ಲಕ್ಷ್ಮಣಪುರಿ (ಉತ್ತರಪ್ರದೇಶ) – ಇಲ್ಲಿ ಒಂದು ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಪ್ರಮಾಣದಲ್ಲಿ ಪ್ರಸಾರಗೊಂಡಿದೆ. ಇದರಲ್ಲಿ ಸ್ಕೂಟಿ ಮೇಲೆ ಶಹಾದತ ಅಲಿ ಎಂಬ ಒಬ್ಬ ಪೊಲೀಸ ಸಿಬ್ಬಂದಿಯು ಸೈಕಲ್ ಮೇಲೆ ಹೋಗುತ್ತಿರುವ ಒಬ್ಬ ಶಾಲೆಯ ವಿದ್ಯಾರ್ಥಿನಿಯನ್ನು ಚುಡಾಯಿಸುತ್ತಿರುವುದು ಕಾಣುತ್ತಿದೆ. ಅವನ ಹಿಂದೆ ಬರುವ ಒಬ್ಬ ಮಹಿಳೆ ಶಹಾದತನಿಗೆ ತಡೆಯುತ್ತಾಳೆ ಮತ್ತು ಅವನನ್ನು ಪಕ್ಕಕ್ಕೆ ನಿಲ್ಲಲು ಹೇಳುತ್ತಾಳೆ. ಸಂಬಂಧಿತ ವಿದ್ಯಾರ್ಥಿನಿ ಶಹಾದತನ ಮಗನ ತರಗತಿಯಲ್ಲಿ ಓದುತ್ತಿದ್ದಾಳೆ ಎಂದು ಮಹಿಳೆಗೆ ಸುಳ್ಳು ಹೇಳುತ್ತಾನೆ; ಆದರೆ ಅವನು ಹೇಳಿರುವ ಶಾಲೆಯ ಹೆಸರು ತಪ್ಪಾಗಿರುತ್ತದೆ. ಅದರಿಂದ ಮಹಿಳೆಯು ಪೊಲೀಸನ ಮೇಲೆ, ‘ಆತ ಯಾವಾಗಲೂ ರಸ್ತೆಯಲ್ಲಿನ ಹೆಣ್ಣು ಮಕ್ಕಳನ್ನು ಚುಡಾಯಿಸುತ್ತಿರುತ್ತಾನೆ’, ಎಂದು ಆರೋಪಿಸುವುದು ಕಾಣುತ್ತದೆ.
ಇದರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅಸಮಾಧಾನ ವ್ಯಕ್ತವಾಗುತ್ತಿದ್ದು ಜನರು ಅವನನ್ನು ಅಮಾನತಗೊಳಿಸಿ ಬಂಧಿಸಲು ಒತ್ತಾಯಿಸುತ್ತಿದ್ದಾರೆ. ಪೊಲೀಸರು ಕೂಡ ಈ ಘಟನೆಯನ್ನು ಗಮನಕ್ಕೆ ತೆಗೆದುಕೊಂಡು ದೂರು ದಾಖಲಿಸಿ ಶಹಾದತನಿಗೆ ಬಂಧಿಸಿದ್ದಾರೆ. ಅವನ ವಿರುದ್ಧ ಅಮಾನತು ಕ್ರಮ ಕೈಗೊಳ್ಳಲಾಗುವುದು, ಎಂದು ಸ್ಥಳೀಯ ಪೊಲೀಸ ಅಧಿಕಾರಿ ಆಶ್ವಾಸನೆ ಕೂಡ ನೀಡಿದ್ದಾರೆ.
ಸಂಪಾದಕೀಯ ನಿಲುವುಬೇಲಿಯೇ ಹೊಲ ಮೇಯ್ದಂತೆ ಆಯಿತು ! ಉತ್ತರಪ್ರದೇಶ ಪೊಲೀಸರ ಹೆಸರು ಹಾಳು ಮಾಡುವ ಇಂತಹ ಕಾಮುಕ ಮುಸಲ್ಮಾನನ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ! |