ಪಾಶ್ಚಾತ್ಯರು ವೇದಗಳಿಂದ ದೊರೆತ ವಿಜ್ಞಾನವನ್ನು ತಮ್ಮ ಹೆಸರುಗಳಿಂದ ಪ್ರಸಾರ ಮಾಡಿದರು !- ‘ಇಸ್ರೋ’ದ ಅಧ್ಯಕ್ಷ ಎಸ್. ಸೋಮನಾಥ

`ಇಸ್ರೋ’ದ ಅಧ್ಯಕ್ಷರಾದ ಎಸ್. ಸೋಮನಾಥರವರ ಗಂಭೀರ ಆರೋಪ

‘ಇಸ್ರೋ’ದ ಅಧ್ಯಕ್ಷ ಎಸ್. ಸೋಮನಾಥ

ಉಜ್ಜಯಿನಿ (ಮಧ್ಯಪ್ರದೇಶ) – ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ)ದ ಅಧ್ಯಕ್ಷರಾದ ಎಸ್. ಸೋಮನಾಥ ರವರು ಬೀಜಗಣಿತ, ವರ್ಗಮೂಲ, ಕಾಲದ ಗಣನೆ, ವಾಸ್ತುಶಿಲ್ಪಶಾಸ್ತ್ರ, ವಿಶ್ವದ ಆಕಾರ, ಧಾತುವಿಜ್ಞಾನ ಹಾಗೂ ವಿಮಾನ ಚಾಲನೆಯನ್ನು ವೇದಗಳ ಮೂಲಕ ಮೊದಲಿಗೆ ಕಲಿಸಲಾಯಿತು. ವೇದಗಳು ವಿಜ್ಞಾನದ ಮೂಲವಾಗಿವೆ; ಆದರೆ ಈ ಜ್ಞಾನವು ಅರಬ ದೇಶಗಳಿಂದ ಪಾಶ್ಚಾತ್ಯ ದೇಶಗಳನ್ನು ತಲುಪಿತು ಮತ್ತು ಅಲ್ಲಿನ ಶಾಸ್ತ್ರಜ್ಞರು ತಮ್ಮ ಹೆಸರುಗಳಿಂದ ಅದರ ಪ್ರಸಾರ ಮಾಡಿದರು, ಎಂಬ ಗಂಭೀರವಾದ ಆರೋಪ ಮಾಡಿದ್ದಾರೆ.

ಎಸ್. ಸೋಮನಾಥ ರವರು ಮಾತನಾಡುತ್ತ,

1. ಸಂಸ್ಕೃತ ಭಾಷೆಯಲ್ಲಿ ವಿವಿಧ ವಿಷಯಗಳ ಜ್ಞಾನವಿತ್ತು ಮತ್ತು ಈ ಭಾಷೆಗೆ ಲಿಪಿ ಇರಲಿಲ್ಲ. ಜನರು ಪರಸ್ಪರರಿಂದ ಜ್ಞಾನ ಪಡೆಯುತ್ತಿದ್ದರು ಮತ್ತು ಗಮನದಲ್ಲಿಡುತ್ತಿದ್ದರು. ಮುಂದೆ ಅವುಗಳನ್ನು ಬರೆಯಲು ದೇವನಾಗರಿ ಲಿಪಿಯನ್ನು ಬಳಸಲಾಯಿತು.

2. ಅಭಿಯಂತರು ಮತ್ತು ವಿಜ್ಞಾನಿಗಳಿಗೆ ಸಂಸ್ಕೃತವು ಬಹಳ ಇಷ್ಟವಾಗುತ್ತದೆ. ಈ ಭಾಷೆಯು ಗಣಕಯಂತ್ರಕ್ಕೆ ಅತ್ಯಂತ ಸುಲಭವಾಗಿದೆ ಮತ್ತು ಅದು ಕೃತಕ ಬುದ್ಧಿವಂತಿಕೆಯನ್ನು ಓದಬಲ್ಲದು. `ಸಂಸ್ಕೃತದ ಬಳಕೆಯನ್ನು ಹೇಗೆ ಗಣನೆಗೆ ತೆಗೆದುಕೊಳ್ಳಬಹುದು ಎಂಬುದರ ಮೇಲೆ ಬಹಳಷ್ಟು ಸಂಶೋಧನೆಗಳು ನಡೆಯುತ್ತಿವೆ.

3. ಭಾರತದಲ್ಲಿ ಸಂಸ್ಕೃತದಲ್ಲಿ ನಿರ್ಮಾಣವಾದ ಸಾಹಿತ್ಯಗಳು ಕೇವಲ ಸಾಹಿತ್ಯಿಕ ದೃಷ್ಟಿಯಿಂದ ಮಾತ್ರವಲ್ಲ, ವೈಜ್ಞಾನಿಕ ದೃಷ್ಟಿಕೋನದಿಂದಲೂ ಮಹತ್ವದ್ಡಾಗಿದೆ. ಸಂಸ್ಕೃತದಲ್ಲಿನ ಸಾಂಸ್ಕೃತಿಕ, ಆಧ್ಯಾತ್ಮಿಕ ಮತ್ತು ವೈಜ್ಞಾನಿಕ ಅಧ್ಯಯನದಲ್ಲಿ ವ್ಯತ್ಯಾಸವಿಲ್ಲ.

4. ಭಾರತೀಯ ವಿಜ್ಞಾನಿಗಳು ತಮ್ಮ ಸಂಶೋಧನೆಗಳನ್ನು ಪ್ರಾಚೀನ ಕಾಲದಿಂದಲೂ ಸಂಸ್ಕೃತದಲ್ಲಿ ಬರೆದಿದ್ದಾರೆ; ಆದರೆ ನಂತರ ಅವುಗಳ ಮೇಲೆ ಬಹಳಷ್ಟು ಸಂಶೋಧನೆ ನಡೆದಿಲ್ಲ. 8 ನೇ ಶತಕದ `ಸೂರ್ಯಸಿದ್ಧಾಂತ’ವು ಇದರ ಒಂದು ಉದಾಹರಣೆಯೇ ಆಗಿದೆ. ಈ ಪುಸ್ತಕದಲ್ಲಿ ಪೃಥ್ವಿಯ ಪರಿಧಿ, ಸೌರವ್ಯೂಹ ಮತ್ತು ಅನೇಕ ಸಂಗತಿಗಳನ್ನು ಬರೆಯಲಾಗಿತ್ತು. ಇದರ ಶ್ರೇಯಸ್ಸನ್ನು ನಂತರ ಪಾಶ್ಚಿಮಾತ್ಯ ಜಗತ್ತು ತಾನೇ ತೆಗೆದುಕೊಂಡಿತು, ಎಂದು ಹೇಳಿದರು.