ಜಾಲ್ನಾದಲ್ಲಿ ೩ ವರ್ಷದಲ್ಲಿ ಬೀದಿ ನಾಯಿಗಳಿಂದ ೫ ಸಾವಿರದ ೫೦೦ ಜನರ ಮೇಲೆ ದಾಳಿ !

೭ ಸಾವಿರ ಬೀದಿ ನಾಯಿಗಳಿಂದ ಆತಂಕ !

ಜಾಲ್ನಾ – ನಗರದ ವಿವಿಧ ರಸ್ತೆಗಳಲ್ಲಿ ರಾಜಾರೋಷವಾಗಿ ಸಂಚರಿಸುವ ಬೀದಿ ನಾಯಿಗಳು ವಾಹನ ಸವಾರರ ಮೇಲೆ ಮುಗಿಬೀಳುತ್ತಿವೆ. ಓಡಾಡುವ ನಾಗರಿಕರೊಂದಿಗೆ ಶಾಲೆಗೆ ಹೋಗುವ ಚಿಕ್ಕ ಮಕ್ಕಳನ್ನು ಹಿಂಬಾಲಿಸುತ್ತದೆ. ನಗರದಲ್ಲಿ ನಿತ್ಯ ೬ ರಿಂದ ೧೧ ಮಂದಿಗೆ ಬೀದಿ ನಾಯಿಗಳು ಕಚ್ಚುತ್ತಿವೆ. ಪ್ರತಿ ವರ್ಷ ಸಂತಾನಹರಣಕ್ಕಾಗಿ ನಗರಸಭೆಯಿಂದ ಲಕ್ಷಾಂತರ ರೂಪಾಯಿಗಳು ಏರ್ಪಾಡು ಮಾಡಲಾಗುತ್ತಿದೆ; ಆದರೆ ಕಳೆದ ಕೆಲವು ವರ್ಷಗಳಲ್ಲಿ ಯಾವುದೇ ಸಂತಾನ ಹರಣ ಕ್ರಮ ಕೈಗೊಳ್ಳಲಿಲ್ಲ. ನಗರದಲ್ಲಿ ಮಟನ್ ಅಂಗಡಿಗಳು ತೆರೆದಿರುವುದರಿಂದ ಬೀದಿ ನಾಯಿಗಳ ಸಂಖ್ಯೆ ಹೆಚ್ಚುತ್ತಿದೆ.

೧. ೪ ಲಕ್ಷ ಜನಸಂಖ್ಯೆ ಇರುವ ಜಾಲ್ನಾ ನಗರದಲ್ಲಿ ೭ ಸಾವಿರ ಬೀದಿ ನಾಯಿಗಳಿವೆ ಭಯವಿದೆ. ಕಳೆದ ೩ ವರ್ಷಗಳಲ್ಲಿ ಬೀದಿನಾಯಿಗಳಿಂದಾಗಿ ೫ ಸಾವಿರದ ೪೭೫ ಜನರ ಮೇಲೆ ದಾಳಿ ಮಾಡಿದೆ ಎಂದು ಜಿಲ್ಲಾ ಜನರಲ್ ಆಸ್ಪತ್ರೆಯಲ್ಲಿ ವರದಿಯಾಗಿದೆ. ಆಸ್ಪತ್ರೆಯಲ್ಲಿ ನಿತ್ಯ ೪೦ ರಿಂದ ೬೦ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ.

೨. ಪುರಸಭೆಯ ಸಭೆಗಳಲ್ಲಿ ನಾಯಿಗಳ ಸಮಸ್ಯೆಯನ್ನು ಆಗಾಗ್ಗೆ ಚರ್ಚಿಸಲಾಗಿದೆ; ಆದರೆ ಪ್ರತ್ಯಕ್ಷದಲ್ಲಿ ಪರಿಹಾರ ಸಿಕ್ಕಿಲ್ಲ.

೩. ಸಂತಾನ ಹರಣಕ್ಕಾಗಿ ಪ್ರಸಕ್ತ ವರ್ಷದಲ್ಲಿ ೧೦ ಲಕ್ಷ ರಲ್ಲಪಾಯಿಗಳ ಎರ್ಪಾಡು ಮಾಡಲಾಗಿದೆ ಮುಂದಿನ ೪ ತಿಂಗಳಲ್ಲಿ ಸಂತಾನ ಹರಣಕ್ಕಾಗಿ ಪ್ರತ್ಯೇಕ ಗುತ್ತಿಗೆಯನ್ನು ತೆರೆಯಲಾಗುವುದು.

ಶೀಘ್ರದಲ್ಲಿಯೇ ಆಂದೋಲನ ಮಾಡುತ್ತೇನೆ ! – ಶಶಿಕಾಂತ ಘುಗೆ, ಮಾಜಿ ಕಾರ್ಪೊರೇಟರ್

ಹಲವು ಬಾರಿ ಮನವಿ ನೀಡಿದರೂ ಬೀದಿನಾಯಿಗಳ ವಿಷಯದಲ್ಲಿ ಕ್ರಮ ಕೂಗೊಳ್ಳದ್ದರಿಂದ ಕಾಂಚನನಗರ, ಶಿವನಗರ ಮತ್ತು ನೂತನ್ ವಸಾಹತ್ ಪ್ರದೇಶಗಳಲ್ಲಿ ಬೀದಿನಾಯಿಗಳ ತೊಂದರೆಯಾಗುತ್ತಿದೆ. ಬೀದಿನಾಯಿಗಳು ಹಲವಾರು ಬಾರಿ ಸಣ್ಣ ಮಕ್ಕಳ ಮೇಲೆ ದಾಳಿ ಮಾಡಿವೆ ಹೀಗಾಗಿ ಸದ್ಯದಲ್ಲೇ ಈ ವಿಚಾರದಲ್ಲಿ ಪ್ರತಿಭಟನೆ ನಡೆಸಲಿದ್ದೇವೆ ಎಂದು ಹೇಳಿದರು.

ಸಂಪಾದಕೀಯ ನಿಲುವು

ಇದು ಆಡಳಿತ ನಾಚಿಕೆಗೇಡು !