ಜೀವನದ ಸಮಸ್ಯೆಗಳಿಂದ ಬಿಡುಗಡೆಹೊಂದಲು 11 ವರ್ಷಗಳ ಹಿಂದೆ ಕ್ರೈಸ್ತ ಧರ್ಮವನ್ನು ಸ್ವೀಕರಿಸಿದ್ದರು !
ಲೋಹರದಗಾ (ಝಾರಖಂಡ) – ಜಿಲ್ಲೆಯ ಮುರ್ಕಿ ತೋಡಾರ ಪಂಚಾಯತ ಕ್ಷೇತ್ರದಲ್ಲಿರುವ ತೋಡಾರ ಮೇನಾ ಟೋಲಿ ಗ್ರಾಮದ 13 ಜನರ ಮೂಲ ಹಿಂದೂ ಕುಟುಂಬವು ಕ್ರೈಸ್ತ ಧರ್ಮವನ್ನು ತ್ಯಜಿಸಿ ಪುನಃ ಹಿಂದೂ ಧರ್ಮದಲ್ಲಿ ಪ್ರವೇಶಿಸಿದರು. ಸಾಧಾರಣ 11 ವರ್ಷದ ಮೊದಲು ಈ ಕುಟುಂಬವು ಓರ್ವ ಪಾದ್ರಿಯ ಹೇಳಿದ್ದರಿಂದ ಕ್ರೈಸ್ತ ಧರ್ಮವನ್ನು ಸ್ವೀಕರಿಸಿದ್ದರು. ಈ ಹಿಂದೂ ಕುಟುಂಬದ ಅನೇಕ ಸದಸ್ಯರು ಯಾವಾಗಲೂ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. `ಈ ತೊಂದರೆಯಿಂದ ಬಿಡುಗಡೆ ಹೊಂದಲು ಕ್ರೈಸ್ತ ಧರ್ಮವನ್ನು ಸ್ವೀಕರಿಸಿರಿ’ ಎಂದು ಪಾದ್ರಿ ಈ ಕುಟುಂಬದವರಿಗೆ ಹೇಳುತ್ತಿದ್ದನು. ಅದರಂತೆ ಅವರು ಕ್ರೈಸ್ತ ಧರ್ಮವನ್ನು ಸ್ವೀಕರಿಸಿದ್ದರು; ಆದರೆ ತದನಂತರವೂ ಕುಟುಂಬದವರ ಜೀವನದ ಸಮಸ್ಯೆಗಳು ಕಡಿಮೆಯಾಗಲಿಲ್ಲ. ಇದು ಗಮನಕ್ಕೆ ಬಂದ ಬಳಿಕ ‘ನಮ್ಮ ಧರ್ಮವೇ ಸರ್ವಶ್ರೇಷ್ಠವಾಗಿದೆ’ ಎನ್ನುವುದು ಕುಟುಂಬದವರಿಗೆ ಅರಿವಾಯಿತು ಮತ್ತು ಅವರು ಘರವಾಪಸಿ ಮಾಡಿದರು.
लोहरदगा में ईसाई धर्म छोड़कर वापस लौटे 13 लोग, धूमधाम से सरना धर्म में की वापसी pic.twitter.com/PCI3oXIvEb
— News18 Jharkhand (@News18Jharkhand) February 2, 2023
ಸಂಪಾದಕೀಯ ನಿಲುವುಜೀವನದ ಕಠಿಣ ಪರಿಸ್ಥಿತಿಗಳು ಅವರವರ ಪ್ರಾರಬ್ಧಕ್ಕೆ ಅನುಸಾರವಾಗಿ ಬರುತ್ತದೆ. ಪರಿಸ್ಥಿತಿಯನ್ನು ಸಹಿಸಲು ಸಾಧ್ಯವಾಗಲು ಅಥವಾ ಅದನ್ನು ಎದುರಿಸುವ ಕ್ಷಮತೆ ನಿರ್ಮಾಣವಾಗಲು ಯೋಗ್ಯ ಸಾಧನೆ ಮಾಡುವುದು ಆವಶ್ಯಕವಾಗಿದೆಯೆಂದು ಹಿಂದೂ ಧರ್ಮ ಹೇಳುತ್ತದೆ. ಇದನ್ನು ಗಮನದಲ್ಲಿಟ್ಟುಕೊಂಡು ಎಲ್ಲ ಹಿಂದೂಗಳು ಸಾಧನೆ ಮಾಡುವುದು ಅವರ ಹಿತದ್ದಾಗಿದೆ ! |