ಜಪಾನಿನಲ್ಲಿ ಶೇ. 50 ರಷ್ಟು ಮಹಿಳೆಯರಲ್ಲಿ ಧರ್ಮದ ಮೇಲಿನ ಶ್ರದ್ಧೆ ಕುಂಠಿತ !

ಪ್ರತಿಕಾತ್ಮಕ ಛಾಯಾಚಿತ್ರ

ಟೊಕಿಯೋ- ಜಪಾನಿಯರಲ್ಲಿ ಧರ್ಮದ ಮೇಲಿನ ಶ್ರದ್ಧೆ ನಿರಂತರವಾಗಿ ಕುಂಠಿತಗೊಳ್ಳುತ್ತಿದೆ, ಇದಕ್ಕಾಗಿ ಅನೇಕ ಧಾರ್ಮಿಕ ಸಂಘಟನೆಗಳಿಗೆ ರಾಜಕೀಯದೊಂದಿಗೆ ಇರುವ ಸಂಬಂಧ ಮತ್ತು ಅವರಿಂದ ಆಗುತ್ತಿರುವ ಹಗರಣಗಳು ಕಾರಣವಾಗಿದೆಯೆಂದು ಹೇಳಲಾಗುತ್ತಿದೆ. ಟೊಕಿಯೋದ ತ್ಸುಕಿಜಿ ಹೊನಾಗಜಿ ದೇವಸ್ಥಾನದಲ್ಲಿ ದರ್ಶನಕ್ಕಾಗಿ ಬಂದಿದ್ದ ಸುಮಾರು 1 ಸಾವಿರ 600 ಜನರನ್ನು, `ನಿಮ್ಮ ಧರ್ಮದ ಮೇಲಿನ ಶ್ರದ್ಧೆಯಲ್ಲಿ ಬದಲಾವಣೆಯಾಗಿದೆಯೇ?’ ಎಂದು ಪ್ರಶ್ನಿಸಲಾಯಿತು. ಆಗ ಶೇ. 39.7 ರಷ್ಟು ಜನರು, `ನಮಗೆ ಧರ್ಮದ ಮೇಲಿನ ವಿಶ್ವಾಸ ಮೊದಲಿಗಿಂತ ಕಡಿಮೆಯಾಗಿದೆ’ ಎಂದು ಹೇಳಿದರು. 18 ರಿಂದ 49 ವಯಸ್ಸಿನ ಹೆಚ್ಚಿನ ಮಹಿಳೆಯರಲ್ಲಿ ಧರ್ಮದ ಬಗ್ಗೆ ನಕಾರಾತ್ಮಕ ವಿಚಾರ ಇರುವುದು ಕಂಡು ಬಂದಿತು. ಸುಮಾರು ಶೇ. 50 ರಷ್ಟು ಮಹಿಳೆಯರೂ `ಧರ್ಮದ ಮೇಲಿನ ನಮ್ಮ ವಿಶ್ವಾಸ ಮೊದಲಿಗಿಂತ ಕಡಿಮೆಯಾಗಿದೆ’, ಎಂದು ಹೇಳಿದರು. 60 ಕ್ಕಿಂತ ಕಡಿಮೆ ವಯಸ್ಸಿನ ಹೆಚ್ಚಿನ ಪುರುಷರು ಮತ್ತು ಮಹಿಳೆಯರಿಗೆ ಅವರಿಗೆ ಬೌದ್ಧವಿಹಾರಕ್ಕೆ ಹೋಗಲು ಯಾವುದೇ ಕಾರಣ ಕಾಣಿಸುತ್ತಿಲ್ಲವೆಂದು ಅನಿಸುತ್ತಿದೆಯೆಂದು ಹೇಳಿದರು.