ಸ್ತ್ರೀಯರಿಗೂ ಆಧ್ಯಾತ್ಮಿಕ ದೃಷ್ಟಿಯಿಂದ ಉನ್ನತಿ ಪಡೆಯಲು ಸಮಾನ ಅವಕಾಶ ! – ಸಂಶೋಧನೆಯ ನಿಷ್ಕರ್ಷ

‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ’ ವತಿಯಿಂದ ಥೈಲ್ಯಾಂಡ್ ನಲ್ಲಿನ ಅಂತರಾಷ್ಟ್ರೀಯ ಪರಿಷತ್ತಿನಲ್ಲಿ ಶೋಧ ಪ್ರಬಂಧ ಮಂಡನೆ !

ಒಳ್ಳೆಯದು ಅಥವಾ ಕೆಟ್ಟ ವ್ಯಕ್ತಿತ್ವ ಇದು ನಮ್ಮ ಜೀವನದಲ್ಲಿನ ಆಧ್ಯಾತ್ಮಿಕ ಅಂಶಗಳಿಗೆ ಸಂಬಂಧಿತವಾಗಿರುತ್ತದೆ. ಉನ್ನತ ಆಧ್ಯಾತ್ಮಿಕ ಮಟ್ಟ ಇರುವ ಅಂದರೆ ಒಳ್ಳೆಯ ಸಾಧನೆ ಮಾಡುವ ನಾಯಕರು ನಿಸ್ವಾರ್ಥಿಯಾಗಿರುತ್ತಾರೆ ಮತ್ತು ಅವರು ಸಮಾಜದ ಒಳ್ಳೆಯದಕ್ಕಾಗಿ ಕಾರ್ಯ ಮಾಡುತ್ತಾರೆ. ತದ್ವಿರುದ್ಧ ಆಧ್ಯಾತ್ಮಿಕ ಮಟ್ಟ ಕಡಿಮೆ ಇರುವ ಎಂದರೆ ಸಾಧನೆ ಮಾಡದಿರುವ ನಾಯಕರಲ್ಲಿ ಇತರರ ಬಗ್ಗೆ ಕಡಿಮೆ ವಿಚಾರವಿರುತ್ತದೆ. ಸ್ತ್ರೀಯಾಗಿರಲಿ ಅಥವಾ ಪುರುಷರಾಗಿರಲಿ ಬಹುತೇಕ ನಾಯಕರು ಸಾಧನೆ ಮಾಡುವುದಿಲ್ಲ, ಆದ್ದರಿಂದ ಅವರು ನಕಾರಾತ್ಮಕತೆಯಿಂದ ಬೇಗನೆ ಪ್ರಭಾವಿತರಾಗುತ್ತಾರೆ. ಆದ್ದರಿಂದ ಅವರ ಕೃತಿ ಮತ್ತು ನಿರ್ಣಯವು ಸಮಾಜದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಆಧ್ಯಾತ್ಮಿಕ ಸಾಧನೆ ಮಾಡುವುದರಿಂದ ಸ್ತ್ರೀ ಮತ್ತು ಪುರುಷ ಇವರಿಬ್ಬರಲ್ಲಿಯೂ ಆಧ್ಯಾತ್ಮಿಕ ದೃಷ್ಟಿಯಿಂದ ಉನ್ನತಿಯಾಗಲು ಅಥವಾ ನಿಜವಾದ ಅರ್ಥದಲ್ಲಿ ನಾಯಕರಾಗಲು ಸಮ ಪ್ರಮಾಣದಲ್ಲಿ ಸಹಾಯವಾಗುತ್ತದೆ, ಎಂದು ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಸೌ. ಶ್ವೇತಾ ಕ್ಲಾರ್ಕ್ ಇವರು ಪ್ರತಿಪಾದಿಸಿದರು.

ಸೌ. ಶ್ವೇತಾ ಶಾನ್ ಕ್ಲಾರ್ಕ್

ಸೌ. ಶ್ವೇತಾ ಕ್ಲಾರ್ಕ್ ಇವರು ಬ್ಯಾಂಕಾಕ್, ಥೈಲ್ಯಾಂಡ್ ನಲ್ಲಿ ‘ಟುಮಾರೋ ಪೀಪಲ್’ ಈ ಸಂಘಟನೆಯಿಂದ ಆಯೋಜಿಸಿದ್ದ ‘೧೪ ನೇ ಮಹಿಳಾ ನೇತೃತ್ವ ಮತ್ತು ಸಕ್ಷಮತೆ ಪರಿಷತ್, 2023’ ( ಡಬ್ಲ್ಯೂ.ಎಲ್.ಇ.ಸಿ 2023l ) ಈ ಆನ್ಲೈನ್ ಅಂತರಾಷ್ಟ್ರೀಯ ಪರಿಷತ್ತಿನಲ್ಲಿ ಮಾತನಾಡುತ್ತಿದ್ದರು. ಈ ಪರಿಷತ್ತಿನಲ್ಲಿ ಸೌ. ಶ್ವೇತಾ ಇವರು, ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ವತಿಯಿಂದ ಅಧ್ಯಾತ್ಮವು ಮಹಿಳಾ ನಾಯಕಿಯರನ್ನು ಹೇಗೆ ಸಕ್ಷಮಗೊಳಿಸುತ್ತದೆ’ ಈ ವಿಷಯದ ಬಗ್ಗೆ ಶೋಧ ಪ್ರಬಂಧ ಮಂಡಿಸಿದರು. ಮಹರ್ಷಿ ಅದ್ಯಾತ್ಮ ವಿಶ್ವವಿದ್ಯಾಲಯದ ಸಂಸ್ಥಾಪಕರಾದ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರು ಈ ಶೋಧ ಪ್ರಬಂಧದ ಲೇಖಕರಾಗಿದ್ದಾರೆ ಹಾಗೂ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಸಂಶೋಧನೆ ಗುಂಪಿನಲ್ಲಿನ ಸಾಧಕರಾದ ಶ್ರೀ. ಶಾನ್ ಕ್ಲಾರ್ಕ್ ಮತ್ತು ಸೌ. ಶ್ವೇತಾ ಕ್ಲಾರ್ಕ್ ಇವರು ಸಹಲೇಖಕರಾಗಿದ್ದಾರೆ.

ಸೌ. ಶ್ವೇತಾ ಈ ಸಮಯದಲ್ಲಿ ಮಾತನಾಡುತ್ತಾ, ಉನ್ನತ ಆಧ್ಯಾತ್ಮಿಕ ಮಟ್ಟ ಇರುವ ಸ್ತ್ರೀ ಪುರುಷರು ಮತ್ತು ಕಡಿಮೆ ಆಧ್ಯಾತ್ಮಿಕ ಮಟ್ಟ ಇರುವ ಸ್ತ್ರೀ ಪುರುಷರು ಹೀಗೆ ಎರಡು ಗುಂಪಿನಲ್ಲಿ ‘ಯೂನಿವರ್ಸಲ್ ಔರಾ ಸ್ಕ್ಯಾನರ್ (ಯುಎಎಸ್)’ ಮೂಲಕ ಪರೀಕ್ಷಣೆ ಮಾಡಲಾಯಿತು. ಉನ್ನತ ಆಧ್ಯಾತ್ಮಿಕ ಮಟ್ಟ ಇರುವ ಸ್ತ್ರೀ ಪುರುಷರಲ್ಲಿ ಸಕಾರಾತ್ಮಕ ಊರ್ಜೆಯ ಪ್ರಭಾವಲಯ ಹೆಚ್ಚಿನ ಪ್ರಮಾಣದಲ್ಲಿ ಕಂಡು ಬರುತ್ತದೆ, ಹಾಗೂ ಕಡಿಮೆ ಆಧ್ಯಾತ್ಮಿಕ ಮಟ್ಟ ಇರುವ ಸ್ತ್ರೀ ಪುರುಷರಲ್ಲಿ ನಕಾರಾತ್ಮಕ ಉರ್ಜೆಯ ಪ್ರಭಾವ ಕಂಡು ಬರುತ್ತದೆ. ಇನ್ನೊಂದು ಪರೀಕ್ಷಣೆಯಲ್ಲಿ ಕೇವಲ 30 ನಿಮಿಷ ನಾಮಜಪ ಮಾಡಿದ ನಂತರ ಸ್ತ್ರೀ ಪುರುಷರಲ್ಲಿನ ನಕಾರಾತ್ಮಕ ಉರ್ಜೆಯ ಪ್ರಭಾವಲಯ ಗಣನೀಯವಾಗಿ ಕಡಿಮೆಯಾಗಿರುವುದು ಕಂಡುಬಂತು. ಈ ಸಂಪೂರ್ಣ ಪ್ರಯೋಗದ ನಿಷ್ಕರ್ಷ ಮಂಡಿಸುವಾಗ ಸೌ. ಶ್ವೇತಾ ರವರು, ನಿಜವಾದ ಅರ್ಥದಲ್ಲಿ ನಾಯಕರಾಗಲು ಪ್ರತಿಯೊಬ್ಬರೂ ತಮ್ಮ ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆ ಮಾಡಿಕೊಂಡು ಆಧ್ಯಾತ್ಮಿಕ ದೃಷ್ಟಿಯಿಂದ ಸಾತ್ತ್ವಿಕ ಜೀವನ ನಡೆಸುವುದರ ಮೇಲೆ ಒತ್ತು ನೀಡುವುದು ಮಹತ್ವದ್ದಾಗಿದೆ ಎಂದರು.