18 ವರ್ಷ ಪೂರ್ಣಗೊಂಡ ಯುವಕರು-ಯುವತಿಯರ ಹೆಸರನ್ನು ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೊಳಿಸಲು ಸರಕಾರ ಹೊಸ ಪದ್ಧತಿಯನ್ನು ಜಾರಿಗೊಳಿಸಲಿದೆ ! – ಅಮಿತ ಶಹಾ

ರಿಜಿಸ್ಟ್ರಾರ್ ಜನರಲ್ ಮತ್ತು ಭಾರತದ ಜನಗಣತಿ ಆಯುಕ್ತ ಮೃತುಂಜಯ್ ಕುಮಾರ್ ನಾರಾಯಣ್ ಅವರೊಂದಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ

ನವ ದೆಹಲಿ – 18 ವರ್ಷ ಪೂರ್ಣಗೊಂಡ ಮತದಾರರ ಹೆಸರನ್ನು ಮತದಾರ ಪಟ್ಟಿಯಲ್ಲಿ ಸೇರ್ಪಡೆಗೊಳಿಸುವ ಪ್ರಕ್ರಿಯೆ ಪ್ರಾರಂಭವಾಗಿದೆ. ಈ ಪ್ರಕ್ರಿಯೆ ಸುಲಭವಾಗುವಂತೆ ಕೇಂದ್ರಸರಕಾರವು ಒಂದು ಹೊಸ ಪದ್ಧತಿಯನ್ನು ಜಾರಿಗೊಳಿಸಲಿದೆಯೆಂದು ಕೇಂದ್ರ ಗೃಹಸಚಿವ ಅಮಿತ ಶಹಾ ಇವರು ಹೇಳಿದ್ದಾರೆ. ಶಹಾ ಇವರು ಜನಗಣತಿ ಭವನವನ್ನು ಉದ್ಥಾಟಿಸಿದ ಸಂದರ್ಭದಲ್ಲಿ ಮಾತನಾಡುತ್ತಿದ್ದರು.
ಅಮಿತಶಹಾ ಇವರು ಮಾತನಾಡುತ್ತಾ, ಚುನಾವಣಾ ಆಯೋಗ ಸಂಬಂಧಿಸಿದ ವ್ಯಕ್ತಿಯ ಅನುಮತಿಯೊಂದಿಗೆ ಅವನ ಮತದಾನ ಕಾರ್ಡ ಸಿದ್ಧಗೊಳಿಸಲಿದೆ. ಯಾವುದೇ ವ್ಯಕ್ತಿ ನಿಧನಹೊಂದಿದರೆ ಸಂಬಂಧಿಸಿದ ವ್ಯಕ್ತಿಯ ಹೆಸರನ್ನು ಮತದಾರ ಪಟ್ಟಿಯಿಂದ ತೆಗೆದು ಹಾಕಲಿದೆ ಎಂದು ಹೇಳಿದರು.