ಠಾಣೆಯಲ್ಲಿ ಮಾಮ-ಭಾಂಜೆ ದರ್ಗಾದ ಸ್ಥಳದ ಒತ್ತುವರಿಯ ತೆರವು ಮಾಡದಿದ್ದರೆ ಅಲ್ಲಿ ಶಂಕರನ ಮಂದಿರ ಕಟ್ಟುತ್ತೇವೆ !

  • ಲ್ಯಾಂಡ್ ಜಿಹಾದ್ ನ ವಿರುದ್ಧ ಮಹಾರಾಷ್ಟ್ರ ನವನಿರ್ಮಾಣ ವಿದ್ಯಾರ್ಥಿ ಸೇನೆಯ ಎಚ್ಚರಿಕೆ

  • ಭಾರತೀಯ ವಾಯುಪಡೆ ನೆಲೆಗೆ ಅಪಾಯ

  • ಅರಣ್ಯ ಇಲಾಖೆಯಿಂದ ಅಕ್ಷಮ್ಯ ನಿರ್ಲಕ್ಷ್ಯ

  • ಆಡಳಿತದಿಂದ ರಂಜಾನ್ ಕಾರಣ ನೀಡಿ ಕ್ರಮಕೈಗೊಳ್ಳವುದನ್ನು ಮುಂದುಡಿತು !

ಠಾಣೆ – ಪ್ರವಾಸಿ ತಾಣವಾಗಿರುವ ಯೂರ್‌ನ ಮಾಮಾ-ಭಾಂಜೆ ದರ್ಗಾದ ಬಳಿ ಭಾರಿ ಅತಿಕ್ರಮಣ ನಡೆದಿದೆ. ಇದರಿಂದ ಅಲ್ಲಿಂದ ಸ್ವಲ್ಪ ದೂರದಲ್ಲಿರುವ ಕಾನ್ಹೇರಿ ಬೆಟ್ಟದಲ್ಲಿರುವ ಭಾರತೀಯ ವಾಯುಸೇನೆಯ ನೆಲೆಗೆ ಅಪಾಯ ಎದುರಾಗಿದೆ. ಅನಧಿಕೃತ ಧರ್ಮ ಸ್ಥಳಗಳಿಗಿಂತ ದೇಶದ ಭದ್ರತೆ ಮುಖ್ಯವಾಗಿದೆ. ಆದ್ದರಿಂದ ಆಡಳಿತ ಮಂಡಳಿಯು ಕೂಡಲೇ ಈ ಒತ್ತುವರಿ ತೆರವು ಮಾಡಬೇಕು, ಇಲ್ಲವಾದಲ್ಲಿ ದರ್ಗಾ ಪಕ್ಕದಲ್ಲಿ ಶಂಕರ ದೇಗುಲ ನಿರ್ಮಿಸುವುದಾಗಿ ಮಹಾರಾಷ್ಟ್ರ ನವನಿರ್ಮಾಣ ವಿದ್ಯಾರ್ಥಿ ಸೇನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಸಂದೀಪ ಪಾಚಂಗೆ ಅವರು ಸಂಜಯ ಗಾಂಧಿ ರಾಷ್ಟ್ರೀಯ ಉದ್ಯಾನವನದ ನಿರ್ದೇಶಕರು ಹಾಗೂ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಲಿಖಿತ ಹೇಳಿಕೆ ಮೂಲಕ ಎಚ್ಚರಿಸಿದ್ದಾರೆ.

ಮನವಿಯಲ್ಲಿ…

೧. ಮಾಮ-ಭಾಂಜೆ ದರ್ಗಾ ಬಳಿ ಅಕ್ರಮ ಕಟ್ಟಡಗಳನ್ನು ನಿರ್ಮಿಸಲಾಗಿದೆ ಎಂದು ಸ್ಥಳೀಯರಿಂದ ಮಹಾರಾಷ್ಟ್ರ ನವನಿರ್ಮಾಣ ಸೇನೆಗೆ ಹಲವು ದೂರುಗಳು ಬಂದಿವೆ.

೨. ವಾಯುಸೇನೆ ನಿಲ್ದಾಣದ ೧೦೦ ಮೀಟರ್ ವ್ಯಾಪ್ತಿಯಲ್ಲಿ ಮರಗಳನ್ನು ನೆಡುವುದನ್ನು ನಿಷೇಧಿಸಿದ್ದರೂ, ಇಂತಹ ಅಕ್ರಮ ನಿರ್ಮಾಣಗಳು ಅವ್ಯಾಹತವಾಗಿ ನಡೆಯುತ್ತಿವೆ. ಆದ್ದರಿಂದ ಭಾರತೀಯ ವಾಯುಸೇನೆಯ ಅಧಿಕಾರಿಗಳು ಅರಣ್ಯ ಇಲಾಖೆ ಮತ್ತು ಜಿಲ್ಲಾಡಳಿತದೊಂದಿಗೆ ಪತ್ರ ವ್ಯವಹಾರ ನಡೆಸಿ ಇಲ್ಲಿನ ಅಕ್ರಮ ನಿರ್ಮಾಣಗಳನ್ನು ಕೂಡಲೇ ತೆರವುಗೊಳಿಸುವಂತೆ ಆಡಳಿತಕ್ಕೆ ಒತ್ತಾಯಿಸಿದರು; ಆದರೆ ಆಡಳಿತ ಮಂಡಳಿ ರಂಜಾನ್ ಕಾರಣ ನೀಡಿ ಕ್ರಮಕ್ಕೆ ವಿಳಂಬ ಮಾಡಿದೆ. (ಅತಿಕ್ರಮಣಕಾರರ ಮುಂದೆ ಕುಟುಕು ಎಸೆಯುವ ಆಡಳಿತ ! – ಸಂಪಾದಕರು) ಇದರಿಂದ ಕೊನೇಗೆ ಮಹಾರಾಷ್ಟ್ರ ನವ ನಿರ್ಮಾಣ ಸೇನೆಯು ಅನಧಿಕೃತ ದರ್ಗಾ ನಿರ್ಮಾಣವನ್ನು ಕೂಡಲೇ ತೆರವುಗೊಳಿಸುವಂತೆ ಅರಣ್ಯ ಇಲಾಖೆಗೆ ಮನವಿ ಸಲ್ಲಿಸಿ ಎಚ್ಚರಿಕೆ ನೀಡಿದೆ.

ಸಂಪಾದಕೀಯ ನಿಲುವು

ವಾಯುಪಡೆಯ ನೆಲೆಯಂತಹ ಸೂಕ್ಷ್ಮ ಪ್ರದೇಶಗಳಲ್ಲಿ ಅತಿಕ್ರಮಣವಾಗುವವರೆಗೆ ಸರಕಾರಿ ವ್ಯವಸ್ಥೆಗಳು ಏನು ಮಾಡುತ್ತಿದ್ದವು ? ಮೊದಲು ಬೇಜವಾಬ್ದಾರಿತನ ತೋರಿದವರ ವಿರುದ್ಧ ಕ್ರಮ ಕೈಗೊಳ್ಳಿ !