ತಿರುವನಂತಪುರಂ (ಕೇರಳ) – ತ್ರಾವಣಕೋರ ದೇವಸ್ವಂ ಬೋರ್ಡ್ ಮತ್ತೊಮ್ಮೆ ತನ್ನ ವ್ಯಾಪ್ತಿಗೆ ಬರುವ ದೇವಸ್ಥಾನಗಳಿಗೆ ದೇವಸ್ಥಾನದ ಪರಿಸರದಲ್ಲಿ ರಾಷ್ಟ್ರೀಯ ಸ್ವಯಂ ಸಂಘದ ಶಾಖೆಯನ್ನು ಮತ್ತು ಶಸ್ತ್ರಾಸ್ತ್ರ ಪ್ರಶಿಕ್ಷಣವನ್ನು ಆಯೋಜಿಸಲು ನಿರ್ಬಂಧಿಸಿರುವ ನೊಟೀಸನ್ನು ಹೊರಡಿಸಿದೆ. ಈ ಹಿಂದೆ 2016 ಮತ್ತು 2021 ರಲ್ಲಿ ಬೋರ್ಡ್ ಈ ಸಂದರ್ಭದಲ್ಲಿ ನೊಟೀಸನ್ನು ಹೊರಡಿಸಿ ಆದೇಶಿಸಿತ್ತು; ಆದರೆ ಕೆಲವು ಸ್ಥಳಗಳಲ್ಲಿ ಈ ಆದೇಶವನ್ನು ಪಾಲಿಸಲಾಗಿರಲಿಲ್ಲ. ಇದರಿಂದ ಅಲ್ಲಿಯ ಕೆಲವು ಅಧಿಕಾರಿಗಳ ಮೇಲೆ ಕ್ರಮಕೈಗೊಳ್ಳಲಾಗಿತ್ತು.
1. ಬೋರ್ಡನ ಅಧಿಕಾರಿಗಳು, ಹಿಂದಿನ ನೋಟಿಸಿನ ಪಾಲನೆ ಸರಿಯಾಗಿ ಆಗದೇ ಇದ್ದರಿಂದ ಹೊಸ ನೊಟೀಸನ್ನು ಹೊರಡಿಸಲಾಗಿದೆ. ಇದರಿಂದ ದೇವಸ್ಥಾನದ ಪರಿಸರದಲ್ಲಿ ಸಂಘದಿಂದ ಆಯೋಜಿಸಲಾಗುವ ಶಾಖೆಯನ್ನು ನಿರ್ಬಂಧಿಸಲಾಗಿದೆ ಎಂದು ಹೇಳಿದ್ದಾರೆ.
2. 2016ರಲ್ಲಿ ಆಗಿನ ದೇವಸ್ವಂ ಮಂತ್ರಿ ಕಡಕಂಪಲ್ಲಿ ಸುರೇಂದ್ರನ್ ಇವರು, ಸಂಘದಿಂದ ದೇವಸ್ಥಾನವನ್ನು ಶಸ್ತ್ರಾಸ್ತ್ರಗಳ ಸಂಗ್ರಹಕ್ಕಾಗಿ ಉಪಯೋಗಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಸರಕಾರದಲ್ಲಿ ದೂರುಗಳು ಬಂದಿವೆ’ ಎಂದು ಆರೋಪಿಸಿದ್ದಾರೆ. ತದನಂತರವೇ ಬೋರ್ಡ್ ವತಿಯಿಂದ ನೊಟೀಸನ್ನು ಹೊರಡಿಸಿ ಸಂಘದ ಶಾಖೆಗಳಿಗೆ ದೇವಸ್ಥಾನದ ಪರಿಸರದಲ್ಲಿ ನಿರ್ಬಂಧ ವಿಧಿಸಲಾಗಿದೆಯೆಂದು ಹೇಳಿದ್ದಾರೆ.
Communists ban RSS Shakhas in Kerala templeshttps://t.co/8xO218Uicr
— HinduPost (@hindupost) May 22, 2023
ಸಂಪಾದಕರ ನಿಲುವು* ದೇವಸ್ಥಾನದಲ್ಲಿ ಇಫ್ತಾರ ಔತಣಕೂಟವನ್ನು ಮಾಡಲು ಮಂಡಳೀಯಿಂದ ಅನುಮತಿಯನ್ನು ಹೇಗೆ ನೀಡಲಾಗುತ್ತದೆ ? ಇದು ಹಿಂದೂ ಧರ್ಮವಿರೋಧಿಯಲ್ಲವೇ ? |