`ಸಿರ್ಫ್ ಏಕ್ ಬಂದಾ ಕಾಫೀ ಹೈ’ ಚಲನಚಿತ್ರ ನಿರ್ಮಾಪಕನಿಗೆ `ಆಸಾರಾಮ ಬಾಪೂ ಟ್ರಸ್ಟ’ ವತಿಯಿಂದ ನೊಟೀಸು

ಚಲನಚಿತ್ರದಿಂದ ಪೂಜ್ಯಪಾದ ಸಂತಶ್ರೀ ಆಸಾರಾಮ ಬಾಪೂ ಇವರನ್ನು ಅಪಮಾನಿಸಲಾಗಿದೆ ಎಂಬ ಹೇಳಿಕೆ

ನವದೆಹಲಿ- ನಟ ಮನೋಜ ವಾಜಪೇಯಿಯವರ ಮುಂದಿನ `ಸಿರ್ಫ್ ಏಕ್ ಬಂದಾ ಕಾಫೀ ಹೈ’ ಈ ಚಲನಚಿತ್ರದ ಟ್ರೇಲರ್  ಮೇ 8 ರಂದು ಪ್ರದರ್ಶನಗೊಂಡ ಬಳಿಕ ಚಲನಚಿತ್ರದ ನಿರ್ಮಾಪಕನಿಗೆ ` ಆಸಾರಾಮ ಬಾಪೂ ಟ್ರಸ್ಟ’ ನೊಟೀಸು ಕಳುಹಿಸಿದೆ. ಟ್ರಸ್ಟ ವತಿಯಿಂದ ನ್ಯಾಯಾಲಯದಲ್ಲಿ ಮೊಕದ್ದಮೆಯನ್ನು ದಾಖಲಿಸಲಾಗಿದ್ದು, ಈ ಚಲನಚಿತ್ರದ ಪ್ರದರ್ಶನವನ್ನು ಸ್ಥಗಿತಗೊಳಿಸುವಂತೆ ಕೋರಲಾಗಿದೆ. `ಈ ಚಲನಚಿತ್ರದಲ್ಲಿ ಆಸಾರಾಮ ಬಾಪೂರವರ ಗೌರವಕ್ಕೆ ಧಕ್ಕೆಯಾಗಿದೆ’ ಎಂದು ಟ್ರಸ್ಟ ವತಿಯಿಂದ ಹೇಳಲಾಗಿದೆ.

1. ಈ ಚಲನಚಿತ್ರದಲ್ಲಿ ಒಬ್ಬ ಬಾಬಾ 16 ವರ್ಷದ ಹುಡುಗಿಯನ್ನು ಬಲಾತ್ಕರಿಸುವುದನ್ನು ತೋರಿಸಲಾಗಿದೆ. ಚಲನಚಿತ್ರದಲ್ಲಿ ಕಾಣಿಸುವ ಬಾಬಾನ ಉಡುಗೆತೊಡುಗೆಗಳು ಪೂಜ್ಯಪಾದ ಸಂತಶ್ರೀ ಆಸಾರಾಮ ಬಾಪೂರವರೊಂದಿಗೆ ಹೋಲಿಕೆಯಾಗುತ್ತಿದೆ. ಈ ಕಾರಣದಿಂದ ಈ ಚಲನಚಿತ್ರ ಅವರಿಗೆ ಸಂಬಂಧಿಸಿದೆಯೆಂದು ಹೇಳಲಾಗುತ್ತಿದೆ.

2. ಈ ಚಲನಚಿತ್ರದ ನಿರ್ಮಾಪಕ ಆಸಿಫ ಶೇಖ ಹೇಳಿರುವುದೇನೆಂದರೆ, `ನಾವು ನ್ಯಾಯವಾದಿ ಪಿ.ಸಿ.ಸೋಲಂಕಿಯವರ ಜೀವನದ ಮೇಲೆ ಚಲನಚಿತ್ರವನ್ನು ನಿರ್ಮಿಸಿದ್ದೇವೆ. ಅದಕ್ಕಾಗಿ ನಾವು ಅವರಿಂದ ಸಂಪೂರ್ಣ ಹಕ್ಕನ್ನು ಖರೀದಿಸಿದ್ದೇವೆ. ನಮಗೆ ನೋಟೀಸು ದೊರಕಿರುವುದು ಸತ್ಯವಾಗಿದ್ದರೂ, ಈ ನೊಟೀಸಿಗೆ ನಮ್ಮ ನ್ಯಾಯವಾದಿಗಳು ಉತ್ತರಿಸುತ್ತಾರೆ’ ಪಿ.ಸಿ. ಸೋಲಂಕಿಯವರು ಪೂಜ್ಯಪಾದ ಸಂತಶ್ರೀ ಆಸಾರಾಮ ಬಾಪೂ ಇವರ ವಿರುದ್ಧ ಮೊಕದ್ದಮೆಯಲ್ಲಿ ದೂರುದಾರರ ನ್ಯಾಯವಾದಿಗಳಾಗಿದ್ದರು