ಜೈಸಲ್ಮೇರ(ರಾಜಸ್ಥಾನ)ನಲ್ಲಿ ಪಾಕಿಸ್ತಾನಿ ನಿರಾಶ್ರಿತ ಹಿಂದೂಗಳ ಮನೆಗಳನ್ನು ನೆಲಸಮಗೊಳಿಸಿದ ನಂತರ ಈಗ ಆಡಳಿತವು ಅವರಿಗೆ ಪುನರ್ವಸತಿ ಕಲ್ಪಿಸಲಿದೆ !

(ಎಡದಲ್ಲಿ) ಐಎಎಸ್ ಟೀನಾ ದಾಬಿ, ಪಾಕಿಸ್ತಾನಿ ಹಿಂದೂ ನಿರಾಶ್ರಿತರೊಂದಿಗೆ ಅವರ ಭೇಟಿ

ಜೈಸಲ್ಮೇರ (ರಾಜಸ್ಥಾನ) – ಇಲ್ಲಿನ ಅಮರಸಾಗರ ಭಾಗದಲ್ಲಿ ಆಡಳಿತವು ಪಾಕಿಸ್ತಾನಿ ನಿರಾಶ್ರಿತ ಹಿಂದೂಗಳ ೫೦ ಮನೆಗಳನ್ನು ಅಕ್ರಮವೆಂದು ನೆಲಸಮಗೊಳಿಸಿದ್ದನ್ನು ದೇಶಾದ್ಯಂತ ಟೀಕಿಸಲಾಗುತ್ತಿದೆ. ಆದುದರಿಂದ ಈಗ ಜಿಲ್ಲಾಧಿಕಾರಿ ಟೀನಾ ಡಾಬಿಯವರು ಈ ಹಿಂದೂಗಳ ಪುನರ್ವಸತಿ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂಬ ವರದಿಗಳು ಪ್ರಸಾರಿತವಾಗುತ್ತಿವೆ. ಟೀನಾ ಡಾಬಿಯವರ ಆದೇಶದಿಂದ ಈ ಹಿಂದೂಗಳ ಮನೆಗಳನ್ನು ಕೆಡವಲಾಗಿತ್ತು. ಜಿಲ್ಲಾಧಿಕಾರಿ ಟೀನಾ ಡಾಬಿಯವರು ಮನೆಗಳ ವಿರುದ್ಧ ಕ್ರಮ ಕೈಗೊಂಡ ನಂತರ ಸ್ಥಳಾಂತರಗೊಂಡ ಹಿಂದೂಗಳ ಆಹಾರ ಮತ್ತು ನೀರಿನ ವ್ಯವಸ್ಥೆಯನ್ನು ಮಾಡಿದ್ದರು. ಹಾಗೆಯೇ ಅವರ ವಾಸ್ತವ್ಯಕ್ಕೆ ಪರ್ಯಾಯ ವ್ಯವಸ್ಥೆಯನ್ನೂ ಮಾಡಲಾಯಿತ್ತು.

ಪತ್ರಕರ್ತೆ ಸ್ವಾತಿ ಗೋಯಲ ಶರ್ಮಾರವರು ಈ ಕ್ರಮದ ಬಗ್ಗೆ ಒಂದು ವೀಡಿಯೊವನ್ನು ಟ್ವೀಟ್ ಮಾಡಿ `ಈ ನಿರಾಶ್ರಿತ ಹಿಂದೂಗಳ ಮನೆಗಳನ್ನು ಬುಲ್ಡೋಜರಗಳಿಂದ ಕೆಡವಲಾಯಿತು ಮತ್ತು ಒಂದು ಗುಡಿಸಲಿಗೆ ಬೆಂಕಿ ಹಚ್ಚಲಾಗಿದೆ’ ಎಂದು ಹೇಳಿದ್ದಾರೆ. ಅವರ ವೀಡಿಯೊದಲ್ಲಿ ಒಂದು ಗುಡಿಸಲು ಕಾಣಿಸುತ್ತಿದ್ದು ಅದಕ್ಕೆ ಬೆಂಕಿ ಹಚ್ಚಲಾಗಿದೆ. ಬೆಂಕಿಯಿಂದಾಗಿ ಮಹಿಳೆಯರು ಮತ್ತು ಮಕ್ಕಳು ಹೆದರಿರುವುದು ಕಾಣಿಸುತ್ತಿದೆ.

ಸಂಪಾದಕರ ನಿಲುವು

ದೇಶಾದ್ಯಂತ ನಡೆದಂತಹ ಪ್ರತಿಭಟನೆಯಿಂದಾಗಿ ಆಡಳಿತಕ್ಕೆ ಅವರಿಗೆ ಪುನರ್ವಸತಿ ಕಲ್ಪಿಸಬೇಕಾಗಿದೆ, ಎಂಬುದನ್ನು ಗಮಸಿ! ಹಿಂದೂಗಳು ಭಾರತದವರಾಗಲಿ ಅಥವಾ ಪಾಕಿಸ್ತಾನದಿಂದ ಬಂದವರಾಗಿರಲಿ, ಅವರ ಮೇಲೆ ಕ್ರಮಕೈಗೊಳ್ಳಲು ಆಡಳಿತಕ್ಕೆ ಧೈರ್ಯವಾಗಬಾರದು, ಹಿಂದೂಗಳು ಅಂತಹ ಸಂಘಟನೆಯನ್ನು ರಚಿಸುವುದು ಆವಶ್ಯಕವಾಗಿದೆ.