|
ಜಾಮತಾಡಾ (ಝಾರಖಂಡ) – ನಾನು ಪ್ರತಿಯೊಂದು ಸ್ಥಳದಲ್ಲಿ `ಜೈ ಬಜರಂಗಬಲಿ’ ಎಂದು ಯಾವಾಗಲೂ ಘೋಷಣೆ ಕೂಗುತ್ತೇನೆ. ಒಂದು ವೇಳೆ ಬಾಗೇಶ್ವರ ಬಾಬಾ (ಪಂಡಿತ ಧೀರೇಂದ್ರಕೃಷ್ಣ ಶಾಸ್ತ್ರಿ)ರವರು ನಿಜವಾಗಿದ್ದರೆ, ಅವರು ಎಲ್ಲ ಧರ್ಮವನ್ನು ಗೌರವಿಸಬೇಕು. ಅವರ ವ್ಯಾಸಪೀಠದಿಂದ `ಅಲ್ಲಾಹು ಅಕಬರ’ನ ಘೋಷಣೆ ನೀಡಬೇಕು ಎಂದು ಇಲ್ಲಿನ ಕಾಂಗ್ರೆಸ್ಸಿನಿಂದ ಅಮಾನತ್ತುಗೊಂಡಿರುವ ಶಾಸಕ ಇರ್ಫಾನ ಅನ್ಸಾರಿಯವರು ಒಂದು ವಾರ್ತಾವಾಹಿನಿಯೊಂದಿಗೆ ಮಾತನಾಡುವಾಗ ಕರೆ ನೀಡಿದರು. ಹಾಗೆಯೇ ಅನ್ಸಾರಿಯವರು, ಧೀರೇಂದ್ರಕೃಷ್ಣ ಶಾಸ್ತ್ರಿಯವರು ಒಂದು ವಿಶೇಷ ಪಕ್ಷದ ಪ್ರಚಾರ ಮಾಡುತ್ತಿದ್ದಾರೆ, ಇದು ಸರಿಯಲ್ಲ. ಎಂದು ಆರೋಪಿಸಿದರು.
Breaking News: बाबा बागेश्वर पर कांग्रेस विधायक इरफान अंसारी का बयान – बोले ‘सभी धर्मों का सम्मान करें बाबा, मंच पर अल्लाह हू अकबर का नारा लगाएं’#DhirendraKrishnaShastri #BageshwarDhamSarkar #BageshwarBaba #Patna @ramm_sharma pic.twitter.com/Bix7fIuoGL
— Zee News (@ZeeNews) May 16, 2023
1. ಸದ್ಯಕ್ಕೆ ಬಾಗೇಶ್ವರ ಧಾಮದ ಪಂಡಿತ ಧೀರೇಂದ್ರಕೃಷ್ಣ ಶಾಸ್ತ್ರಿಯವರು ಬಿಹಾರ ಪ್ರವಾಸದಲ್ಲಿದ್ದು, ಅವರ ಜನರಿಂದ ದೊಡ್ಡ ಪ್ರಮಾಣದಲ್ಲಿ ಸ್ವಾಗತ ಮಾಡಲಾಗುತ್ತಿದೆ. ಅವರ ಪ್ರವಚನಗಳಿಗೆ 6 ಲಕ್ಷಕ್ಕಿಂತ ಅಧಿಕ ಭಕ್ತರು ಭಾಗವಹಿಸುತ್ತಾರೆ. ಈ ಸಂದರ್ಭದಲ್ಲಿ ಭಾಜಪ ಕೇಂದ್ರ ಸಚಿವ, ಸಾಂಸದರು, ಶಾಸಕರು ಮತ್ತು ಪದಾಧಿಕಾರಿಗಳು ಕೂಡ ಉಪಸ್ಥಿತರಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಶಾಸಕ ಅನ್ಸಾರಿಯವರು ಮೇಲಿನಂತೆ ಕರೆ ನೀಡಿದ್ದಾರೆ.
2. ಇರ್ಫಾನ ಅನ್ಸಾರಿಯವರು ತಮ್ಮನ್ನು ಹನುಮಾನ ಭಕ್ತನೆಂದು ಹೇಳಿಕೊಳ್ಳುತ್ತಾರೆ. ಅವರು ಈ ಹಿಂದೆ `ನಾನು ಜಾಮತಾಡದಲ್ಲಿ ದೇಶದ ಎಲ್ಲಕ್ಕಿಂತ ಭವ್ಯವಾದ ಹನುಮಾನ ದೇವಸ್ಥಾನವನ್ನು ನಿರ್ಮಿಸಲಿದ್ದೇನೆ. ಇದಕ್ಕಾಗಿ ನನಗೆ ನನ್ನ ಮೂತ್ರಪಿಂಡವನ್ನು ಮಾರಬೇಕಾಗಿ ಬಂದರೂ, ನಾನು ಅದನ್ನು ಮಾರುತ್ತೇನೆ’ ಎಂದು ಹೇಳಿದ್ದಾರೆ.
3. ಇರ್ಫಾನ ಅನ್ಸಾರಿಯವರು ಮಾತನಾಡುತ್ತಾ, ಭಗವಾನ ಹನುಮಾನ ನನ್ನ ಕನಸಿನಲ್ಲಿ ಬಂದಿದ್ದರು ಮತ್ತು ನಾನು ಅವನಿಗೆ ಕರ್ನಾಟಕದಲ್ಲಿ ಕಾಂಗ್ರೆಸ್ಸಿಗೆ ಜಯ ಸಿಗಬೇಕು ಎಂದು ಪ್ರಾರ್ಥಿಸಿದ್ದೆನು; ನನ್ನ ಪ್ರಾರ್ಥನೆ ಪೂರ್ಣವಾಗಿರುವುದರಿಂದ ಹನುಮನ ಮೇಲಿನ ನನ್ನ ಶ್ರದ್ಧೆ ಮತ್ತಷ್ಟು ಹೆಚ್ಚಾಗಿದೆಯೆಂದು ಹೇಳಿದರು.
(ಅಲ್ಲಾಹು ಅಕಬರ ಎಂದರೆ ಅಲ್ಲಾ ಶ್ರೇಷ್ಠನಾಗಿದ್ದಾನೆ)
(ಸೌಜನ್ಯ: Zee News)
ಸಂಪಾದಕರ ನಿಲುವು
|