ಸಿದ್ದರಾಮಯ್ಯರವರ ವಿರುದ್ಧ ಬರೆದ ಸರಕಾರಿ ಶಾಲೆಯ ಶಿಕ್ಷಕ ಅಮಾನತು !

ಸಿದ್ದರಾಮಯ್ಯನವರ ಅವಧಿಯಲ್ಲಿ ರಾಜ್ಯದ ಸಾಲ ಅತಿ ಹೆಚ್ಚು ಹೆಚ್ಚಳವಾಗಿದೆ ಎಂಬ ಮಾಹಿತಿ ಬಹಿರಂಗ ಪಡಿಸಿದ್ದರಿಂದ ಕ್ರಮ !

(ಎಡ) ಅಮಾನತುಗೊಂಡ ಶಾಲಾ ಶಿಕ್ಷಕ, (ಬಲ) ಕರ್ನಾಟಕ ರಾಜ್ಯ ಮುಖ್ಯಮಂತ್ರಿ

ಬೆಂಗಳೂರು : ಸಿದ್ದರಾಮಯ್ಯ ವಿರುದ್ಧ ಫೇಸ್ ಬುಕ್ ನಲ್ಲಿ ಬರೆದಿದ್ದ ಚಿತ್ರದುರ್ಗ ಜಿಲ್ಲೆಯ ಕಾನುಬೇನಹಳ್ಳಿಯ ಸರಕಾರಿ ಶಾಲೆಯ ಶಿಕ್ಷಕ ಶಾಂತ ಮೂರ್ತಿ ಅವರನ್ನು ಅಮಾನತು ಮಾಡಲಾಗಿದೆ. ಶಾಂತ ಮೂರ್ತಿ ಅವರು ತಮ್ಮ ಬರಹದಲ್ಲಿ ಸಿದ್ದರಾಮಯ್ಯ ಅವರು ಸಾರ್ವಜನಿಕರಿಗೆ ಎಲ್ಲವನ್ನೂ ಉಚಿತವಾಗಿ ನೀಡುವ ನೀತಿಯನ್ನು ಅಳವಡಿಸಿಕೊಂಡಿದ್ದಾರೆ, ಹೀಗಾಗಿ ರಾಜ್ಯದ ಸಾಲವನ್ನು ಹೆಚ್ಚಿಸಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಅದರಲ್ಲಿ ಅವರು, ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರ ಅವಧಿಯಲ್ಲಿ ಕರ್ನಾಟಕ ರಾಜ್ಯದ ಮೇಲೆ 3,590 ಕೋಟಿ ರೂಪಾಯಿ ಸಾಲ ಇತ್ತು. ನಂತರ ಧರಂ ಸಿಂಗ್ ಸರಕಾರದ ಅವಧಿಯಲ್ಲಿ 15,635 ಕೋಟಿ ರೂಪಾಯಿ ಸಾಲ ಇತ್ತು. ಎಚ್.ಡಿ ಕುಮಾರಸ್ವಾಮಿಯವರ ಕಾಲದಲ್ಲಿ ಅದು ಮತ್ತಷ್ಟು ಬೆಳೆಯಿತು. ನಂತರ ಯಡಿಯೂರಪ್ಪ ಅವರ ಅವಧಿಯಲ್ಲಿ ಇದು ಮತ್ತಷ್ಟು ಏರಿಕೆಯಾಗಿದ್ದು 25 ಸಾವಿರದ 653 ರೂಪಾಯಿ ಸಾಲ ಆಯಿತು. ಅವರ ನಂತರ ಹಲವಾರು ಮುಖ್ಯಮಂತ್ರಿಗಳ ಅವಧಿಯಲ್ಲಿ ಇದು ಬೆಳೆಯಿತು; ಆದರೆ ಸಿದ್ದರಾಮಯ್ಯ ಅವರ ಹಿಂದಿನ ಅವಧಿಯಲ್ಲಿ ಸಾಲದ ಮೊತ್ತ 2 ಲಕ್ಷದ 42 ಸಾವಿರ ಕೋಟಿ ರೂಪಾಯಿಯಷ್ಟು ಪ್ರಚಂಡವಾಗಿ ಹೆಚ್ಚಾಯಿತು. ಹೀಗೆ ಎಲ್ಲವನ್ನೂ ಉಚಿತವಾಗಿ ಕೊಡುವ ಅವರ ನೀತಿಯೇ ಇದಕ್ಕೆ ಕಾರಣ ಎಂದು ಹೇಳಿದ್ದಾರೆ.

(ಸೌಜನ್ಯ – Zee Kannada News)

ಶಾಂತ ಮೂರ್ತಿ ಅವರ ಈ ಹೇಳಿಕೆಯಿಂದಾಗಿ ಚಿತ್ರದುರ್ಗ ಜಿಲ್ಲಾ ನಾಗರಿಕ ವಾರ್ತಾ ಇಲಾಖೆ ಉಪನಿರ್ದೇಶಕ ರವಿಶಂಕರ್ ರೆಡ್ಡಿ ಅವರು ಮೂರ್ತಿ ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.

ಸಂಪಾದಕರ ನಿಲುವು

  • ವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಮಾತನಾಡುವವರು ಈಗ ಏಕೆ ಮೌನವಾಗಿದ್ದಾರೆ ? ಇದರಿಂದ ಸಿದ್ದರಾಮಯ್ಯನವರ ಆಡಳಿತ ಸರ್ವಾಧಿಕಾರದ ಆಡಳಿತ ಎಂಬುದು ಸ್ಪಷ್ಟವಾಗಿದೆ !
  • ವ್ಯಕ್ತಿಸ್ವಾತಂತ್ರ್ಯ ಎಂದು ರಾಜಕಾರಣಿಗಳ ವಿರುದ್ಧ ಯಾರು ಏನು ಮಾತನಾಡಿದರೂ ಆಗುವುದಿಲ್ಲ; ಆದರೆ ಹಿಂದೂಗಳ ದೇವರುಗಳ ವಿರುದ್ಧ ಮಾತನಾಡುವುದು ಮತ್ತು ದೇವರನ್ನು ಅವಮಾನಿಸುವುದು ನಡೆಯುತ್ತದೆ ! ಈ ಚಿತ್ರಣವನ್ನು ಬದಲಾಯಿಸಬೇಕು !