ಕರೀಮನಗರ (ತೆಲಂಗಾಣ) – ನಾವು ಅಸ್ಸಾಂನಲ್ಲಿ ಇದುವರೆಗೆ ೬೦೦ ಮದರಸಾಗಳನ್ನು ಮುಚ್ಚಿದ್ದೇವೆ. ಈ ವರ್ಷ ಇನ್ನೂ ೩೦೦ ಮದರಸಾಗಳನ್ನು ಮುಚ್ಚುತ್ತೇವೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಸರಮಾ ಅವರು ಹೇಳಿದ್ದಾರೆ. ಕರೀಂಮನಗರದಲ್ಲಿ ನಡೆದ ಸಭೆಯೊಂದರಲ್ಲಿ ಮಾತನಾಡುತ್ತಿದ್ದರು. ನಮಗೆ ಮದರಸಾಗಳು ಬೇಡ, ಶಾಲೆಗಳು, ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳು ಬೇಕು. ‘ಅಸ್ಸಾಂನಲ್ಲಿ ಲವ್ ಜಿಹಾದ್ ತಡೆಗಟ್ಟಲು ನಾವು ಶ್ರಮಿಸುತ್ತಿದ್ದೇವೆ’, ಎಂದು ಅವರು ಹೇಳಿದರು.
ಇನ್ನೂ 300 ಮದ್ರಸಾ ಬಂದ್ ಆಗುತ್ತೆ: ತೆಲಂಗಾಣದಲ್ಲೇ ಅಸಾದುದ್ದೀನ್ ಓವೈಸಿಗೆ ಸವಾಲು ಹಾಕಿದ ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ#assam #madrassa #madrasah #AsaduddinOwaisi #HimantaBiswaSarma #telangana #india #KannadaNewshttps://t.co/Y183psqf9E@himantabiswa
— Asianet Suvarna News (@AsianetNewsSN) May 15, 2023
ಜನವರಿ ೨೦೨೩ ರಲ್ಲಿ, ಮುಖ್ಯಮಂತ್ರಿ ಸರಮಾ ಅವರು, ರಾಜ್ಯದಲ್ಲಿ ಮದರಸಾಗಳ ಸಂಖ್ಯೆಯನ್ನು ಕಡಿಮೆ ಮಾಡಬೇಕಿದೆ. ನಾವು ಮದರಸಾಗಳಲ್ಲಿ ಸಾಮಾನ್ಯ ಶಿಕ್ಷಣವನ್ನು ನೀಡಲು ಮತ್ತು ಮದರಸಾಗಳಲ್ಲಿ ನೋಂದಣಿ ವ್ಯವಸ್ಥೆಯನ್ನು ಪ್ರಾರಂಭಿಸಲು ಬಯಸುತ್ತೇವೆ. ಇದಕ್ಕಾಗಿ ನಾವು ಅಲ್ಪಸಂಖ್ಯಾತ ಸಮುದಾಯದೊಂದಿಗೆ ಕೆಲಸ ಮಾಡುತ್ತಿದ್ದು, ಅಲ್ಪಸಂಖ್ಯಾತ ಸಮುದಾಯವೂ ನಮಗೆ ಸಹಾಯ ಮಾಡುತ್ತಿದೆ ಎಂದು ಹೇಳಿದ್ದರು. ಈ ಹಿಂದೆ, ಕರ್ನಾಟಕದ ಬೆಳಗಾವಿಯಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಸರಮಾ ಅವರು, ‘ಬಾಂಗ್ಲಾದೇಶಿಗಳು ಅಸ್ಸಾಂಗೆ ಬಂದು ನಮ್ಮ ನಾಗರಿಕತೆ, ಸಂಸ್ಕೃತಿಗೆ ಧಕ್ಕೆ ತರುತ್ತಿದ್ದಾರೆ’, ಎಂದು ಹೇಳಿದ್ದರು.
ಸಂಪಾದಕೀಯ ನಿಲುವುಭಾಜಪ ಆಡಳಿತವಿರುವ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳು ಇಂತಹ ನೀತಿಯನ್ನು ಅಳವಡಿಸಿಕೊಳ್ಳಬೇಕು ! |