ಸೌದಿ ಅರೇಬಿಯಾದಲ್ಲಿ ಮನೆಯ ಬಾಗಿಲಿಗೆ ಹಚ್ಚಿದ ಸ್ವಸ್ತಿಕ ಚಿಹ್ನೆ ನಾಝಿಯ ಚಿಹ್ನೆಯಾಗಿದೆ ಎಂದು ಹೇಳಿ ಹಿಂದೂ ಇಂಜಿನಿಯರ್ ನ ಬಂಧನ ಮತ್ತು ಬಿಡುಗಡೆ !

ರಿಯಾಧ (ಸೌದಿ ಅರೇಬಿಯಾ) – ಸೌದಿ ಅರೇಬಿಯಾದಲ್ಲಿ ಓರ್ವ ಹಿಂದೂ ಇಂಜಿನಿಯರ್ ಗೆ ಮನೆಯ ಬಾಗಿಲಿನ ಮೇಲೆ ಸ್ವಸ್ತಿಕ ಚಿಹ್ನೆಯನ್ನು ಹಚ್ಚಿದ್ದರಿಂದ ಬಂಧಿಸಲಾಗಿದೆ. ಸ್ವಸ್ತಿಕವು ನಾಝಿಯ ಚಿಹ್ನೆ ಎಂದು ತಿಳಿದು ಈ ಘಟನೆ ನಡೆಯಿತು. ಪೊಲೀಸರಿಗೆ ಈ ಸಂದರ್ಭದಲ್ಲಿ ಸ್ಪಷ್ಟವಾಗಿ ತಿಳಿಸಿದ ಬಳಿಕ ಈ ಇಂಜಿನಿಯರ್ ನನ್ನು ಬಿಡುಗಡೆ ಮಾಡಲಾಯಿತು.

ಆಂದ್ರಪ್ರದೇಶದ ಗುಂಟೂರು ನಿವಾಸಿ 45 ವರ್ಷದ ಹಿಂದೂ ಇಂಜಿನಿಯರ್ ನು ಒಂದು ವರ್ಷದಿಂದ ಸೌದಿ ಅರೇಬಿಯಾದಲ್ಲಿ ನೌಕರಿಯನ್ನು ಮಾಡುತ್ತಿದ್ದಾನೆ. ಕೆಲವು ದಿನಗಳ ಹಿಂದೆ ಅವನು ತನ್ನ ಕುಟುಂಬದವರಿಗೆ ಸೌದಿ ಅರೇಬಿಯಾಕ್ಕೆ ಕರೆಸಿದ್ದನು. ಆ ಸಮಯದಲ್ಲಿ ಅವನು ಮನೆಯ ಬಾಗಿಲಿಗೆ ಸ್ವಸ್ತಿಕ ಚಿಹ್ನೆಯನ್ನು ಹಚ್ಚಿದ್ದನು. ಇದರಿಂದ ಪಕ್ಕದಲ್ಲಿ ವಾಸಿಸುತ್ತಿದ್ದ ವ್ಯಕ್ತಿಯು ಪೊಲೀಸರಲ್ಲಿ ದೂರು ನೀಡಿ ತನ್ನ ಜೀವಕ್ಕೆ ಅಪಾಯವಿದೆಯೆಂದು ಹೇಳಿದ್ದನು. ಇದರಿಂದ ಈ ಇಂಜಿನಿಯರ್ ನನ್ನು ಬಂಧಿಸಲಾಗಿತ್ತು. ಪೊಲೀಸರಿಗೆ `ಸ್ವಸ್ತಿಕ ಹಿಂದೂ ಧರ್ಮದ ಚಿಹ್ನೆಯಾಗಿದೆ’ ಎಂದು ಅರಿವು ಮೂಡಿಸಲು ಅಲ್ಲಿಯ ಭಾರತೀಯ ಸಾಮಾಜಿಕ ಕಾರ್ಯಕರ್ತ ಮುಜಮ್ಮಿಲ್ ಶೇಖ ಸಹಾಯ ಮಾಡಿದನು. ತದನಂತರ ಪೊಲೀಸರು ಈ ಇಂಜಿನಿಯರ್ ನನ್ನು ಬಿಡುಗಡೆ ಮಾಡಿದರು.