ಇಸ್ಲಾಮಾಬಾದ್ – ಸೌಹಾರ್ದತೆಯ ದೃಷ್ಟಿಕೋನದಿಂದ ಮೇ 12 ರಂದು 199 ಭಾರತೀಯ ಕೈದಿಗಳನ್ನು ಬಿಡುಗಡೆ ಮಾಡಲು ಪಾಕಿಸ್ತಾನ ಸರಕಾರ ಸಿದ್ಧವಾಗಿದೆ ಎಂದು ವರದಿಯಾಗಿದೆ. ಸದ್ಯ ಈ ಎಲ್ಲಾ ಆರೋಪಿಗಳು ಕರಾಚಿಯ ಜೈಲಿನಲ್ಲಿದ್ದಾರೆ. ಅಲ್ಲಿಂದ ಅವರನ್ನು ಲಾಹೋರ್‌ಗೆ ಕರೆತಂದು ಅಲ್ಲಿಂದ ಅಟಾರಿ ಗಡಿಯ ಮೂಲಕ ಭಾರತಕ್ಕೆ ಕಳುಹಿಸಲಾಗುವುದು. ಈ ಮೀನುಗಾರರನ್ನು ಬಿಡುಗಡೆ ಮಾಡುವಂತೆ ಪಾಕಿಸ್ತಾನದ ಸಂಬಂಧಿತ ಸಚಿವಾಲಯದಿಂದ ಆದೇಶವಿದೆ ಎಂದು ಕರಾಚಿಯ ಹಿರಿಯ ಪೊಲೀಸ್ ಅಧಿಕಾರಿ ಖಾಜಿ ನಜೀರ್ ಹೇಳಿದ್ದಾರೆ.
ಇತ್ತೀಚೆಗಷ್ಟೇ ಪಾಕಿಸ್ತಾನದಲ್ಲಿ ಭಾರತೀಯ ಕೈದಿಯೊಬ್ಬ ಮೃತಪಟ್ಟಿದ್ದಾನೆ. ಪಾಕಿಸ್ತಾನದ ಜೈಲುಗಳಲ್ಲಿರುವ 654 ಭಾರತೀಯ ಕೈದಿಗಳ ಪೈಕಿ 631 ಮಂದಿ ಶಿಕ್ಷೆಯನ್ನು ಪೂರ್ಣಗೊಳಿಸಿದ್ದಾರೆ ಮತ್ತು ಬಿಡುಗಡೆಗೆ ಕಾಯುತ್ತಿದ್ದಾರೆ.
ಪಾಕ್ ಜೈಲುಗಳಲ್ಲಿದ್ದಾರೆ 654 ಭಾರತೀಯ ಮೀನುಗಾರರು; ಶುಕ್ರವಾರ 199 ಮಂದಿ ರಿಲೀಸ್ https://t.co/IrfA3IeCy8 #Pakistan #India #Jail #IndianFishermen
— PublicTV (@publictvnews) May 8, 2023