ಸರಕಾರಿ ಭೂಮಿಯಲ್ಲಿನ ಅಕ್ರಮ ಧಾರ್ಮಿಕ ಕಟ್ಟಡಗಳನ್ನು ಕೆಡವಲೇ ಬೇಕು ! – ಉತ್ತರಾಖಂಡ ನ್ಯಾಯಾಲಯದ ಹೇಳಿಕೆ

ಮಜಾರ್ ಗಳ ಮೇಲಿನ ಕ್ರಮವನ್ನು ತಡೆಯುವಂತೆ ಮುಸ್ಲಿಮರು ಅರ್ಜಿ ಸಲ್ಲಿಸಿದ್ದರಿಂದ ನ್ಯಾಯಾಲಯದಿಂದ ೧ ಲಕ್ಷ ರೂಪಾಯಿ ದಂಡ !

ಡೆಹ್ರಾಡೂನ್ (ಉತ್ತರಾಖಂಡ) – ಸರಕಾರಿ ಭೂಮಿಯಲ್ಲಿನ ಅಕ್ರಮ ಧಾರ್ಮಿಕ ಕಟ್ಟಡಗಳನ್ನು ನೆಲಸಮಗೊಳಿಸುವುದರ ವಿರುದ್ಧ ರಾಜ್ಯ ಸರಕಾರ ಸಲ್ಲಿಸಿದ ಅರ್ಜಿಯ ವಿಚಾರಣೆಯ ವೇಳೆ ಉತ್ತರಾಖಂಡ ನ್ಯಾಯಾಲಯವು ‘ಅಕ್ರಮ ಕಟ್ಟಡಗಳನ್ನು ನೆಲಸಮ ಮಾಡಬೇಕು’ ಎಂದು ಹೇಳಿದೆ. ಇದರಲ್ಲಿ ಧರ್ಮವನ್ನು ಪರಿಗಣಿಸಬಾರದು. ಇಂತಹ ಅರ್ಜಿ ಸಲ್ಲಿಸುವವರಿಗೆ ಜನಪ್ರಿಯತೆ ಬೇಕೆಂದು ಹೇಳುತ್ತಾ ಅರ್ಜಿದಾರರಿಗೆ ೧ ಲಕ್ಷ ರೂಪಾಯಿಗಳ ದಂಡವನ್ನು ವಿಧಿಸಿದೆ. ಹಮಜಾ ರಾವ್ ಮತ್ತು ಇತರ ಕೆಲವರು ಸೇರಿ ಈ ಅರ್ಜಿಯನ್ನು ಸಲ್ಲಿಸಿದ್ದರು. ಅವರು, ಸರಕಾರ ಒಂದು ವಿಶೇಷ ಧರ್ಮದ ಕಟ್ಟಡಗಳನ್ನು ಕೆಡವುತ್ತಿದೆ. ಈ ಕ್ರಮವನ್ನು ನಿಲ್ಲಿಸಬೇಕು ಮತ್ತು ಕೆಡವಲಾದ ಮಜಾರಿಗಳನ್ನು (ಮುಸ್ಲಿಂ ಫಕೀರರ ಗೋರಿಗಳು) ಮರುನಿರ್ಮಾಣ ಮಾಡಬೇಕು ಎಂದು ಹೇಳಿದ್ದರು.

ಅರ್ಜಿದಾರರ ಪರ ವಕೀಲ ಬಿಲಾಲ್ ಅಹ್ಮದ್ ಅವರು ಇದಕ್ಕು ಮುನ್ನ ಚಂದನ್ ಪೀರ್ ಬಾಬಾನ ಮಜಾರಿ ವಿರುದ್ಧದ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ಈ ಹಿಂದೆ ವಜಾಗೊಳಿಸಿತ್ತು. ಸರಕಾರಿ ಜಾಗದಲ್ಲಿ ಅಕ್ರಮವಾಗಿ ನಿರ್ಮಿಸಿದ್ದ ೩೩೦ ಮಜಾರಿಗಳನ್ನು ಸರಕಾರ ಇದುವರೆಗೆ ನೆಲಸಮಗೊಳಿಸಿದೆ.

ಸಂಪಾದಕರ ನಿಲುವು

  • ಮೊದಲು ಅಕ್ರಮ ನಿರ್ಮಾಣಗಳನ್ನು ಮಾಡುವುದು ಮತ್ತೇ ನ್ಯಾಯಾಲಯದ ಮೊರೆ ಹೋಗಿ ಅವುಗಳ ವಿರುದ್ಧ ಕ್ರಮ ಕೈಗೊಳ್ಳುವುದನ್ನು ತಪ್ಪಿಸಲು ಪ್ರಯತ್ನಿಸುವುದು ಇದು ಮತಾಂಧರ ಮನಸ್ಥಿತಿ ಇದೆ. ಈ ಬಗ್ಗೆಯು ನ್ಯಾಯಾಲಯ ಕಠಿಣ ಕ್ರಮ ಕೈಗೊಳುವುದಾಗಿ ಆದೇಶಿಸಬೇಕು ಎಂದು ಜನರು ಭಾವಿಸುತ್ತಾರೆ !
  • ಸರಕಾರಿ ಭೂಮಿಯ ಮೇಲಿನ ಅತಿಕ್ರಮಣ ಆಗುವವರೆಗೆ ಬೇಜವಾಬ್ದಾರಿತನವಾಗಿ ವರ್ತಿಸಿದ್ದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು !