‘ದಿ ಕೇರಳ ಸ್ಟೋರಿ’ಯನ್ನು ನಿಷೇಧಿಸುವಂತೆ ಸುಪ್ರೀಂ ಕೋರ್ಟ್‌ನಲ್ಲಿ ಮತ್ತೆ ಅರ್ಜಿ

ಮೇ ೧೫ ರಂದು ವಿಚಾರಣೆ

ನವ ದೆಹಲಿ – ಸರ್ವೋಚ್ಚ ನ್ಯಾಯಾಲಯವು ‘ದಿ ಕೇರಳ ಸ್ಟೋರಿ’ ಚಿತ್ರದ ಬಿಡುಗಡೆಗೆ ತಡೆ ಕೋರಿ ಸಲ್ಲಿಸಲಾದ ಅರ್ಜಿಯ ವಿಚಾರಣೆಗೆ ಸಮ್ಮತಿಸಿದೆ. ಮೇ ೧೫ ರಂದು ನ್ಯಾಯಾಲಯವು ವಿಚಾರಣೆಗೆ ನಿಗದಿಪಡಿಸಿದೆ. ಮೇ ೫ ರಂದು ಈ ಚಲನಚಿತ್ರ ಬಿಡುಗಡೆಯಾಗಿದೆ. ಅದೇ ದಿನ ಕೇರಳ ಹೈಕೋರ್ಟ್ ಚಲನಚಿತ್ರದ ಟ್ರೈಲರ್ (ಜಾಹೀರಾತು) ವೀಕ್ಷಿಸಿತು. ಇದಾದ ಬಳಿಕ ಕೋರ್ಟ್ ಚಲನಚಿತ್ರ ಬಿಡುಗಡೆಗೆ ತಡೆ ನೀಡಲು ನಿರಾಕರಿಸಿತ್ತು. ಬಂಗಾಲದಲ್ಲಿ ರಾಜ್ಯ ಸರಕಾರವು, ತಮಿಳುನಾಡಿನಲ್ಲಿ ಚಲನಚಿತ್ರಮಂದಿರ ಮಾಲೀಕರು ಈ ಚಲನಚಿತ್ರ ಪ್ರದರ್ಶನವನವನ್ನು ನಿಷೇಧಿಸಿದ್ದಾರೆ.

೧. ಸುಪ್ರೀಂ ಕೋರ್ಟ್ ಈ ಹಿಂದೆ ತಡೆಯಾಜ್ಞೆ ನೀಡುವ ಅರ್ಜಿಯ ಕುರಿತು, ಸಿನೆಮಾ ಮಾಡಲು ನಟರು ಮತ್ತು ನಿರ್ಮಾಪಕರು ಸಾಕಷ್ಟು ಶ್ರಮ ಪಟ್ಟಿದ್ದಾರೆ. ನಾವು ಅದರ ಬಗ್ಗೆ ಯೋಚಿಸಬೇಕು. ಸಿನಿಮಾ ಬ್ಯಾನ್ ಮಾಡುವಾಗ ತುಂಬಾ ಜಾಗರೂಕರಾಗಿರಬೇಕು. ಈ ಸಿನಿಮಾ ಒಳ್ಳೆಯದೋ ಕೆಟ್ಟದ್ದೋ ಎಂಬುದನ್ನು ಜನರು ನಿರ್ಧರಿಸುತ್ತಾರೆ.

೨. ಕೇರಳ ಹೈಕೋರ್ಟ್ ಕೂಡ ಚಲನಚಿತ್ರವನ್ನು ನಿಷೇಧಿಸಲು ನಿರಾಕರಿಸಿದೆ. ನ್ಯಾಯಾಲಯವು, ಈ ಚಿತ್ರ ಸತ್ಯ ಘಟನೆಗಳಿಂದ ಪ್ರೇರಿತಗೊಂಡಿದೆ ಎಂದು ಹೇಳಿತ್ತು. ಅದನ್ನು ವೀಕ್ಷಿಸಿದ ನಂತರ ಚಲನಚಿತ್ರ ಸೆನ್ಸಾರ್ ಮಂಡಳಿಯು ಪ್ರದರ್ಶನಕ್ಕೆ ಅನುಮತಿ ನೀಡಿತು. ಈ ಚಿತ್ರದಲ್ಲಿ ಯಾವುದೇ ಸಮಾಜದ ಬಗ್ಗೆ ಅಕ್ಷೆಪಾರ್ಹ ಇಲ್ಲ. ಅರ್ಜಿದಾರರು ಯಾರೂ ಚಲನಚಿತ್ರವನ್ನು ನೋಡಿಲ್ಲ ಎಂದು ಹೇಳಿದೆ.