ಹಿಂದೂ ಮಹಾಸಭಾದಿಂದ ತ್ಯ್ರಂಬಕೇಶ್ವರ ದೇವಾಲಯ ಪ್ರವೇಶದ ಶುದ್ಧೀಕರಣ !

  • ಮುಸ್ಲಿಮರು ಬಲವಂತವಾಗಿ ದೇವಸ್ಥಾನಕ್ಕೆ ಪ್ರವೇಶಿಸಲು ಯತ್ನಿಸಿದ ಪ್ರಕರಣ

  • ಕಾರ್ಮಿಕರು ಗೋಮೂತ್ರ ಸಿಂಪಡಿಸಿದರು, ಜೋರಾಗಿ ಘೋಷಣೆಕೂಗಿದರು !

ನಾಸಿಕ್ – ಮೇ 17 ರಂದು ಹಿಂದೂ ಮಹಾಸಭಾದ ವತಿಯಿಂದ ಜಿಲ್ಲೆಯ ತ್ಯ್ರಂಬಕೇಶ್ವರ ದೇವಾಲಯದ ಪ್ರವೇಶದ್ವಾರವನ್ನು ಗೋಮೂತ್ರವನ್ನು ಸಿಂಪಡಿಸಿ ಶುದ್ಧೀಕರಿಸಿದರು. ಮೇ 15 ರಂದು ಮುಸ್ಲಿಮರು ಬಲವಂತವಾಗಿ ದೇವಸ್ಥಾನ ಪ್ರವೇಶಿಸಲು ಯತ್ನಿಸಿದ್ದರು. ಮುಂದೆ ಇಂತಹ ಪ್ರಯತ್ನ ನಡೆಯದಂತೆ ಶುದ್ಧೀಕರಣ ಮಾಡಿದ್ದೇವೆ ಎಂದು ಹಿಂದೂ ಮಹಾಸಭಾ ಅಧ್ಯಕ್ಷ ಆನಂದ ದವೆ ಹೇಳಿದ್ದಾರೆ.

ತ್ಯ್ರಂಬಕೇಶ್ವರ ದೇವಸ್ಥಾನದಲ್ಲಿ ಅನ್ಯ ಧರ್ಮದವರು ಚಾದರ್ ಅರ್ಪಿಸುವ ಸಂಪ್ರದಾಯವಿಲ್ಲ !

ಬೆಳಗ್ಗೆ 11 ಗಂಟೆಗೆ ಹಿಂದೂ ಮಹಾಸಭಾ ಕಾರ್ಯಕರ್ತರು ದೇವಸ್ಥಾನದ ಪ್ರವೇಶ ದ್ವಾರದ ಮುಂದೆ ಸೇರಿ ಗೋಮೂತ್ರ ಸಿಂಪಡಿಸಿ ಪ್ರವೇಶ ದ್ವಾರವನ್ನು ಶುದ್ಧೀಕರಿಸಿದರು. ಈ ವೇಳೆ ಕಾರ್ಯಕರ್ತರು ಅಬ್ಬರದ ಘೋಷಣೆ ಕೂಗಿದರು. ಬಳಿಕ ಹಿಂದೂ ಸಂಘಟನೆಗಳ ಪರವಾಗಿ ಪೊಲೀಸರು ಹಾಗೂ ದೇವಸ್ಥಾನದ ಆಡಳಿತ ಮಂಡಳಿಗೆ ಮನವಿ ನೀಡಿ, ಈ ಪ್ರಕರಣದಲ್ಲಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.

ಈ ಬಗ್ಗೆ ಆನಂದ್ ದವೆಯವರು, ಕೆಲವರು ಬಲವಂತವಾಗಿ ದೇವಸ್ಥಾನದೊಳಗೆ ಪ್ರವೇಶಿಸಲು ಯತ್ನಿಸಿದರು. ಅವರಿಗೆ ಉತ್ತರ ನೀಡಲು ನಾಸಿಕ್ ನ ಜನ ಸಾಕು; ಆದರೆ ಇಂದು ರಾಜ್ಯಾದ್ಯಂತ ಕಾರ್ಯಕರ್ತರು ಆಗಮಿಸಿ ಬೆಂಬಲ ಸೂಚಿಸಿದ್ದಾರೆ. ಭಾರತದ ರಾಷ್ಟ್ರಗೀತೆಯನ್ನು ತಿರಸ್ಕರಿಸಿದವರು ತ್ಯ್ರಂಬಕೇಶ್ವರ ದೇವಸ್ಥಾನವನ್ನು ಬಲವಂತವಾಗಿ ಪ್ರವೇಶಿಸಲು ಪ್ರಯತ್ನಿಸಿದರು. ಅದಕ್ಕಾಗಿಯೇ ಗೋಮೂತ್ರ ಸಿಂಪಡಿಸಿ ಶುದ್ಧಿ ಮಾಡಿದ್ದೇವೆ. ತ್ಯ್ರಂಬಕೇಶ್ವರ ಜ್ಯೋತಿರ್ಲಿಂಗವು ಎಲ್ಲರ ಶ್ರದ್ಧಾಸ್ಥಾನವಾಗಿದೆ. ಎಲ್ಲರೂ ಇಲ್ಲಿ ದರ್ಶನಕ್ಕೆ ಬರುತ್ತಾರೆ; ಆದರೆ, ಈ ದೇವಸ್ಥಾನದಲ್ಲಿ ಅನ್ಯ ಧರ್ಮದವರು ಚಾದರ್ ಅರ್ಪಿಸುವ ಸಂಪ್ರದಾಯವಿಲ್ಲ ಎಂದು ಹೇಳಿದರು.

ಉರುಸ್ ಆಯೋಜಕರ ವಿರುದ್ಧ ಅಪರಾಧ ದಾಖಲು !

ಈ ಕುರಿತು ತನಿಖೆ ನಡೆಸಲು ರಾಜ್ಯ ಗೃಹ ಸಚಿವ ದೇವೇಂದ್ರ ಫಡ್ನವೀಸ್ ಅವರು ‘ಎಸ್‌ಐಟಿ’ ರಚನೆಗೆ ಆದೇಶಿಸಿದ್ದು, ಇದುವರೆಗೆ 4 ಉರೋಸ್ ಆಯೋಜಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.