ಶ್ರೀ ಮಹಾಕಾಳಿಮಾತೆಯ ಅವಮಾನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಉಕ್ರೇನ್ ಗೆ ರಷ್ಯಾ ಕೂಡ ಟೀಕಿಸಿದೆ

ನವದೆಹಲಿ – ಉಕ್ರೇನ್‌ನ ರಕ್ಷಣಾ ಸಚಿವಾಲಯವು ಶ್ರೀ ಮಹಾಕಾಳಿ ದೇವಿಯನ್ನು ಅವಮಾನಿಸುವ ಚಿತ್ರವನ್ನು ಪ್ರಸಾರ ಮಾಡಿದ ನಂತರ ಭಾರತವು ವಿರೋಧಿಸಿತ್ತು. ನಂತರ ಉಕ್ರೇನ್ ಕ್ಷಮೆಯಾಚಿಸಿತ್ತು. ಈಗ ರಷ್ಯಾ ಕೂಡ ಈ ಚಿತ್ರದ ಬಗ್ಗೆ ಉಕ್ರೇನ್ ಅನ್ನು ವಿರೋಧಿಸಿದೆ.

ವಿಶ್ವಸಂಸ್ಥೆಯ ರಷ್ಯಾದ ಪ್ರತಿನಿಧಿ ದಿಮಿತ್ರಿ ಪೋಲಿನ್ಸ್ಕಿಇವರು, ಉಕ್ರೇನ್ ಸರಕಾರವು ಯಾರ ಧಾರ್ಮಿಕ ಭಾವನೆಗಳನ್ನು ಗೌರವಿಸುವುದಿಲ್ಲ; ಅದು ಹಿಂದೂ ಆಗಿರಲಿ, ಮುಸ್ಲಿಂ ಆಗಿರಲಿ ಅಥವಾ ಕ್ರೈಸ್ತರಾಗಿರಲಿ. ಉಕ್ರೇನ್ ಸೈನಿಕರು ಕುರಾನ್ ಅನ್ನು ಸುಡುತ್ತಿದ್ದಾರೆ. ಶ್ರೀ ಮಹಾಕಾಳಿಮಾತೆಗೆ ಅಗೌರವ ತೋರುತ್ತಿದ್ದಾರೆ. ಕ್ರೈಸ್ತರ ಧಾರ್ಮಿಕ ಸ್ಥಳಗಳನ್ನು ಧ್ವಂಸಗೊಳಿಸುತ್ತಿವೆ. ಉಕ್ರೇನ್ ನಾಜಿ ಸಿದ್ಧಾಂತವನ್ನು ಮಾತ್ರ ನಂಬುತ್ತದೆ ಎಂದು ಹೇಳಿದೆ.

ಸಂಪಾದಕೀಯ ನಿಲುವು

ಹಿಂದೂಗಳ ದೇವರುಗಳ ಅವಹೇಳನದ ಬಗ್ಗೆ ಹಿಂದೂಗಳ ಪರವಾಗಿ ತೆಗೆದುಕೊಂಡ ರಷ್ಯಾಕ್ಕೆ ಧನ್ಯವಾದಗಳು !