ಸ್ತ್ರೀಯರೇ, ಧರ್ಮಶಾಸ್ತ್ರವನ್ನು ತಿಳಿದುಕೊಳ್ಳಿರಿ !

ಸ್ತ್ರೀಯರ ಧೈರ್ಯತನ !

ನಮ್ಮ ದೇಶದಲ್ಲಿ ವೈಧವ್ಯವನ್ನು ಸ್ತ್ರೀಜೀವನದ ಅತೀ ದೊಡ್ಡ ಆಘಾತ ಎಂದು ಪರಿಗಣಿಸಲಾಗಿದೆ. ಅನೇಕ ವಿಧವಾಸ್ತ್ರೀಯರು ಪುರುಷರು ನಾಚಿಕೆಪಡುವಂತಹ ಪರಾಕ್ರಮ, ರಾಜಕಾರಣ ಮತ್ತು ಸಮಾಜಸೇವೆ ಮಾಡಿ ತ್ರಿಕಾಲಬಾಧಿತ ಆದರ್ಶವನ್ನು ಹಾಕಿಕೊಟ್ಟಿದ್ದಾರೆ. ಶಿವಾಜಿ ಮಹಾರಾಜರ ತಾಯಿ ಜೀಜಾಮಾತಾ, ಪುಣ್ಯಶ್ಲೋಕ ಅಹಲ್ಯಾಬಾಯಿ ಹೋಳಕರ, ವೀರಾಂಗನೆ ಝಾನ್ಸಿ ರಾಣಿ ಲಕ್ಷೀಬಾಯಿ ಇವರಿಗೆ ವೈಧವ್ಯ ಪ್ರಾಪ್ತವಾದರೂ, ಅವರು ಎದೆಗುಂದಲಿಲ್ಲ. ತದ್ವಿರುದ್ಧ ರಾಜಕಾರಣ, ಸಮಾಜಕಾರಣ ಇವುಗಳಲ್ಲಿ ಅವರು ಬಹುದೊಡ್ಡ ಆದರ್ಶವನ್ನು ಬಿತ್ತಿದರು. ಪರಿಸ್ಥಿತಿಯ ಜೊತೆಗೆ ಹೋರಾಡುವ ಶಕ್ತಿ ಮತ್ತು ಪ್ರಯತ್ನ ಜನ್ಮದಿಂದಲೇ ಸ್ತ್ರೀಯರಿಗೆ ನಿಸರ್ಗದಿಂದ ಪ್ರಾಪ್ತವಾಗುತ್ತದೆ ಎಂದು ಅನಿಸುತ್ತದೆ. ಆದುದರಿಂದ ಭಾರತದಲ್ಲಿ ಸಾವಿರಾರು ರೈತರು ಪರಿಸ್ಥಿತಿಗೆ ಶರಣಾಗಿ ಆತ್ಮಹತ್ಯೆಯನ್ನು ಮಾಡಿಕೊಂಡರು; ಆದರೆ ಅವರ ಪತ್ನಿಯರು ಇಂತಹ ಅಯೋಗ್ಯ ವಿಚಾರವನ್ನು ಎಂದಿಗೂ ಮಾಡಲಿಲ್ಲ. ಪರಿಸ್ಥಿತಿಯನ್ನು ಎದುರಿಸಲು ಧೈರ್ಯದಿಂದ ನಿಂತುಕೊಂಡರು. ಸಮಾಜದಲ್ಲಿ ಇಂದಿಗೂ, ವೈಧವ್ಯದ ನಂತರವೂ ಎದೆಗುಂದದೆ ಮನೆಸಂಸಾರವನ್ನು ಸರಿಯಾಗಿ ನಡೆಸಿಕೊಂಡು ತಮ್ಮ ಮಕ್ಕಳಿಗೆ ಕಲಿಸಿ ದೊಡ್ಡವರನ್ನಾಗಿ ಮಾಡಿರುವ ಅನೇಕ ತಾಯಂದಿರಿದ್ದಾರೆ. ಆದುದರಿಂದ ಮಾತೆಯರ ಶ್ರೇಷ್ಠತೆ ಯನ್ನು ಕೊಂಡಾಡಲಾಗುತ್ತದೆ. ಅಷ್ಟೆ ಅಲ್ಲ ಸಮಾಜದಲ್ಲಿ ಇಂತಹವರನ್ನು ಗೌರವಿಸಲಾಗುತ್ತದೆ. !

– ಶ್ರೀ. ಶಂಕರ ಗೊ. ಪಾಂಡೆ