ಕ್ರೈಸ್ತರಾಗಿರುವ ಕುಕಿ ಭಯೋತ್ಪಾದಕರಿಂದ `ಮೆಯಿತೆಯಿ’ ಈ ಹಿಂದೂ ಸಮಾಜದವರ ಮನೆಗಳು ಬೆಂಕಿಗಾಹುತಿ

ಮಣಿಪುರದಲ್ಲಿ ಪುನಃ ಹಿಂಸಾಚಾರ

ಸಡಿಲಗೊಳಿಸಿದ್ದ ಸಂಚಾರ ನಿರ್ಬಂಧ ಪುನಃ ಜಾರಿ !

ಇಂಫಾಲ (ಮಣಿಪುರ) – ಮಣಿಪುರದಲ್ಲಿ `ಮೆಯಿತೇಯಿ’ ಈ ಹಿಂದೂ ಸಮಾಜಕ್ಕೆ `ಪರಿಶಿಷ್ಟ ಪಂಗಡ’ದ ಸ್ತಾನಮಾನ ನೀಡುವುದರ ವಿರುದ್ಧ ಪ್ರಾರಂಭವಾಗಿರುವ ಹಿಂಸಾಚಾರವು 21 ದಿನಗಳ ಬಳಿಕ ಸಂಚಾರ ನಿರ್ಬಂಧವನ್ನು ಸಡಿಲಗೊಳಿಸಿದಾಗ ಪುನಃ ಭುಗಿಲೆದ್ದಿತು. ಮೇ 24 ರಂದು ಕ್ರೈಸ್ತರಾಗಿರುವ ಕುಕಿ ಭಯೋತ್ಪಾದಕರು ರಾಜ್ಯದ ಬಿಷ್ಣುಪುರ ಜಿಲ್ಲೆಯಲ್ಲಿರುವ ಟ್ರೊಂಗಲಾಬಿಯ ಅನೇಕ ಅಂಗಡಿಗಳು, ಮನೆಗಳು ಮತ್ತು ವಾಹನಗಳಿಗೆ ಬೆಂಕಿ ಹಚ್ಚಿದರು. ಹಾಗೂ ಗುಂಡಿನ ದಾಳಿ ನಡೆಸಿದರು. ಇದರಲ್ಲಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದೂ, 3 ಜನರು ಗಾಯಗೊಂಡಿದ್ದಾರೆ. ಸಡಿಲಗೊಳಿಸಲಾಗಿದ್ದ ಸಂಚಾರ ನಿರ್ಬಂಧವನ್ನು ಪುನಃ ಜಾರಿಗೊಳಿಸಲಾಯಿತು. ಈ ಘಟನೆಯ ಬಳಿಕ ಅಕ್ಕ ಪಕ್ಕದ ಗ್ರಾಮದ 1 ಸಾವಿರ ಮೆಯಿತೆಯಿ ಹಿಂದೂ ಯುವಕರು ಕುಕಿ ಗ್ರಾಮವನ್ನು ಸುಡಲು ಹೋಗುತ್ತಿದ್ದರು; ಆದರೆ `ಆಸ್ಸಾಂ ರೈಫಲ್ಸ’ ಈ ಯುವಕರ ಬೆನ್ನತ್ತಿ ಅವರನ್ನು ತಡೆದರು.

1. ಮೇ 24 ರಂದು ಸಾಯಂಕಾಲ ಅಕಸ್ಮಿಕವಾಗಿ ಒಂದು ಗುಂಪು ನಿಂಗಥೌಖೋಂಗ ನಗರದ ರಾಜ್ಯ ಸಚಿವ ಗೋವಿಂದದಾಸ ಕೊಂಥೌಜಮ ಇವರ ನಿವಾಸದ ಮೇಲೆ ಆಕ್ರಮಣ ನಡೆಸಿದರು. ಹಿಂಸಾತ್ಮಕ ಆಂದೋಲನಕಾರಿಗಳು ಸಚಿವರ ಮನೆಯ ಆಸ್ತಿ-ಪಾಸ್ತಿಗಳ ಹಾನಿ ಮಾಡಿರುವ ಆರೋಪವಿದೆ.

2. ಮಣಿಪುರ ಹಿಂಸಾಚಾರದ ಬಳಿಕ ಈಶಾನ್ಯದ ಇತರೆ ರಾಜ್ಯಗಳಲ್ಲಿಯೂ ಚಿಂತೆ ಹೆಚ್ಚಾಗಿದೆ. ಮಿಝೋರಾಮ ಮುಖ್ಯಮಂತ್ರಿ ಝೊರಮ್ ಥಂಗಾ ಇವರು, ಮಣಿಪುರ ಸಮಸ್ಯೆ ಗಂಭೀರವಾಗಿದೆಯೆಂದು ಹೇಳಿದ್ದಾರೆ.

3. ಕೇಂದ್ರೀಯ ಗೃಹಸಚಿವ ಅಮಿತ ಶಹಾ ಆಸ್ಸಾಂ ಪ್ರವಾಸ ಕೈಕೊಳ್ಳಲಿದ್ದಾರೆ. ಮಣಿಪುರ ವಿಧಾನಸಭೆಯ ಅಧ್ಯಕ್ಷರ ನೇತ್ರತ್ವದಲ್ಲಿ ರಾಜಕೀಯ ಪಕ್ಷದ ಪ್ರತಿನಿಧಿಗಳು ಗೌಹಾಟಿಯಲ್ಲಿ ಅವರನ್ನು ಭೇಟಿಯಾಗಲಿದ್ದಾರೆ.

4. ಕಳೆದ ಕೆಲವು ವಾರಗಳಿಂದ ನಡೆದಿರುವ ಹಿಂಸಾಚಾರದಲ್ಲಿ ಇಲ್ಲಿಯವರೆಗೆ 75 ಜನರು ಸಾವನ್ನಪ್ಪಿದ್ದು, 200 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

5. ಭಾರತೀಯ ಸೈನ್ಯಸಹಿತ ಇತರ ಕೇಂದ್ರೀಯ ಭದ್ರತಾ ಪಡೆ ಮತ್ತು ಸ್ಥಳೀಯ ಪೊಲೀಸ ಪಡೆ ಮಣಿಪುರದ ಪರಿಸ್ಥಿತಿಯನ್ನು ತಿಳಿಗೊಳಿಸಲು ಪ್ರಯತ್ನಿಸುತ್ತಿದ್ದಾರೆ.

(ಸೌಜನ್ಯ : India Today)