ದೆಹಲಿಯಲ್ಲಿ ನಾಯಿಗಳ ದಾಳಿಯಿಂದ ರಕ್ಷಿಸಿಕೊಳ್ಳಲು ಉಪಾಯಗಳನ್ನು ಕಂಡು ಹಿಡಿಯಲು ಚರ್ಚಾಕೂಟ !

ನವದೆಹಲಿ – ಇಲ್ಲಿಯ `ಕಾನ್ಸ್ಟಿಟ್ಯೂಶನ್ ಕ್ಲಬ್’ ನಲ್ಲಿ ಮೇ 10 ರಂದು ನಾಯಿಗಳ ದಾಳಿಗಳಿಂದ ರಕ್ಷಿಸಿಕೊಳ್ಳಲು ಉಪಾಯಗಳನ್ನು ಕಂಡು ಹಿಡಿಯಲು ಒಂದು ಚರ್ಚೆಯನ್ನು ಆಯೋಜಿಸಲಾಗಿತ್ತು. ಮಾಜಿ ಕೇಂದ್ರ ಸಚಿವ ಮತ್ತು ಭಾಜಪ ಮುಖಂಡ ವಿಜಯ ಗೋಯಲ ಇವರು ಈ ಚರ್ಚಾಕೂಟವನ್ನು ಆಯೋಜಿಸಿದ್ದರು. ಈ ಸಂದರ್ಭದಲ್ಲಿ ಕೆಲವು ಜನರು ಈ ಚರ್ಚೆಯನ್ನು ವಿರೋಧಿಸಿ ಗದ್ದಲವೆಬ್ಬಿಸಲು ಪ್ರಯತ್ನಿಸಿದರು. ಪ್ರಾಣಿಪ್ರೇಮಿ ಮೇನಕಾ ಗಾಂಧಿ ಬೆಂಬಲಿಗರಿಂದ ಈ ಸಭೆಗೆ ವಿರೋಧ ವ್ಯಕ್ತಪಡಿಸಿ ಸಮಾಂತರ ಸಭೆಯನ್ನು ಆಯೋಜಿಸಲಾಗಿತ್ತು.

1. ಗೋಯಲ ಇವರು ಮಾತನಾಡುತ್ತಾ, ದೇಶದಲ್ಲಿ 6 ಕೋಟಿ 40 ಲಕ್ಷ ನಾಯಿಗಳಿವೆ. ಕೇವಲ ದೆಹಲಿಯಲ್ಲಿಯೇ 6 ಲಕ್ಷ ನಾಯಿಗಳಿವೆ. ಸಧ್ಯಕ್ಕೆ ಈ ನಾಯಿಗಳು ಜನರನ್ನು ಕಚ್ಚುತ್ತಿವೆ. ಇದರಿಂದ ಜನತೆಯು ತೊಂದರೆಯನ್ನು ಅನುಭವಿಸುತ್ತಿದ್ದು, ಜನರು ಕೈಯಲ್ಲಿ ಕೋಲನ್ನು ಹಿಡಿದುಕೊಂಡು ಓಡಾಡುತ್ತಿದ್ದಾರೆ ಎಂದು ಹೇಳಿದರು.

2. ಈ ಚರ್ಚೆಯಲ್ಲಿ ನಾಯಿಗಳ ಸಂತಾನಹರಣ ಚಿಕಿತ್ಸೆಯನ್ನು ನಡೆಸುವುದು. ಮತ್ತು ಅವುಗಳ ಗಣತಿ ಮಾಡಲು ದೆಹಲಿ ಮಹಾಪಾಲಿಕೆಯು ನಿರ್ಣಯಿಸಿದೆ. ಇದಲ್ಲದೇ ಎಲ್ಲ ನಾಯಿಗಳಿಗೆ ರೇಬಿಸ್ ಇಂಜೆಕ್ಷನ್ ನೀಡುವುದು ಮತ್ತು ಬೀದಿನಾಯಿಗಳನ್ನು ದತ್ತು ಪಡೆಯುವ ಬಗ್ಗೆ ರಾಷ್ಟ್ರಮಟ್ಟದಲ್ಲಿ ನಿಯಮಗಳನ್ನು ರಚಿಸುವಂತೆ ಕೋರಲು ತೀರ್ಮಾನಿಸಲಾಗಿದೆ.

ಸಂಪಾದಕೀಯ ನಿಲುವು

ಇಂತಹ ಚರ್ಚೆಗಳನ್ನು ಏಕೆ ಆಯೋಜಿಸಬೇಕಾಗುತ್ತದೆ ? ಸರಕಾರಕ್ಕೆ ಜನತೆಯ ಸಮಸ್ಯೆ ತಿಳಿಯುವುದಿಲ್ಲವೇ ?