ಅಯೋಧ್ಯೆಯ ಶ್ರೀರಾಮಮಂದಿರದ ಮೊದಲ ಹಂತ ಡಿಸೆಂಬರ 30 ರ ವರೆಗೆ ಪೂರ್ಣಗೊಳ್ಳಲಿದೆ ! – ಶ್ರೀರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ

ಅಯೋಧ್ಯೆ (ಉತ್ತರಪ್ರದೇಶ) – ಇಲ್ಲಿಯ ಶ್ರೀರಾಮ ಮಂದಿರ ನಿರ್ಮಾಣದ ಮೊದಲ ಹಂತ ಈ ವರ್ಷ ಡಿಸೆಂಬರ 30 ರ ವರೆಗೆ ಪೂರ್ಣಗೊಳ್ಳಲಿದೆ, ಎಂದು ಶ್ರೀರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟನ ನಿರ್ಮಾಣ ಸಮಿತಿಯ ಅಧ್ಯಕ್ಷ ನೃಪೇಂದ್ರ ಮಿಶ್ರಾ ಇವರು ಹೇಳಿದರು.

ಮಿಶ್ರಾ ತಮ್ಮ ಮಾತನ್ನು ಮುಂದುವರೆಸುತ್ತಾ, ”ಮಂದಿರ ಮೂರು ಹಂತದಲ್ಲಿ ನಿರ್ಮಾಣ ಮಾಡಲಾಗುತ್ತಿದ್ದು, ಮೊದಲ ಹಂತ ಪೂರ್ಣವಾದ ಬಳಿಕ ಭಕ್ತರು ಮಂದಿರದಲ್ಲಿ ಪ್ರವೇಶಿಸಬಹುದು. ಮೊದಲ ಹಂತದ ನೆಲಮಹಡಿಯ ಮೇಲಿನ ಇತರ ಕಾರ್ಯಗಳನ್ನು ಹೊರತುಪಡಿಸಿ 5 ಮಂಟಪಗಳ ನಿರ್ಮಾಣದ ಕಾರ್ಯ ಪೂರ್ಣಗೊಳಿಸಲಾಗುವುದು. ಈ ಎಲ್ಲ ಕೆಲಸಗಳು ಈ ವರ್ಷ ಡಿಸೆಂಬರ 30ರ ವರೆಗೆ ಪೂರ್ಣಗೊಳ್ಳಲಿದೆ. ಮಂದಿರದ ಮೊದಲ ಮತ್ತು ಎರಡನೇಯ ಮಹಡಿಯ ಮೇಲಿನ ನಿರ್ಮಾಣ ಕಾರ್ಯ ಮುಂದಿನ ವರ್ಷ ಡಿಸೆಂಬರ 30ರ ವರೆಗೆ ಪೂರ್ಣಗೊಳ್ಳಲಿದೆ. ಶ್ರೀರಾಮಮಂದಿರದ ನಿರ್ಮಾಣಕ್ಕಾಗಿ 1 ಸಾವಿರದ 400 ಕೋಟಿಯಿಂದ 1 ಸಾವಿರ 800 ಕೋಟಿ ರೂಪಾಯಿಗಳ ವರೆಗೆ ವೆಚ್ಚವಾಗಲಿದೆ” ಎಂದು ಹೇಳಿದ್ದಾರೆ.