ಮುಸ್ಲಿಂ ಹುಡುಗನ ಜೊತೆ ಸ್ವಂತ ಮಗಳ ಮದುವೆ ರದ್ದುಪಡಿಸಿದ ಭಾಜಪ ನಾಯಕ !

ವಿಹಿಂಪ, ಬಜರಂಗದಳ ಸೇರಿ ಸಮಾಜದ ಜನರು ಮಾಡಿದ ಪ್ರತಿಭಟನೆಯ ಪರಿಣಾಮ !

ಉತ್ತರಾಖಂಡದ ಪೌಡಿ ಪುರಸಭೆಯ ಅಧ್ಯಕ್ಷ ಮತ್ತು ಮಾಜಿ ಶಾಸಕ ಯಶ್ಪಾಲ್ ಬೆನಮ್

ಡೆಹ್ರಾಡೂನ್ (ಉತ್ತರಾಖಂಡ) – ಉತ್ತರಾಖಂಡದ ಮಾಜಿ ಭಾಜಪ ಶಾಸಕ ಮತ್ತು ಪೌರಿ ಮುನ್ಸಿಪಲ್ ಕಾರ್ಪೊರೇಷನ್ ಮುಖ್ಯಸ್ಥ ಯಶಪಾಲ ಬೇನಮ ಅವರು ವಿಹಿಂಪ ಮತ್ತು ಬಜರಂಗದಳದ ಪ್ರತಿಭಟನೆಯ ನಂತರ ಮುಸ್ಲಿಂ ಹುಡುಗನೊಂದಿಗೆ ತಮ್ಮ ಮಗಳ ನಿಶ್ಚಯಿತ ಮದುವೆಯನ್ನು ರದ್ದುಗೊಳಿಸಿದ್ದಾರೆ.

3 ತಿಂಗಳ ಹಿಂದೆ ಬೇನಾಮ ತನ್ನ ಮಗಳ ಮದುವೆಯನ್ನು ಆಕೆಯೊಂದಿಗೆ ಕಾಲೇಜಿನಲ್ಲಿ ಓದುತ್ತಿದ್ದ ಮುಸ್ಲಿಂ ಹುಡುಗನೊಂದಿಗೆ ನಿಶ್ಚಯಿಸಿದ್ದರು. ಮೇ 28ರಂದು ಈ ಮದುವೆ ನಡೆಯಬೇಕಿತ್ತು. ಆಮಂತ್ರಣಗಳನ್ನು ವಿತರಿಸಲಾಗಿತ್ತು, ಮತ್ತು ಮದುವೆಯ ಎಲ್ಲಾ ಸಿದ್ಧತೆಗಳನ್ನು ಮಾಡಲಾಗಿತ್ತು. ಈ ಪ್ರೇಮ ವಿವಾಹದ ಬಗ್ಗೆ ಎಲ್ಲರಿಗೂ ಮುನ್ಸೂಚನೆ ನೀಡಿದ್ದರು. ಈ ವಿವಾಹದ ವಿಚಾರ ತಿಳಿದ ನಂತರ ಸಮಾಜದ ಅನೇಕರು ಈ ಅಂತರ್ ಧರ್ಮೀಯ ವಿವಾಹವನ್ನು ವಿರೋಧಿಸತೊಡಗಿದರು. ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ನೇತೃತ್ವದಲ್ಲಿ ಹಲವರು ನೇರವಾಗಿ ಬೇನಾಂ ಮನೆಗೆ ತೆರಳಿದರು. ಆ ನಂತರ ಸದ್ಯಕ್ಕೆ ಈ ಮದುವೆಯನ್ನು ರದ್ದುಪಡಿಸಿದ್ದಾರೆ.

ರಾಷ್ಟ್ರೀಯ ಸ್ವಯಂ ಸಂಘದ ಹಲವು ಪದಾಧಿಕಾರಿಗಳ ದೂರವಾಣಿ ಕರೆ !

ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಲವು ಪದಾಧಿಕಾರಿಗಳು ದೂರವಾಣಿ ಕರೆ ಮಾಡಿದ್ದಾರೆ ಎಂದೂ ಯಶ್ಪಾಲ್ ಬೇನಮ್ ಹೇಳಿದ್ದಾರೆ.