ಕೆಟ್ಟ ಶಕ್ತಿಗಳ ತೊಂದರೆಗಳಿಂದ ರಕ್ಷಣೆಯಾಗಲು, ಆಸ್ಪತ್ರೆಯ ರೋಗಿಗಳು, ರೋಗಿಗಳ ಸಂಬಂಧಿಕರು, ಆಧುನಿಕ ವೈದ್ಯರು, ದಾದಿಯವರೆಲ್ಲ ಆದಷ್ಟು ಹೆಚ್ಚು ನಾಮಜಪ ಮಾಡಿ

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

‘ಆಸ್ಪತ್ರೆಗಳಲ್ಲಿ ವಿವಿಧ ಕಾರಣಗಳಿಂದ ರೋಗಿಗಳು ಸಾವನ್ನಪ್ಪುತ್ತಾರೆ, ಉದಾ. ಅಪಘಾತಕ್ಕೀಡಾದ ವ್ಯಕ್ತಿಗಳು, ದೀರ್ಘಕಾಲ ಕಾಯಿಲೆಯಿಂದ ಬಳಲುವ ರೋಗಿಗಳು, ದುರ್ಮರಣವಾದವರು; ಹಾಗೆಯೇ ಚಿಕ್ಕ ಮಕ್ಕಳು ಮುಂತಾದವರು. ಮೃತ್ಯುವಿನ ನಂತರ ಪ್ರತಿಯೊಬ್ಬರಿಗೂ ಕೂಡಲೇ ಮುಂದಿನಗತಿ ಸಿಗುತ್ತದೆ, ಎಂದೇನಿಲ್ಲ. ಅವುಗಳಲ್ಲಿನ ಅತೃಪ್ತ ಲಿಂಗದೇಹಗಳು ಅಥವಾ ಕೆಟ್ಟ ಲಿಂಗದೇಹಗಳು ಆಸ್ಪತ್ರೆಯಲ್ಲಿನ ಆಧುನಿಕ ವೈದ್ಯರಿಗೆ (ಡಾಕ್ಟರರು), ದಾದಿಯರಿಗೆ, ಸ್ವಚ್ಛತಾ ಸಿಬ್ಬಂದಿಗಳಿಗೆ, ಚಿಕಿತ್ಸೆಗಾಗಿ ಬಂದ ರೋಗಿಗಳಿಗೆ ಮತ್ತು ಅವರ ಕುಟುಂಬದವರಿಗೆ ಹೀಗೆ ಅಲ್ಲಿರುವವರಿಗೆಲ್ಲ ತೊಂದರೆ ನೀಡಬಹುದು. ಆಸ್ಪತ್ರೆಯಲ್ಲಿ ವಿವಿಧ ಕಾಯಿಲೆಗಳಿಂದ ಪೀಡಿತ ರೋಗಿಗಳಿಂದಾಗಿ ಎಲ್ಲರೂ ಅಲ್ಲಿನ ವಾತಾವರಣದಲ್ಲಿ ಅಸ್ವಸ್ಥತೆ, ಒತ್ತಡ ಅನುಭವಿಸುತ್ತಿರುತ್ತಾರೆ.

‘ಕೆಟ್ಟ ಶಕ್ತಿಗಳಿಂದ ರಕ್ಷಣೆಯಾಗಲು ‘ಭಗವಂತನ ನಾಮಸ್ಮರಣೆ ಮಾಡುವುದು, ಎಲ್ಲಕ್ಕಿಂತ ಹೆಚ್ಚು ಪರಿಣಾಮಕಾರಿ ಉಪಾಯವಾಗಿದೆ, ಎಂದು ಸನಾತನ ಧರ್ಮದಲ್ಲಿ ಮತ್ತು ಅನೇಕ ಸಂತರೂ ಹೇಳಿದ್ದಾರೆ. ಆದುದರಿಂದ ಆಧುನಿಕ ವೈದ್ಯರು, ದಾದಿಗಳು, ಸ್ವಚ್ಛತಾ ಸಿಬ್ಬಂದಿ ಮತ್ತು ರೋಗಿಗಳ ಸಂಬಂಧಿಕರು ಆಸ್ಪತ್ರೆಯಲ್ಲಿರುವಾಗ ಹೆಚ್ಚೆಚ್ಚು ನಾಮಜಪ  ಮಾಡಬೇಕು. ಅದರ ಲಾಭ  ಚಿಕಿತ್ಸೆಗಾಗಿ ಬಂದ ರೋಗಿಗಳಿಗೂ ತಾನಾಗಿಯೇ ಸಿಗುತ್ತದೆ. ಆಸ್ಪತ್ರೆಯಲ್ಲಿರುವ ಇತರ ಜನರು ರೋಗಿಗಳಿಗೆ ನಾಮಜಪ ಮಾಡಲು ನೆನಪು ಮಾಡಿ ಕೊಡ ಬೇಕು. ನಾಮಸ್ಮರಣೆಯಿಂದ ಮನೋಬಲ ಹೆಚ್ಚಾಗುತ್ತದೆ, ಮನಃಶಾಂತಿ ಸಿಗುತ್ತದೆ ಮತ್ತು ಜೀವನ ಆನಂದಮಯವಾಗಲು ಸಹಾಯವಾಗುತ್ತದೆ. – ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ (೧೦.೨.೨೦೨೩)

*ಕೆಟ್ಟ ಶಕ್ತಿ: ವಾತಾವರಣದಲ್ಲಿ ಉತ್ತಮ ಹಾಗೂ ಕೆಟ್ಟ ಎರಡೂ ಶಕ್ತಿಗಳು ಕಾರ್ಯನಿರತವಾಗಿರುತ್ತವೆ. ಒಳ್ಳೆಯ ಶಕ್ತಿ ಒಳ್ಳೆಯ ಕಾರ್ಯಕ್ಕಾಗಿ ಮಾನವನಿಗೆ ಸಹಾಯ ಮಾಡುತ್ತವೆ ಹಾಗೂ ಕೆಟ್ಟ ಶಕ್ತಿಗಳು ಅವನಿಗೆ ತೊಂದರೆ ಕೊಡುತ್ತವೆ. ಹಿಂದಿನ ಕಾಲದಲ್ಲಿ ಋಷಿಮುನಿಗಳ ಯಜ್ಞಗಳಲ್ಲಿ ರಾಕ್ಷಸರು ವಿಘ್ನಗಳನ್ನು ತಂದಿರುವ ಅನೇಕ ಕಥೆಗಳು ವೇದ -ಪುರಾಣಗಳಲ್ಲಿ ಇರುತ್ತವೆ. ‘ಅಥರ್ವವೇದದಲ್ಲಿ ಅನೇಕ ಕಡೆಗಳಲ್ಲಿ ಕೆಟ್ಟ ಶಕ್ತಿ. ಉದಾ. ಅಸುರರು, ರಾಕ್ಷಸರು, ಪಿಶಾಚಿ ಇವರ ಪ್ರತಿಬಂಧದ ಮಂತ್ರಗಳನ್ನು ಹೇಳಲಾಗಿದೆ. ಕೆಟ್ಟ ಶಕ್ತಿಗಳ ತೊಂದರೆಯ ನಿವಾರಣೆಗಾಗಿ ವಿವಿಧ ಆಧ್ಯಾತ್ಮಿಕ ಉಪಾಯಗಳನ್ನು ವೇದ ಮತ್ತು ಧರ್ಮಗ್ರಂಥಗಳಲ್ಲಿ ಹೇಳಲಾಗಿದೆ.