ಇನ್‌ಸ್ಟಾಗ್ರಾಮ್‌ನಲ್ಲಿ ಸ್ನೇಹ ಬೆಳೆಸಿದ್ದ ಹುಡುಗನಿಂದಲೇ ವಂಚನೆ !
ಕಲ್ಯಾಣ್ – ಇಲ್ಲಿ ೧೫ ವರ್ಷದ ಬಾಲಕಿಯ ಮೇಲೆ ಅಪ್ರಾಪ್ತ ಬಾಲಕ ಸಹಿತ ಆತನ ಸಹಚರರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಸಂತ್ರಸ್ತೆ ಕೆಲವು ದಿನಗಳ ಹಿಂದೆ ಇನ್‌ಸ್ಟಾಗ್ರಾಮ್‌ನಲ್ಲಿ ಆರೋಪಿಯೊಬ್ಬನೊಂದಿಗೆ ಸ್ನೇಹ ಬೆಳೆಸಿದ್ದಳು. ಸಾಹಿಲ್ ರಾಜಭರ್, ಸುಜಲ್ ಗವಳಿ ಮತ್ತು ವಿಜಯ್ ಬೇರಾ ಎಂದು ಶಂಕಿತರ ಹೆಸರಾಗಿದೆ. ಅವರೊಂದಿಗೆ ಇನ್ನೂ ಒಬ್ಬ ಶಂಕಿತನಿದ್ದು ಆತ ಅಪ್ರಾಪ್ತನಾಗಿದ್ದಾನೆ. ಎಲ್ಲರನ್ನೂ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದು, ಅಪ್ರಾಪ್ತ ಶಂಕಿತನನ್ನು ಬಾಲಾಪರಾಧಿ ಸುಧಾರಣೆ ಕೇಂದ್ರಕ್ಕೆ ಕಳುಹಿಸಲಾಗಿದೆ. ಸಂತ್ರಸ್ತೆಯ ಕುಟುಂಬದವರು ಆಕೆ ನಾಪತ್ತೆಯಾಗಿರುವ ಬಗ್ಗೆ ದೂರು ನೀಡಿದ ನಂತರ ಘಟನೆ ಬೆಳಕಿಗೆ ಬಂದಿದೆ. ಆರೋಪಿ ವಿರುದ್ಧ ದೂರು ದಾಖಲಿಸಲಾಗಿದೆ.
Minor boy and 3 youths rape 15-year-old, held in Thane https://t.co/1pDJUqWstf
— TOI Cities (@TOICitiesNews) April 29, 2023
ಸಂತ್ರಸ್ತೆ ಇನ್ಸ್ಟಾಗ್ರಾಮ್ ನಲ್ಲಿ ಸಾಹಿಲ್‌ನ ಪರಿಚಯವಾಗಿತ್ತು. ಸಾಹಿಲ್ ಅವಳಿಗೆ, ‘ನಮ್ಮ ಸ್ನೇಹದಿಂದ ನನ್ನ ಸ್ನೇಹಿತರೊಬ್ಬರು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ. ಹಾಗಾಗಿ ಮನೆಗೆ ಬಂದು ಸಮಸ್ಯೆ ಬಗೆಹರಿಸಿ’ ಎಂದು ಸಂದೇಶ ಕಳುಹಿಸಿದ್ದನು. ಆಕೆ ಅವನ ಮನೆಗೆ ಬಂದಾಗ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಆದ್ದರಿಂದ ಅವಳು ಗಾಬರಿಗೊಂಡು ತನ್ನ ಗೆಳತಿಯ ಬಳಿಗೆ ಹೋದಳು. ಮರುದಿನ ಮತ್ತೆ ಸಂತ್ರಸ್ತೆಗೆ ಕರೆ ಮಾಡಿ ಕರೆದನು ಮತ್ತು ಸಾಹಿಲ್ ತನ್ನ ಮೂವರು ಸ್ನೇಹಿತರೊಂದಿಗೆ ಸೇರಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. (ಹುಡುಗಿಯರೇ, ನಿಮ್ಮನ್ನು ದುರುಪಯೋಗ ಪಡೆದುಕೊಳ್ಳುವ ಯುವಕರ ಮಾತುಗಳನ್ನು ಅನುಸರಿಸಿ ನಿಮ್ಮ ಜೀವನವನ್ನು ಹಾಳು ಮಾಡಿಕೊಳ್ಳಬೇಡಿ ! – ಸಂಪಾದಕರು)
ಸಂಪಾದಕೀಯ ನಿಲುವುಹುಡುಗಿಯರೇ ಮತ್ತು ಮಹಿಳೆಯರೇ, ಸಾಮಾಜಿಕ ಜಾಲತಾಣಗಳಲ್ಲಿ ಅಪರಿಚಿತರೊಂದಿಗೆ ಸ್ನೇಹ ಬೆಳೆಸುವಾಗ ಜಾಗರೂಕರಾಗಿರಿ ! |