ಹಣ ಹೂಡಿ ಅಥವಾ ಹೂಡದೆ ಆನ್ ಲೈನ್ `ರಮಿ’ ಆಡುವುದು ಜೂಜಾಟವಲ್ಲ ! – ಕರ್ನಾಟಕ ಉಚ್ಚ ನ್ಯಾಯಾಲಯ

ಬೆಂಗಳೂರು – ಇಸ್ಪೀಟು ಎಲೆಗಳ `ರಮಿ’ ಈ ಆಟದಲ್ಲಿ ಹಣವನ್ನು ಹೂಡಿದರೆ ಅಥವಾ ಹೂಡದಿದ್ದರೂ ಈ ರಮಿ ಕೌಶಲ್ಯದ ಆಟವಾಗಿದೆ. ಅವಕಾಶದ ಆಟವಲ್ಲ. ಆದ್ದರಿಂದ ಈ ಆಟವನ್ನು ಜೂಜಾಟವೆನ್ನಲು ಸಾಧ್ಯವಿಲ್ಲವೆಂದು ಕರ್ನಾಟಕ ಉಚ್ಚ ನ್ಯಾಯಾಲಯ ಹೇಳಿದೆ. ಆನ್ ಲೈನ್ ಆಟದ ಸಂದರ್ಭದಲ್ಲಿ `ಗೇಮ್ಸ ಕ್ರಾಫ್ಟ್’ ಈ ಕಂಪನಿಯು `ಗೂಡ್ಸ್ ಅಂಡ್ ಸರ್ವಿಸ್ ಟ್ಯಾಕ್ಸ್ ವಿಜಿಲೆನ್ಸ ಡೈರೆಕ್ಟರ ಜನರಲ್’ ಇವರು ಜಾರಿಗೊಳಿಸಿದ 21 ಸಾವಿರ ಕೋಟಿ ರೂಪಾಯಿಗಳ ಒಪ್ಪಂದದ ಸಂದರ್ಭದ ನೊಟೀಸಿಗೆ ನ್ಯಾಯಾಲಯ ಮೇಲಿನಂತೆ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ. ಹಾಗೆಯೇ ನೊಟೀಸ್ ಗೆ ಸ್ಥಗಿತ ಆದೇಶವನ್ನು ನೀಡಿ ಕಾರಣ ಕೇಳುವ ನೊಟೀಸನ್ನು ಕೂಡ ರದ್ದುಗೊಳಿಸಿದೆ. `ಗೇಮಕ್ರಾಫ್ಟ’ ಈ ಆನ್ ಲೈನ್ ಮೊಬೈಲ ಗೇಮ್ಸ ತಯಾರಿಸುವ ಕಂಪನಿಗೆ ಸಪ್ಟೆಂಬರ 8, 2022 ರಂದು ಸರಕು ಮತ್ತು ಸೇವಾ ತೆರಿಗೆ (ಜಿಎಸ್.ಟಿ) ಅಧಿಕಾರಿಗಳು ಒಂದು ನೊಟೀಸು ಕಳುಹಿಸಿದ್ದರು. ಇದರಲ್ಲಿ 21 ಸಾವಿರ ಕೋಟಿ ರೂಪಾಯಿಗಳ ಬೇಡಿಕೆ ಮಾಡಲಾಗಿತ್ತು. ಈ ನೊಟೀಸ್ ಗೆ ನ್ಯಾಯಾಲಯವು ಉಚ್ಚ ನ್ಯಾಯಾಲಯದಲ್ಲಿ ಮರುಅರ್ಜಿ ಸಲ್ಲಿಸಿದ್ದರು. ಕಂಪನಿಯು ನ್ಯಾಯಾಲಯದಲ್ಲಿ, ಹಣವನ್ನು ಹೂಡಿಕೆ ಮಾಡಿದ್ದರೂ ಕೌಶಲ್ಯದಿಂದ ಆಡುವ ಈ ಆಟಕ್ಕೆ ಜೂಜಾಟವೆಂದು ಹೇಳಲು ಸಾಧ್ಯವಾಗುವುದಿಲ್ಲ; ಕಾರಣ ಈ ಆಟ ಕೌಶಲ್ಯದ ಆಟವಾಗಿದೆಯೆಂದು ಹೇಳಿದ್ದಾರೆ.