಿರಬೇಕು ಮತ್ತು ಏನಿರಬಾರದು ಎನ್ನುವ ವಿಷಯದಲ್ಲಿ ನಿರ್ಣಯಿಸುವ ಅಧಿಕಾರ ಸರಕಾರಕ್ಕೆ ಅಲ್ಲ, ಧರ್ಮಾಚಾರ್ಯರಿಗೆ ಇರಬೇಕು ! |