ಚಿಖಲಿಯಲ್ಲಿ (ಜಿಲ್ಲೆ ಬುಲ್ಧಾನ) ಮದುವೆ ಸಮಾರಂಭದಲ್ಲಿ ಶ್ರೀರಾಮನ ಹಾಡು ಹಾಕಿದ್ದರಿಂದ ಮತಾಂಧರಿಂದ ಗಲಭೆ!

  • 13 ಮಂದಿಗೆ ಗಾಯ

  • 15 ಜನರ ಬಂಧನ

ಚಿಖಲಿ (ಬುಲ್ಧಾನ) – ಮೇ 17ರಂದು ಇಲ್ಲಿನ ಮನೆಯೊಂದರಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಡಿಜೆಯಲ್ಲಿ ಭಗವಾನ್ ಶ್ರೀರಾಮನ ಹಾಡು ಹಾಕಲಾಗಿತ್ತು. ಈ ದಿಬ್ಬಣ ಸೈಲಾನಿನಗರ ಪ್ರದೇಶದ ಮೂಲಕ ಹಾದು ಹೋಗುತ್ತಿದ್ದಾಗ, ಮತಾಂಧರು ಹಾಡುವುದನ್ನು ನಿಲ್ಲಿಸುವಂತೆ ಕೇಳಿದರು. ಅದೇ ವೇಳೆಗೆ ಈ ದಿಬ್ಬಣದ ಮೇಲೆ ಮತಾಂಧರು ಕಲ್ಲು ತೂರಾಟ ಆರಂಭಿಸಿದರು. (ಅಂದರೆ ಗಲಭೆ ಪೂರ್ವ ಯೋಜಿತವಾಗಿತ್ತು ಎಂದರ್ಥ. ಗಲಭೆಗೆ ನೆಪ ಹುಡುಕುತ್ತಿರುವ ಮತಾಂಧರನ್ನು ಶಾಶ್ವತವಾಗಿ ಹತ್ತಿಕ್ಕಲು ಸರಕಾರ ಯಾವ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ? – ಸಂಪಾದಕರು)

ಕಲ್ಲು ತೂರಾಟದಲ್ಲಿ ದಿಬ್ಬಣದ 13 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ವೇಳೆ ಪೊಲೀಸರಿಗೆ ಕರೆ ಮಾಡಲಾಗಿತ್ತು. ಗುಂಪು ಚದುರಿಸಲು ಪೊಲೀಸರು ಲಾಠಿ ಪ್ರಹಾರ ಮಾಡಬೇಕಾಯಿತು. ಈ ವೇಳೆ ಮತಾಂಧರು ಡಿ.ಜೆ.ಯನ್ನು ಮುರಿದರು. (ಪೊಲೀಸರು ಕೂಡಲೇ ಆಸ್ಪತ್ರೆ ಮತ್ತು ಡಿಜೆ ವೆಚ್ಚವನ್ನು ಮತಾಂಧರಿಂದ ಪಾವತಿಸಿಕೊಳ್ಳಬೇಕು ! – ಸಂಪಾದಕರು) ಈ ವೇಳೆ ಮತಾಂಧರು ‘ಪಾಕಿಸ್ತಾನ ಜಿಂದಾಬಾದ್’ ಎಂಬ ಘೋಷಣೆಗಳನ್ನು ಕೂಗಿದರು. (ಇಂತಹ ಘೋಷಣೆಗಳನ್ನು ಮಾಡುವವರನ್ನು ದಿವಾಳಿಯಾದ ಪಾಕಿಸ್ತಾನಕ್ಕೆ ಕಳುಹಿಸಬೇಕು ಎಂದು ಯಾರಾದರೂ ಒತ್ತಾಯಿಸಿದರೆ ಆಶ್ಚರ್ಯವಿಲ್ಲ ! – ಸಂಪಾದಕರು)

(ಸೌಜನ್ಯ – Times Now Navbharat)

ಶಿವಸೇನೆಯ ಶಾಸಕ ಸಂಜಯ ಗಾಯಕವಾಡ್ ಇವರು, ‘ಪಾಕಿಸ್ತಾನದ ಘೋಷಣೆಗಳನ್ನು ನೀಡುವ ಆರೋಪಿಗಳನ್ನು ಬಿಡುವುದಿಲ್ಲ’ ಎಂದು ಹೇಳಿದ್ದಾರೆ. ಭಾಜಪ ಶಾಸಕಿ ಶ್ವೇತಾ ಮಹಾಲೆ ಮತ್ತು ಸಂಸದ ಪ್ರತಾಪರಾವ ಜಾಧವ್ ಅವರು ಪ್ರದೇಶಕ್ಕೆ ಭೇಟಿ ನೀಡಿ ಶಾಂತಿ ಕಾಪಾಡುವಂತೆ ನಾಗರಿಕರಲ್ಲಿ ಮನವಿ ಮಾಡಿದರು. ಪೊಲೀಸರು 30 ಜನರ ವಿರುದ್ಧ ಪ್ರಕರಣ ದಾಖಲಿಸಿ 15 ಜನರನ್ನು ಬಂಧಿಸಿದ್ದಾರೆ.

ಸಂಪಾದಕೀಯ ನಿಲುವು

ಹಿಂದೂಗಳಿಗೆ ತಮ್ಮದೇ ದೇಶದಲ್ಲಿ ಶ್ರೀರಾಮನ ಹಾಡು ಹಾಕುವುದು ಎಷ್ಟು ಕಷ್ಟವಾಗಿದೆ ಎಂಬುದನ್ನು ಸರಕಾರ ಯಾವಾಗ ಗಮನಿಸುತ್ತದೆ ? ರಾಜ್ಯದಲ್ಲಿ ಹಿಂದುತ್ವನಿಷ್ಠ ಸರಕಾರ ಇರುವಾಗ ಇಂತಹ ಘಟನೆಗಳು ನಡೆಯುತ್ತವೆ ಇದು ಅಪೇಕ್ಷಿತವಿಲ್ಲ!