ದುರ್ಗ (ಛತ್ತೀಸಗಡ) – ಇತ್ತೀಚೆಗೆ ಪೊಲೀಸರು 60 ಲಕ್ಷಗಿಂತಲೂ ಹೆಚ್ಚಿನ ಮೊತ್ತದ ಕಳ್ಳತನದ ಪ್ರಕರಣದಲ್ಲಿ 2 ಬಾಂಗ್ಲಾದೇಶಿ ನುಸುಳುಕೋರರನ್ನು ಬಂಧಿಸಿದರು. ಭಾರತ – ಬಾಂಗ್ಲಾದೇಶ ಗಡಿಯ ತಂತಿಯನ್ನು ಕತ್ತರಿಸಿ ಭಾರತದಲ್ಲಿ ಪ್ರವೇಶಿಸಿರುವುದಾಗಿ ಆರೋಪಿಗಳು ಹೇಳಿದರು. (ಗಡಿಯಲ್ಲಿ ತಂತಿಯನ್ನು ಕತ್ತರಿಸಿ ಬಾಂಗ್ಲಾದೇಶಿಯರಿಗೆ ಭಾರತದಲ್ಲಿ ಪ್ರವೇಶಿಸುವುದು, ಗಡಿಭದ್ರತಾ ಪಡೆಗೆ ಲಜ್ಜಾಸ್ಪದ- ಸಂಪಾದಕರು) `ತದನಂತರ 1 ಸಾವಿರ 500 ರೂಪಾಯಿಗಳಲ್ಲಿ ಆಧಾರ ಕಾರ್ಡ ತಯಾರಿಸಿಕೊಂಡು ದೇಶದ ವಿವಿಧ ಪ್ರದೇಶಗಳಿಗೆ ಹೋಗಿ ನಾವು ಕಳ್ಳತನ ಮಾಡುತ್ತಿದ್ದೆವು’ ಎಂದು ಆರೋಪಿಗಳು ತಪ್ಪೊಪ್ಪಿಕೊಂಡರು. (ಇದರಿಂದ ಬಂಗಾಲದಲ್ಲಿ ಭ್ರಷ್ಟಾಚಾರ ಎಷ್ಟು ಆಳವಾಗಿ ಬೇರೂರಿದೆಯೆಂದು ಗಮನಕ್ಕೆ ಬರುತ್ತಿದೆ – ಸಂಪಾದಕರು)
ಛತ್ತೀಸಗಡದ ದುರ್ಗ ಜಿಲ್ಲೆಯಲ್ಲಿ ಕಳೆದ ಎಪ್ರಿಲ್ 6 ರಂದು ಕಳ್ಳತನ ಮಾಡಿದ್ದರು. ಈ ಪ್ರಕರಣದ ತನಿಖೆ ನಡೆಸುತ್ತಿರುವಾಗ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಗಾಲದಿಂದ ಬಂಧಿಸಿದರು. ಮಹಮ್ಮದ ಹಸಮತ ಖಲಿಫಾ ಮತ್ತು ಅಲ್ತಾಫ ಹುಸೇನ ಹೆಸರಿನ ಈ ಇಬ್ಬರು ಆರೋಪಿಗಳಲ್ಲಿ ಮಹಮ್ಮದ ಹಸಮತ ಖಲಿಫಾ ನಾಲ್ಕು ತಿಂಗಳಿನ ಹಿಂದೆ ಭಾರತದಲ್ಲಿ ನುಸುಳಿರುವುದಾಗಿ ಒಪ್ಪಿಕೊಂಡನು. ಗಡಿಯಲ್ಲಿ ನುಸುಳಲು ದಲ್ಲಾಳಿಗೆ 5 ಸಾವಿರ ರೂಪಾಯಿಗಳನ್ನು ನೀಡುತ್ತೇವೆಯೆಂದು ಪೊಲೀಸರಿಗೆ ಹೇಳಿದ. ತದನಂತರ ದಲ್ಲಾಳಿ ಗಡಿಯಲ್ಲಿ ತಂತಿಯನ್ನು ಕತ್ತರಿಸುತ್ತಾನೆ ಮತ್ತು ಅದರ ಕೆಳಗಿನಿಂದ ಭಾರತದಲ್ಲಿ ಪ್ರವೇಶಿಸುತ್ತೇವೆಂದು ಎಂದು ಹಸಮತ ಹೇಳಿದನು. ( ಇಂತಹ ಘಟನೆಗಳು ನಡೆಯುತ್ತಿರುವಾಗ ಗಡಿಯಲ್ಲಿ ರಕ್ಷಣೆ ಮಾಡುವ ಗಡಿಭದ್ರತಾ ಪಡೆಯ ಸೈನಿಕರು ಮಲಗಿರುತ್ತಾರೆಯೇ ?- ಸಂಪಾದಕರು)