ಲಂಡನ (ಬ್ರಿಟನ್) – ಬ್ರಿಟನ್ನಿನ ಬರ್ಮಿಂಗಹ್ಯಾಂ ನಗರದ ಮಲ್ಟಿಫ್ಲೆಕ್ಸ ಚಲನಚಿತ್ರಮಂದಿರದಲ್ಲಿ ಓರ್ವ ಮುಸಲ್ಮಾನ ಯುವಕನು `ದಿ ಕೇರಳ ಸ್ಟೋರಿ’ ಚಲನಚಿತ್ರ ಪ್ರಸಾರವಾಗುತ್ತಿರುವಾಗ ಅದನ್ನು ವಿರೋಧಿಸುತ್ತಾ ಗದ್ದಲವೆಬ್ಬಿಸಿರುವ ಘಟನೆ ನಡೆದಿದೆ. ಈ ಘಟನೆಯ ಒಂದು ವಿಡಿಯೋ ಸಾಮಾಜಿಕ ಮಾಧ್ಯಮದಿಂದ ಪ್ರಸಾರವಾಗುತ್ತಿದೆ. ಶಕೀಲ ಅಫ್ಸರ ಈ ಯುವಕನ ಹೆಸರಾಗಿದೆ.
1. ಈ ವಿಡಿಯೋದಲ್ಲಿ ಶಕೀಲ `ದಿ ಕೇರಳ ಸ್ಟೋರಿ’ ಚಲನಚಿತ್ರವನ್ನು ಭಾಜಪ ಮತ್ತು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಚಾರವಾಗಿದೆಯೆಂದು ಹೇಳುತ್ತಿರುವುದು ಕಾಣಿಸುತ್ತಿದೆ. ಹಾಗೆಯೇ ಅದು ಭಾರತದ ಪ್ರಧಾನಮಂತ್ರಿ ನರೇಂದ್ರಮೋದಿ ಮತ್ತು ಗೃಹ ಸಚಿವ ಅಮಿತ ಶಹಾರ ವಿಷಯದಲ್ಲಿ ಅವಾಚ್ಯ ಪದಗಳನ್ನು ಉಪಯೋಗಿಸುತ್ತಿರುವುದು ಕಂಡು ಬರುತ್ತದೆ. `ಈ ಚಲನಚಿತ್ರ ಸುಳ್ಳಾಗಿದೆ ನಾವು ಅದನ್ನು ಸಹಿಸುವುದಿಲ್ಲ. ಈ ಚಲನಚಿತ್ರವನ್ನು ನಮ್ಮಲ್ಲಿ ಬಿರುಕು ಮೂಡಿಸಲು ನಿರ್ಮಾಣ ಮಾಡಲಾಗಿದೆ’ ಎಂದು ಅವನು ಹೇಳುತ್ತಿದ್ದಾನೆ.
2. ಶಕೀಲ ಗದ್ದಲ ಮಾಡುತ್ತಿರುವಾಗ ವೀಕ್ಷಕರು ಮೊದಲು ನಿರ್ಲಕ್ಷಿಸಿದರು; ಆದರೆ `ಇದೊಂದು ಮುಸ್ಲಿಂ ವಿಷಯದ ಚಲನಚಿತ್ರವಾಗಿದೆ. ನಿಮಗೆ ಈ ಚಲನಚಿತ್ರವನ್ನು ನೋಡುತ್ತಿರುವಾಗ ಹೇಗೆ ನಾಚಿಕೆಯೆನಿಸುವುದಿಲ್ಲ?’ ಎಂದು ಅವನು ಹೇಳತೊಡಗಿದ ಬಳಿಕ ಪ್ರೇಕ್ಷಕರಿಗೆ ಅವನು ವಿರೋಧಿಸಲು ಪ್ರಾರಂಭಿಸಿದನು.
3. ತದನಂತರ ಈ ಯುವಕನನ್ನು ಚಲನಚಿತ್ರಗೃಹದ ಹೊರಗೆ ಕರೆದೊಯ್ಯಲಾಯಿತು. ಆಗ ಅವನು `ಸ್ವತಂತ್ರ ಕಾಶ್ಮೀರ’ ಎಂದು ಘೋಷಣೆಯನ್ನು ಮಾಡತೊಡಗಿದನು. ಹೊರಗೆ ಹೋಗುವಾಗ ಅವನೊಂದಿಗೆ ಇದ್ದ ಇನ್ನೂ ಕೆಲವು ಯುವಕರು `ದಿ ಕೇರಳ ಸ್ಟೋರಿ’ಯ ಪ್ರದರ್ಶನದ ಸಮಯದಲ್ಲಿ ಗದ್ದಲವನ್ನು ಹಾಕುವವರಿದ್ದರು ಎಂದು ಅವರು ಪ್ರಸಾರ ಮಾಧ್ಯಮದೊಂದಿಗೆ ಹೇಳಿದರು.
On cam: Muslim activists in the UK disrupt screening of ‘The Kerala Story’, bully viewershttps://t.co/YaZRxwlN5Z
— TOI Cities (@TOICitiesNews) May 21, 2023
ಸಂಪಾದಕರ ನಿಲುವು* ಜಗತ್ತಿನ ಎಲ್ಲಿ ಇದ್ದರೂ ಮತಾಂಧರ ನಿಜಸ್ವರೂಪ ಯಾವುದೇ ಮಾಧ್ಯಮದಿಂದ ಬಹಿರಂಗವಾದರೂ, ಮುಸಲ್ಮಾನರಲ್ಲಿರುವ ಕಟ್ಟರತೆಯ ಸಮೂಹ ವಿರೋಧಿಸುತ್ತದೆ ಮತ್ತು ಈ ಸಮಾಜದ ತಥಾಕಥಿತ ಸುಧಾರಣಾವಾದಿ ಮುಸಲ್ಮಾನರು ಆ ವಿಷಯದಲ್ಲಿ ಚಕಾರವನ್ನೂ ಎತ್ತುವುದಿಲ್ಲ ಎನ್ನುವುದನ್ನು ಗಮನಿಸಬೇಕಾಗಿದೆ ! * ಭಾರತದಲ್ಲಿ ಮಾತ್ರವಲ್ಲ ಬ್ರಿಟನ್ ನಲ್ಲಿಯೂ ಲವ್ ಜಿಹಾದ ಪ್ರಕಾರ ಹೆಚ್ಚುತ್ತಿದೆ. ಹೀಗಿರುವಾಗ ಅಲ್ಲಿಯ ಸರಕಾರ ಇಂತಹ ಘಟನೆಗಳನ್ನು ಗಾಂಭೀರ್ಯತೆಯಿಂದ ನೋಡಿ ಸಂಬಂಧಿಸಿದವರ ಮೇಲೆ ಕ್ರಮ ಜರುಗಿಸಿದ ದಿನವೇ ಸುದಿನ ! |