ಸನಾತನದ ೧೬ ನೇ ಸಂತರಾದ ಪೂ. ದತ್ತಾತ್ರೇಯ ದೇಶಪಾಂಡೆ ಇವರ ದೇಹತ್ಯಾಗ !

ಪೂ. ದತ್ತಾತ್ರೇಯ ದೇಶಪಾಂಡೆ

ದೇವದ (ಪನವೇಲ) – ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಬಗ್ಗೆ ಶರಣಾಗತ ಮತ್ತು ಕೃತಜ್ಞತಾ ಭಾವವಿರುವ, ತತ್ತ್ವನಿಷ್ಠ, ಹಾಗೆಯೇ ಭಗವಂತನ ಅಖಂಡ ಅನುಸಂಧಾನದಲ್ಲಿರುವ ಸನಾತನ ಸಂಸ್ಥೆಯ ೧೬ ನೇ ಸಂತರಾದ ಪೂ. ದತ್ತಾತ್ರೇಯ ದೇಶಪಾಂಡೆ (ವಯಸ್ಸು ೮೮ ವರ್ಷಗಳು) ಇವರು ಮೇ ೭ ರಂದು ಬೆಳಗ್ಗೆ ೧೦.೧೫ ಗಂಟೆಗೆ ಇಲ್ಲಿನ ಸನಾತನದ ಆಶ್ರಮದಲ್ಲಿ ದೇಹತ್ಯಾಗ ಮಾಡಿದರು. ವೃದ್ಧಾಪ್ಯದಿಂದಾಗಿ ಅವರು ಅನಾರೋಗ್ಯಕ್ಕೆ ಒಳಗಾಗಿದ್ದರು. ಅವರು ಪತ್ನಿ ಶ್ರೀಮತಿ ವಿಜಯಾ, ೩ ಪುತ್ರಿಯರು, ೨ ಅಳಿಯಂದಿರು, ೫ ಮೊಮ್ಮಕ್ಕಳು ಮತ್ತು ೧ ಮರಿಮಗ ಇವರನ್ನು ಅಗಲಿದ್ದಾರೆ. ಸನಾತನ ಪರಿವಾರವು ದೇಶಪಾಂಡೆ ಕುಟುಂಬದವರ ದುಃಖದಲ್ಲಿ ಸಹಭಾಗಿಯಾಗಿದೆ. ಚೈತ್ರ ಕೃಷ್ಣ ಚತುರ್ದಶಿ ಅಂದರೆ ೨೦ ಎಪ್ರಿಲ್ ೨೦೧೨ ರಂದು ಅವರು ಸಂತಪದವಿಯಲ್ಲಿ ವಿರಾಜಮಾನರಾಗಿದ್ದರು. ಅವರು ಮೂಲತಃ ಕರ್ನಾಟಕದವರಾಗಿದ್ದು ೨೦೧೩ ರಿಂದ ಇಲ್ಲಿನ ಸನಾತನದ ಆಶ್ರಮದಲ್ಲಿ ಅವರ ವಾಸ್ತವ್ಯವಿತ್ತು.