ತಮಿಳುನಾಡಿನಲ್ಲಿ ‘ದಿ ಕೇರಳ ಸ್ಟೋರಿ’ಯ ಎಲ್ಲಾ ಶೋಗಳು ರದ್ದು !

ಮಲ್ಟಿಪ್ಲೆಕ್ಸ್ ಥಿಯೇಟರ್ ಸಂಘಗಳ ನಿರ್ಧಾರ!

ಚೆನ್ನೈ (ತಮಿಳುನಾಡು) – ತಮಿಳುನಾಡು ಮಲ್ಟಿಪ್ಲೆಕ್ಸ್ ಅಸೋಸಿಯೇಷನ್​ ಮೇ 7 ಭಾನುವಾರದಿಂದ ರಾಜ್ಯಾದ್ಯಂತ ‘ದಿ ಕೇರಳ ಸ್ಟೋರಿ’ ಚಲನಚಿತ್ರದ ಪ್ರದರ್ಶನವನ್ನು ಬಂದ್ ಮಾಡಿದೆ. ‘ಈ ಚಿತ್ರವು ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ತರಬಹುದು’, ಎಂದು ಈ ಸಂಘಟನೆ ಹೇಳಿದೆ. ತಮಿಳುನಾಡಿನ ಹಲವು ರಾಜಕೀಯ ಸಂಘಟನೆಗಳು ‘ಯಾವುದೇ ಥಿಯೇಟರ್‌ನಲ್ಲಿ ಈ ಚಿತ್ರವನ್ನು ಪ್ರದರ್ಶಿಸಿದರೆ ಅದನ್ನು ಬಂದ್ ಮಾಡುವುದಾಗಿ’ ಬೆದರಿಕೆ ಹಾಕಿವೆ. ತಮಿಳುನಾಡಿನ ದ್ರಾವಿಡ ಮುನ್ನೇತ್ರ ಕಳಘಂ (ದ್ರಾವಿಡ್ ಪ್ರಗತಿ ಸಂಘ) ಸರಕಾರಕ್ಕೂ ಚಲನಚಿತ್ರವನ್ನು ನಿಷೇಧಿಸುವಂತೆ ಒತ್ತಾಯಿಸಲಾಗಿತ್ತು. ಇನ್ನೊಂದೆಡೆ ಚಿತ್ರಕ್ಕೆ ದೇಶಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ದೇಶದಲ್ಲಿ ಕಳೆದ 3 ದಿನಗಳಲ್ಲಿ ಚಿತ್ರ 20 ಕೋಟಿ ರೂಪಾಯಿ ಗಳಿಸಿದೆ.

(ಸೌಜನ್ಯ : NDTV)

ಸಂಪಾದರಕ ನಿಲುವು

ಇದನ್ನೇ ಪ್ರಜಾಪ್ರಭುತ್ವದಲ್ಲಿ ಪ್ರಜೆಯ ದಬ್ಬಾಳಿಕೆ ಎಂದು ಹೇಳುತ್ತಾರೆ ! ಜಿಹಾದಿ ಮುಸ್ಲಿಮರ ಷಡ್ಯಂತ್ರವನ್ನು ಬಯಲಿಗೆಳೆಯುವ ಚಿತ್ರಕ್ಕೆ ಇಂತಹ ಅಘೋಷಿತ ನಿಷೇಧ ಹೇರಿರುವುದು ನಾಗರಿಕರ ಮೂಲಭೂತ ಸ್ವಾತಂತ್ರ್ಯಕ್ಕೆ ವಿರುದ್ಧವಾಗಿದೆ. ಕೇಂದ್ರ ಸರ್ಕಾರ ಈ ಬಗ್ಗೆ ಮಧ್ಯಪ್ರವೇಶಿಸಬೇಕು !

ಹಿಂದೂದ್ವೇಷ ಮತ್ತು ಮುಸ್ಲಿಂಪ್ರೇಮಿ ಡಿಎಂಕೆ ಸರಕಾರದ ರಾಜ್ಯದಲ್ಲಿ ಇನ್ನೇನಾಗಲು ಸಾಧ್ಯ ?