ಆದರ್ಶ ಮಹಿಳಾ ಪೊಲೀಸ್ ! ಕೆ. ಕಲ್ಪನಾ

ಭಾಗ್ಯನಗರ (ಆಂಧ್ರಪ್ರದೇಶ)ಇಲ್ಲಿ ಪರೀಕ್ಷೆಯ ಕೇಂದ್ರಗಳಲ್ಲಿ ಸಂಚಾರವಾಣಿಯನ್ನು ಒಯ್ಯುವ ಅನುಮತಿ ಇರಲಿಲ್ಲ. ಅದರ ಪಾಲನೆಯನ್ನು ಮಾಡುತ್ತಾ ಓರ್ವ ಮಹಿಳಾ ಪೊಲೀಸ್, ಸಂಚಾರವಾಣಿಯನ್ನು ತೆಗೆದುಕೊಂಡು ಹೋಗುತ್ತಿದ್ದ ತನ್ನ ಪೊಲೀಸ್ ಆಯುಕ್ತರನ್ನೇ ತಡೆದಳು. ಪರೀಕ್ಷೆಯ ಕೇಂದ್ರಗಳ ಸುರಕ್ಷಾವ್ಯವಸ್ಥೆಯನ್ನು ನೋಡಲು ಬಂದ ಪೊಲೀಸ್ ಆಯುಕ್ತರಿಗೆ ಮಹಿಳಾ ಪೊಲೀಸ್ ಕಾನ್‌ಸ್ಟೇಬಲ್ ಕೆ. ಕಲ್ಪನಾ ಇವಳು ‘ಪರೀಕ್ಷೆಯ ಕೇಂದ್ರಗಳಲ್ಲಿ ಸಂಚಾರವಾಣಿಯನ್ನು ತೆಗೆದುಕೊಂಡು ಹೋಗುವ ಅನುಮತಿ ಇಲ್ಲದಿರುವುದರಿಂದ ನೀವು ಅದನ್ನು ಇಲ್ಲಿಯೇ ಇಟ್ಟುಹೋಗಿ, ಎಂದಳು. ಮಹತ್ವದ ವಿಷಯವೆಂದರೆ ಆಯುಕ್ತರು ಸಹ ತಮ್ಮ ಸಂಚಾರವಾಣಿಯನ್ನು ತಕ್ಷಣ ಅಲ್ಲಿಟ್ಟರು ಮತ್ತು ಅವಳಿಗೆ ‘ಇದೇ ರೀತಿ ಎಚ್ಚರಿಕೆಯಿಂದ  ಪ್ರಾಮಾಣಿಕತನದಿಂದ ನಿಮ್ಮ ಕರ್ತವ್ಯಗಳನ್ನು ಪಾಲಿಸಬೇಕು, ಎಂದು ಹೇಳಿ ಅವರು ಅವಳ ಪ್ರೋತ್ಸಾಹನೆಗಾಗಿ ೫೦೦ ರೂಪಾಯಿಗಳ ಬಹುಮಾನವನ್ನೂ ನೀಡಿದರು. ಇಲ್ಲಿ ತಮ್ಮ ತಪ್ಪನ್ನು ಪ್ರಾಮಾಣಿಕವಾಗಿ ಸ್ವೀಕರಿಸಿ ಸಂಬಂಧಿತರ ಪ್ರಶಂಸೆಯನ್ನು ಮಾಡುವುದು, ಅತ್ಯಂತ ಮಹತ್ವದ್ದಾಗಿದ್ದು ಭಾವನಿಕ ಸ್ತರದಲ್ಲಿ ಇರದೇ ಇಬ್ಬರೂ ಮಾಡಿದ ಕೃತಿಗಳು ಅಭಿನಂದನೀಯ ಮತ್ತು ಅನುಕರಣೀಯವಾಗಿವೆ. ಹಾಗಾಗಿ ಈ ಘಟನೆ ಬಗ್ಗೆ ಬಹಳಷ್ಟು ಚರ್ಚೆಯಾಗುತ್ತಿದ್ದು, ಎಲ್ಲೆಡೆ ಅವರ ಪ್ರಶಂಸೆಯಾಗುತ್ತಿದೆ.

ತಮ್ಮ ಕರ್ತವ್ಯದಲ್ಲಿರುವಾಗ ಈ ರೀತಿ ಯೋಗ್ಯ ಕೃತಿಯನ್ನು ಮಾಡುವವರು ಪೊಲೀಸ್ ಪಡೆಯಲ್ಲಿ ಎಷ್ಟು ಜನರಿದ್ದಾರೆ ?

ಯಾವುದೇ ಭೇದಭಾವವನ್ನು ಮಾಡದೇ ನಿಷ್ಪಕ್ಷಪಾತವಾಗಿ ತನ್ನ ಕರ್ತವ್ಯವನ್ನು ನಿರ್ವಹಿಸುವ ಮಹಿಳಾ ಪೊಲೀಸಳ ಆದರ್ಶವನ್ನು ಎಲ್ಲೆಡೆಯ ಪೊಲೀಸರು ತೆಗೆದುಕೊಂಡರೆ ಪೊಲೀಸರ ಪ್ರತಿಷ್ಠೆ ಖಂಡಿತವಾಗಿಯೂ ಹೆಚ್ಚಾಗಲು ಸಹಾಯವಾಗುವುದು ! ಹಾಗೆಯೇ ಈ ಆದರ್ಶವನ್ನು ಮಹಿಳೆಯರೂ ತೆಗೆದುಕೊಳ್ಳುವುದು ಆವಶ್ಯಕವಾಗಿದೆ. ಪ್ರಸ್ತುತ ಮಹಿಳೆಯರ ಮೇಲೆ ಅನೇಕ ಅತ್ಯಾಚಾರಗಳಾಗುತ್ತಿವೆ. ಇದನ್ನು ತಡೆಗಟ್ಟಲು ಮಹಿಳೆಯರು ಸಹ ಇದೇ ರೀತಿ ತಮ್ಮನ್ನು ಸಿದ್ಧಗೊಳಿಸುವುದು ಆವಶ್ಯಕವಾಗಿದೆ.

ಅಪರಾಧ ಮತ್ತು ಅರಾಜಕತೆಯನ್ನು ತಡೆಗಟ್ಟುವುದು ಪೊಲೀಸರ ಪ್ರಮುಖ ಕರ್ತವ್ಯ

ಪೊಲೀಸ್ ಪಡೆಯ ಉದ್ದೇಶ ನ್ಯಾಯ ಮತ್ತು ಕಾನೂನನ್ನು ಪಾಲಿಸುವುದಾಗಿದೆ. ಕಳೆದ ಕೆಲವು ದಿನಗಳಲ್ಲಿನ ಪೊಲೀಸರ ಸಂದರ್ಭದಲ್ಲಿನ ಸುದ್ದಿಗಳನ್ನು ಓದಿ ಪೊಲೀಸ್ ಪಡೆಯ  ವೇಗವಾಗಿ ಆಗುತ್ತಿರುವ ಅವನತಿಯು ಕಂಡು ಬರುತ್ತಿದೆ. ಪೊಲೀಸ್ ಪಡೆಯು ಸಾಮಾಜಿಕ ಸ್ವಾಸ್ಥ ಕ್ಕಾಗಿ ಅತ್ಯಂತ ಮಹತ್ವದ ವ್ಯವಸ್ಥೆಯಾಗಿದೆ. ಈ ಪೋಲಿಸ್ ಪಡೆಗೆ ಒಂದು ವೇಳೆ ದುಷ್ಕೃತ್ಯಗಳ ಹುಳ ಹತ್ತಿದರೆ, ಭವಿಷ್ಯದಲ್ಲಿ ಅಪರಾಧಗಳು ಅನಿಯಂತ್ರಿತವಾಗಿ ಸಮಾಜ ವ್ಯವಸ್ಥೆಯು ಅಪಾಯದಲ್ಲಿ ಸಿಲುಕಬಹುದು. ಎಲ್ಲ ಪಕ್ಷಗಳ ಜನಪ್ರತಿನಿಧಿಗಳು ರಾಜಕೀಯ ಹಿತಕ್ಕೆ ಆದ್ಯತೆ ನೀಡದೇ, ಸಮಾಜಹಿತಕ್ಕೆ ಎಲ್ಲಕ್ಕಿಂತ ಹೆಚ್ಚು ಆದ್ಯತೆಯನ್ನು ನೀಡಿ ಪೊಲೀಸ್ ಪಡೆಯ ಶುದ್ಧೀಕರಣದ ಕಡೆಗೆ ಕೂಡಲೇ ಗಮನಹರಿಸುವುದು ಆವಶ್ಯಕವಾಗಿದೆ. ಈ ರೀತಿಯ ಸುಧಾರಣೆಯನ್ನು ಮಾಡುತ್ತ ಪೊಲೀಸ್ ಪಡೆಯು ಹೆಚ್ಚೆಚ್ಚು ಪಾರದರ್ಶಕವಾದರೆ ಪೊಲೀಸರ ಪ್ರತಿಷ್ಠೆಯು ಖಂಡಿತವಾಗಿಯೂ ಸುಧಾರಿಸಬಹುದು !

– ಸೌ. ಅಪರ್ಣಾ ಜಗತಾಪ, ಪುಣೆ.