ಭಾಗ್ಯನಗರದಿಂದ ಬಂಧಿಸಿದ ಭಯೋತ್ಪಾದಕರು ಆತ್ಮಾಹುತಿ ಬಾಂಬರ್ ಆಗಿ ನನ್ನ ಹತ್ಯೆ ಮಾಡುವವರಿದ್ದರು ! – ಶಾಸಕ ಟಿ. ರಾಜಾಸಿಂಹ

  • ಪ್ರಖರ ಹಿಂದುತ್ವನಿಷ್ಠ ಶಾಸಕ ಟಿ. ರಾಜಾಸಿಂಹರ ಮಾಹಿತಿ

  • ಪೊಲೀಸರು ಈ ಮಾಹಿತಿಯನ್ನು ಮುಚ್ಚಿಟ್ಟಿರುವ ಆರೋಪ

ಶ್ರೀ. ಟಿ. ರಾಜಾಸಿಂಗ್

ಭಾಗ್ಯನಗರ – ಇಲ್ಲಿ ಬಂಧಿಸಲಾಗಿರುವ ಭಯೋತ್ಪಾದಕರು ಆತ್ಮಾಹುತಿ ಬಾಂಬರ್ ಆಗಿ ನನ್ನ ಹತ್ಯೆ ಮಾಡುವ ಉದ್ದೇಶ ಹೊಂದಿದ್ದರು ಮತ್ತು ಪೊಲೀಸರು ಈ ಮಾಹಿತಿಯನ್ನು ಮುಚ್ಚಿಟ್ಟಿದ್ದಾರೆ ಎಂದು ಭಾಗ್ಯನಗರದ ಗೋಶಾಮಹಲ ವಿಧಾನಸಭೆಯ ಚುನಾವಣಾ ಕ್ಷೇತ್ರದ ಪ್ರಖರ ಹಿಂದುತ್ವನಿಷ್ಠ ಶಾಸಕ ಶ್ರೀ. ಟಿ. ರಾಜಾಸಿಂಹರು ಗಂಭೀರ ಆರೋಪ ಮಾಡಿದ್ದಾರೆ. ಈ ವಿಷಯದ ಕುರಿತು ಶ್ರೀ ಸಿಂಹ ಇವರು ಮಾನ್ಯ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಮತ್ತು ಕೇಂದ್ರೀಯ ಗೃಹಮಂತ್ರಿ ಅಮಿತ ಶಹಾ ಇವರಿಗೆ ಪತ್ರವನ್ನು ಕಳುಹಿಸಿದ್ದಾರೆ. ಈ ಪತ್ರದಲ್ಲಿ ಅವರು ಅವರ ಕುಟುಂಬದ ಇತರೆ ಸದಸ್ಯರನ್ನೂ ಆತ್ಮಾಹುತಿ ಬಾಂಬರ್ ಆಗಿ ಹತ್ಯೆ ಮಾಡಲು ಷಡ್ಯಂತ್ರ್ಯವನ್ನು ರಚಿಸಿರುವ ಮಾಹಿತಿಯನ್ನು ನೀಡಿದ್ದಾರೆ. ಈ ಪತ್ರದಲ್ಲಿ ಅವರು ಈ ವಿಷಯದ ಒಂದು ಲಿಂಕ್ ಕಳುಹಿಸಿದ್ದಾರೆ.

`ಆಪ್ ಇಂಡಿಯಾ’ ಈ ಸುದ್ದಿ ಸಂಕೇತ ಸ್ಥಳವು ಈ ಸುದ್ದಿಯನ್ನು ಪ್ರಸಾರ ಮಾಡಿದೆ. ಈ ಸುದ್ದಿಯನುಸಾರ,

1. ಅಕ್ಟೋಬರ 2022 ರಲ್ಲಿ ಅಬ್ದುಲ ಜಾಹಿದ, ಮಹಮ್ಮದ ಮೀಉದ್ದೀಮ ಮತ್ತು ಹಸನ ಫಾರೂಖ ಈ 3 ಭಯೋತ್ಪಾದಕರನ್ನು ಭಾಗ್ಯನಗರದ ಮಾಲಕಪಟದಿಂದ ಬಂಧಿಸಲಾಗಿತ್ತು. ಅವರ ಬಳಿ ಶಸ್ತ್ರಾಸ್ತ್ರಗಳು, ಹಾಗೆಯೇ 5 ಲಕ್ಷದ 15 ಸಾವಿರ ರೂಪಾಯಿಗಳ ನಗದು ಹಣ ಸಿಕ್ಕಿತ್ತು.

2. ಈ ಎಲ್ಲ ಜನರು ಐ.ಎಸ್.ಐ.ನ ಸಂಪರ್ಕದಲ್ಲಿದ್ದರು. ಹಾಗೆಯೇ ಅವರು ಆತ್ಮಾಹುತಿ ದಾಳಿ ನಡೆಸಲು ಷಡ್ಯಂತ್ರ್ಯವನ್ನು ರಚಿಸುತ್ತಿದ್ದರು. ಇಂತಹ ದಾಳಿಯನ್ನು ಮಾಡಿ ಅವರು ಆತಂಕ ಸೃಷ್ಟಿಸುವವರಿದ್ದರು.

3. ಅಬ್ದುಲ ಜಾಹಿದ 2017 ರಲ್ಲಿ ನಡೆದ ಒಂದು ಭಯೋತ್ಪಾದಕ ಆಕ್ರಮಣದ ಸಂಚಿನಲ್ಲಿ ಭಾಗಿಯಾಗಿದ್ದನು; ಆದರೆ ನಂತರ ಅವನು ಬಿಡುಗಡೆಗೊಂಡಿದ್ದನು.

4. ಟಿ.ರಾಜಾಸಿಂಹ ಮಾತನಾಡುತ್ತಾ, ತೇಲಂಗಾಣದ ಗುಪ್ತಚರ ಇಲಾಖೆಯು ನನಗೆ ಈ ವಿಷಯದಲ್ಲಿ ಯಾವುದೇ ಮಾಹಿತಿಯನ್ನು ನೀಡಲು ನಿರಾಕರಿಸಿದ್ದಾರೆ. ನಾನು ನನ್ನ ಭದ್ರತೆಗಾಗಿ ಇರುವ ಕೇವಲ 2 ಪೊಲೀಸರೊಂದಿಗೆ ಸಾರ್ವಜನಿಕ ಸಭೆಗಳಿಗೆ ಹೋಗುತ್ತಿರುತ್ತೇನೆ. ಈ ಕಾರಣದಿಂದ ನನಗೆ ನನ್ನ ಸುರಕ್ಷತೆಯ ಬಗ್ಗೆ ಚಿಂತೆಯಾಗುತ್ತಿದೆ. ಕೆಲವು ಸಂಘಟನೆಗಳು ಮತ್ತು ಜನರಿಂದ ನನಗೆ ಅಪಾಯವಿದೆ; ಆದರೆ ಅವರ ಮೇಲೆ ಕೈಕೊಳ್ಳಲಾಗುತ್ತಿರುವ ಕ್ರಮದ ಬಗ್ಗೆ ಪೊಲೀಸರಿಂದ ನನಗೆ ಮಾಹಿತಿ ನೀಡುತ್ತಿಲ್ಲ. ಭಾಗ್ಯನಗರವು ಭಯೋತ್ಪಾದಕರ ಹೊಸ ಅಡ್ಡೆಯಾಗಿದ್ದು, ಮೇಲಿನ ಮೂವರು ಭಯೋತ್ಪಾದಕರ ಬಂಧನವು ಅದರ ಪುರಾವೆಯಾಗಿದೆ.’ ಎಂದು ಹೇಳಿದರು.

5. ಶ್ರೀ. ಟಿ. ರಾಜಾಸಿಂಹ ಇವರು ಕೇಂದ್ರೀಯ ಗೃಹಸಚಿವ ಅಮಿತ ಶಹಾರಿಗೆ ಕಳುಹಿಸಿರುವ ಪತ್ರದಲ್ಲಿ ನನಗೆ ಅಂತರರಾಷ್ಟ್ರೀಯ ಮತ್ತು ಭಾರತೀಯ ಸಂಖ್ಯೆಯಿಂದ ಮೇಲಿಂದ ಮೇಲೆ ಬೆದರಿಕೆಯ ಕರೆಗಳು ಬರುತ್ತಿರುತ್ತವೆ. ಬಂಧಿಸಲ್ಪಟ್ಟಿರುವ ಆರೋಪಿಗಳು 2016-17 ರಲ್ಲಿ ನನ್ನ ಮನೆಯ ಪರಿಶೀಲನೆಯನ್ನು ಮಾಡಿದ್ದರು. ಭಾಗ್ಯನಗರದ ಭದ್ರತಾ ವ್ಯವಸ್ಥೆಯನ್ನು ಕಠಿಣಗೊಳಿಸುವ ಆವಶ್ಯಕತೆಯಿದೆಯೆಂದು ತಿಳಿಸಿದ್ದಾರೆ.

ಸಂಪಾದಕೀಯ ನಿಲುವು

ತೇಲಂಗಾಣದ ಹಿಂದೂದ್ವೇಷಿ ಭಾರತ ರಾಷ್ಟ್ರ ಸಮಿತಿಯ ಸರಕಾರದ ಆಡಳಿತಾವಧಿಯಲ್ಲಿ ಹಿಂದೂ ಮುಖಂಡರು ಅಸುರಕ್ಷಿತರು !

100 ಕೋಟಿ ಹಿಂದೂಗಳ ದೇಶದಲ್ಲಿ ಹಿಂದುತ್ವನಿಷ್ಠ ಮುಖಂಡರು ಅಸುರಕ್ಷಿತರಾಗಿರುವುದು ಹಿಂದೂಗಳಿಗೆ ಲಜ್ಜಾಸ್ಪದ ! ಇಂತಹ ಬೆದರಿಕೆ ಯಾವತ್ತೂ ಇತರೆ ಪಂಥದ ಮುಖಂಡರಿಗೆ ಸಿಗುವುದಿಲ್ಲ ಎನ್ನುವುದನ್ನು ಗಮನಿಸಬೇಕಾಗಿದೆ !

ಮುಷ್ಠಿಯಷ್ಟು ಜಿಹಾದಿ ಭಯೋತ್ಪಾದಕರ ಉಚ್ಚಾಟನೆ ಮಾಡಿ ಸರಕಾರ 100 ಕೋಟಿ ಹಿಂದೂಗಳಿಗೆ ಯಾವಾಗ ಸುರಕ್ಷಿತತೆಯನ್ನು ಒದಗಿಸಲಿದ್ದಾರೆ ?