ದೇಶದಲ್ಲಿ ಹಿಂದೂ ಹೊರತು ಯಾರೇ ಪ್ರಧಾನಮಂತ್ರಿ, ಮುಖ್ಯಮಂತ್ರಿಯಾಗಲು ಸಾಧ್ಯವಾಗಬಾರದು, ಹಾಗೆ ಸಂವಿಧಾನ ತಿದ್ದುಪಡಿ ಮಾಡುವೆವು ! – ಡಾ. ಪ್ರವೀಣ ತೊಗಾಡಿಯ

ಡಾ. ಪ್ರವೀಣ ತೊಗಾಡಿಯ

ನರ್ಮದಾಪುರಮ್ (ಮಧ್ಯಪ್ರದೇಶ) – ಭಾರತ ಸರಕಾರ ಹಿಂದೂಗಳ ಕೈ ಸೇರುವ ಹಾಗೆ ಕಾಳಜಿ ವಹಿಸಲಾಗುವುದು. ದೇಶದಲ್ಲಿ ಹಿಂದೂ ಬಿಟ್ಟರೆ ಬೇರೆ ಯಾರಿಗೂ ದೇಶದ ಪ್ರಧಾನಮಂತ್ರಿ, ಮುಖ್ಯಮಂತ್ರಿ, ಸಚಿವರು, ಜಿಲ್ಲಾಧಿಕಾರಿಗಳು, ಪೊಲೀಸ್ ಅಧಿಕಾರಿ, ನ್ಯಾಯಾಧೀಶರು ಆಗದಿರುವಂತೆ ಸಂವಿಧಾನದಲ್ಲಿ ತಿದ್ದುಪಡಿ ಮಾಡುವೆವು. ಇದೆಲ್ಲವೂ ಸಾಧ್ಯವಿದೆ, ಎಂದು ‘ಅಂತರಾಷ್ಟ್ರೀಯ ಹಿಂದೂ ಪರಿಷತ್ತಿನ’ ಅಧ್ಯಕ್ಷ ಡಾ. ಪ್ರವೀಣ ತೊಗಾಡಿಯ ಇವರು ಹೇಳಿಕೆ ನೀಡಿದರು. ‘ಹಿಂದೂ ಸಾಥಿ’ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವರು ಇಲ್ಲಿ ಬಂದಿದ್ದರು. ಆ ಸಮಯದಲ್ಲಿ ಅವರು ಮಾತನಾಡುತ್ತಿದ್ದರು.

ಮುಸಲ್ಮಾನರ ಸಂಖ್ಯೆ ಹೆಚ್ಚಿಸಲು ಬಿಡುವುದಿಲ್ಲ !

ಡಾ. ಪ್ರವೀಣ ತೊಗಾಡಿಯ ಮಾತು ಮುಂದುವರೆಸಿ, ನಾವು ಭಾರತದಲ್ಲಿ ಮುಸಲ್ಮಾನರ ಜನಸಂಖ್ಯೆ ಹೆಚ್ಚಿಸಲು ಬಿಡುವುದಿಲ್ಲ. ೨ ಕ್ಕಿಂತ ಹೆಚ್ಚಿನ ಮಕ್ಕಳು ಪಡೆಯುವವರೆಗೆ ಸರಕಾರದ ನೌಕರಿ, ಸರಕಾರಿ ಆಹಾರ, ಸರಕಾರಿ ಶಾಲೆ ಮತ್ತು ಆಸ್ಪತ್ರೆಗಳಲ್ಲಿ ಉಚಿತ ಸೌಲಭ್ಯ ಹಾಗೂ ಬ್ಯಾಂಕಿನ ಸಾಲ ಮುಂತಾದ ಯಾವುದೇ ಸೌಲಭ್ಯ ನೀಡುವುದಿಲ್ಲ. ಅದರ ನಂತರ ಕೂಡ ಅವರು ಮಕ್ಕಳನ್ನು ಪಡೆದರೆ, ಆಗ ಅವರಿಗೆ ಹತ್ತು ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸುವ ಕಾನೂನು ಜಾರಿ ಮಾಡಲಾಗುವುದು ಎಂದು ಹೇಳಿದರು.

ಹಿಂದೂಗಳ ಪ್ರಭೋದನೆಗಾಗಿ ದೇಶಾದ್ಯಂತ ೧ ಲಕ್ಷ ಕೇಂದ್ರಗಳನ್ನು ಸ್ಥಾಪಿಸಲಾಗುವುದು !

ಅಂತರಾಷ್ಟ್ರೀಯ ಹಿಂದೂ ಪರಿಷತ್ತಿನ ಮೂಲಕ ಕೋಟ್ಯಾಂತರ ಹಿಂದೂಗಳಿಗಾಗಿ ಸಮೃದ್ಧಿ ಸೇವಾ ಗೌರವ, ಸಹಯೋಗ ಸಂಸ್ಕಾರದ ವ್ಯವಸ್ಥೆಯನ್ನು ಭಾರತದಲ್ಲಿ ೨೪ ಗಂಟೆ ಲಭ್ಯ ಗೊಳಿಸಲಾಗುವುದು. ನಮ್ಮ ಖಾಸಗಿ ಕಾಲ್ ಸೆಂಟರ್ ಗಳಿಗೆ ಸಂಪರ್ಕ ಮಾಡಿದ ನಂತರ ಸಂತ್ರಸ್ತರಿಗೆ ತ್ವರಿತ ಸಹಾಯ ಮಾಡಲಾಗುವುದು. ರಾಮಜನ್ಮ ಭೂಮಿಗಾಗಿ ನಾವು ಯಶಸ್ವಿ ಆಂದೋಲನ ನಡೆಸಿದವು. ಈಗ ನಾವು ಹಿಂದೂಗಳ ಪ್ರಬೋಧನೆಯ ಎರಡನೆಯ ಹಂತದ ಕಾರ್ಯ ಮಾಡುತ್ತಿದ್ದೇವೆ. ಅದಕ್ಕಾಗಿ ದೇಶಾದ್ಯಂತ ೧ ಲಕ್ಷ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ. ಇದರಲ್ಲಿ ೧ ಕೋಟಿ ಹಿಂದೂಗಳು ಸಹಭಾಗಿ ಆಗುವವರು. ಹನುಮಾನ ಚಾಲಿಸಾದ ಮೂಲಕ ಈ ಕಾರ್ಯದಲ್ಲಿ ಎಲ್ಲರನ್ನು ಜೋಡಿಸಲಾಗುವುದು. ಈ ಕೇಂದ್ರದ ಸಹಾಯದಿಂದ ಬಡ ಹಿಂದೂ ಕುಟುಂಬಗಳಿಗೆ ಉಚಿತ ಆರೋಗ್ಯ, ಶಿಕ್ಷಣ ಮತ್ತು ಕಾನೂನು ಸಹಾಯ ನೀಡಲಾಗುವುದು ಎಂದು ಹೇಳಿದರು.