‘ದ ಕೇರಳ ಸ್ಟೋರಿ’ ಸಿನೆಮಾ ಪ್ರದರ್ಶನದ ಮೇಲೆ ನಿಷೇಧ ಹೇರಲು ಒತ್ತಾಯಿಸಿ ಸಲ್ಲಿಸಿದ್ದ ಅರ್ಜಿ ಕೇರಳ ಉಚ್ಚ ನ್ಯಾಯಾಲಯದಿಂದ ತಿರಸ್ಕಾರ !

ತಿರುವನಂತಪುರಂ (ಕೇರಳ) – ಕೇರಳ ಉಚ್ಚ ನ್ಯಾಯಾಲಯವು ‘ದ ಕೇರಳ ಸ್ಟೋರಿ’ ಈ ಸಿಎಮಾದ ಪ್ರದರ್ಶನದ ಮೇಲೆ ನಿಷೇಧ ಹೇರಲು ಒತ್ತಾಯಿಸಿರುವ ಅರ್ಜಿಯನ್ನು ತಿರಸ್ಕರಿಸಿದೆ. ಮೆ ೫ ರಂದು ನಡೆದ ವಿಚಾರಣೆಯ ಸಮಯದಲ್ಲಿ ನ್ಯಾಯಾಲಯವು ಈ ತೀರ್ಪು ನೀಡಿದೆ. ಇದೇ ದಿನದಂದು ಈ ಚಲನಚಿತ್ರ ದೇಶಾದ್ಯಂತ ಪ್ರದರ್ಶನಗೊಳಿಸಲಾಯಿತು. ಈ ಹಿಂದೆ ಸರ್ವೋಚ್ಚ ನ್ಯಾಯಾಲಯದಿಂದ ಈ ಚಲನಚಿತ್ರದ ಸಂದರ್ಭದಲ್ಲಿ ದಾಖಲಿಸಲಾದ ಮನವಿಯ ಮೇಲೆ ತ್ವರಿತ ವಿಚಾರಣೆಗೆ ನಿರಾಕರಿಸಿತ್ತು.

ಉಚ್ಚ ನ್ಯಾಯಾಲಯವು, ಕೇರಳದಲ್ಲಿನ ಜಾತ್ಯತೀತ ಸಮಾಜ ಈ ಸಿನೆಮಾವನ್ನು ಸ್ವೀಕರಿಸುವುದು. ನೀವು ಸಿನೆಮಾ ನೋಡದೇ ಅದನ್ನು ನಿಷೇಧಿಸಲು ಹೇಗೆ ಒತ್ತಯಿಸುತ್ತಿರಿ ? ಎಂದು ನ್ಯಾಯಾಲಯವು ಅರ್ಜಿದಾರರಿಗೆ ಪ್ರಶ್ನಿಸಿತು. ‘ಈ ಚಲನಚಿತ್ರದ ಟ್ರೈಲರ್ (ಚಲನಚಿತ್ರದ ಜಾಹೀರಾತು) ನೋಡಿ ಅದರಲ್ಲಿ ಏನಾದರೂ ತಪ್ಪು ಇರುವುದು, ಎಂದು ಏನು ಕಂಡು ಬಂದಿಲ್ಲ, ಹೇಗೆ ಸಮೀಕ್ಷೆ ಕೂಡ ನ್ಯಾಯಾಲಯ ನೋಂದಾಯಿಸಿದೆ.

ಮದ್ರಾಸ್ ಉಚ್ಚ ನ್ಯಾಯಾಲಯದಿಂದ ಕೂಡ ಅರ್ಜಿ ತಿರಸ್ಕೃತ !

‘ದ ಕೇರಳ ಸ್ಟೋರಿ’ಯನ್ನು ನಿಷೇಧಿಸಲು ಒತ್ತಾಯಿಸಿದ ಅರ್ಜಿಯನ್ನು ಮದ್ರಾಸ್ ಉಚ್ಚ ನ್ಯಾಯಾಲಯದಲ್ಲಿ ಕೂಡ ದಾಖಲಿಸಲಾಗಿತ್ತು. ‘ಸಿನೆಮಾ ಪ್ರದರ್ಶನವಾದರೆ ದೇಶದಲ್ಲಿನ ಧಾರ್ಮಿಕ ಸೌಹಾರ್ದತೆ ಮತ್ತು ಸಾರ್ವಜನಿಕ ಶಾಂತಿ ಹದಗೆಡುವುದು’, ಎಂದು ಈ ಅರ್ಜಿಯಲ್ಲಿ ದಾವೆ ಮಾಡಲಾಗಿತ್ತು. ನ್ಯಾಯಾಲಯವು ವಿಚಾರಣೆಯ ಸಮಯದಲ್ಲಿ, ನೀವು ಕೊನೆಯ ಕ್ಷಣದಲ್ಲಿ ಏಕೆ ಬರುತ್ತೀರಿ ? ಮೊದಲೇ ಬಂದಿದ್ದರೆ ಯಾರಿಗಾದರೂ ಚಲನಚಿತ್ರ ನೋಡಿ ನಿಶ್ಚಯಿಸಲು ಹೇಳಬಹುದಾಗಿತ್ತು. ನೀವು ಚಲನಚಿತ್ರ ನೋಡದೆ ಬಂದಿದ್ದೀರಿ ಎಂದು ಹೇಳಿದರು.