ಆತ್ಮಹತ್ಯೆ ಮಾಡಿಕೊಳ್ಳುವವರಲ್ಲಿ ಕಡಿಮೆ ಅಂಕ ಪಡೆದಿರುವ ವಿದ್ಯಾರ್ಥಿಗಳ ಸಮಾವೇಶ
ಭಾಗ್ಯನಗರ – ಆಂಧ್ರಪ್ರದೇಶ ಕೇಂದ್ರ ಪರೀಕ್ಷಾ ಮಂಡಳಿ ಫಸ್ಟ ಪಿಯುಸಿ ಮತ್ತು ಸೆಕೆಂಡ್ ಪಿಯುಸಿಯ ಫಲಿತಾಂಶ ಏಪ್ರಿಲ್ ೨೬ ಪ್ರಕಟವಾಯಿತು. ಈ ಫಲಿತಾಂಶ ಪ್ರಕಟವಾದ ನಂತರ ಕೇವಲ ೪೮ ಗಂಟೆಯಲ್ಲಿ ೯ ವಿದ್ಯಾರ್ಥಿಗಳು ಆತ್ಮಹತಗೆ ಶರಣಾಗಿರುವ ಆಘಾತಕಾರಿ ಮಾಹಿತಿ ಬೆಳಕಿಗೆ ಬಂದಿದೆ. ಇದರೊಂದಿಗೆ ಇಬ್ಬರು ವಿದ್ಯಾರ್ಥಿಗಳು ಆತ್ಮಹತ್ಯೆಯ ಪ್ರಯತ್ನ ಮಾಡಿರುವುದು ಕೂಡ ಬೆಳಕಿಗೆ ಬಂದಿದೆ.
ಪರೀಕ್ಷೆಯಲ್ಲಿ ಫೇಲಾಗಿದ್ದಕ್ಕೆ ಪ್ರಾಣ ಕಳೆದುಕೊಂಡ 9 ವಿದ್ಯಾರ್ಥಿಗಳು; ಮತ್ತಿಬ್ಬರಿಂದ ಆತ್ಮಹತ್ಯೆಗೆ ಯತ್ನ#student #AndhraPradesh #Crime #CrimeNews #results #ExamResult #india #KannadaNewshttps://t.co/O9D5nubWdN
— Asianet Suvarna News (@AsianetNewsSN) April 29, 2023
ಆಂಧ್ರಪ್ರದೇಶ ಕೇಂದ್ರ ಪರೀಕ್ಷಾ ಮಂಡಳಿಯ ವತಿಯಿಂದ ಫಸ್ಟ ಪಿಯುಸಿ ಪರೀಕ್ಷೆ ಮಾರ್ಚ್ ೧೫ ರಿಂದ ಏಪ್ರಿಲ್ ೩ ರ ವರೆಗೆ ಹಾಗೂ ಸೆಕೆಂಡ್ ಪಿಯುಸಿ ಪರೀಕ್ಷೆ ಮಾರ್ಚ್ ೧೬ ರಿಂದ ಏಪ್ರಿಲ್ ೪ ಈ ಸಮಯದಲ್ಲಿ ನಡೆದಿದೆ. ಈ ಪರೀಕ್ಷೆಗಾಗಿ ಒಟ್ಟು ೧೦ ಲಕ್ಷ ೩ ಸಾವಿರ ೯೯೦ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಇದರಲ್ಲಿ ಫಸ್ಟ್ ಪಿಯುಸಿ ಫಲಿತಾಂಶ ಶೇಕಡ ೬೧ ಹಾಗೂ ಸೆಕೆಂಡ್ ಪಿಯುಸಿ ಪರೀಕ್ಷೆಯ ಫಲಿತಾಂಶ ಶೇಕಡ ೭೨ ರಷ್ಟು ಬಂದಿದೆ. ಈ ಪರೀಕ್ಷೆಯಲ್ಲಿ ಕೆಲವು ಜನರು ಅನ್ನುತ್ತೀರ್ಣರಾಗಿದ್ದರಿಂದ ಹಾಗೂ ಕೆಲವರಿಗೆ ನಿರೀಕ್ಷೆಗಿಂತಲೂ ಕಡಿಮೆ ಅಂಕಗಳು ಬಂದಿದ್ದರಿಂದ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
(ಸೌಜನ್ಯ : NDTV)
ಕೆಲವು ದಿನಗಳ ಹಿಂದೆ ನ್ಯಾಯಾಧೀಶರು ಕಳವಳ ವ್ಯಕ್ತಪಡಿಸಿದ್ದರು !
ಕೆಲವು ದಿನಗಳ ಹಿಂದೆ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರಾದ ಡಿ. ವೈ. ಚಂದ್ರಚೂಡು ಇವರು ಮಹಾವಿದ್ಯಾಲಯದ ವಿದ್ಯಾರ್ಥಿಗಳ ಆತ್ಮಹತ್ಯೆಯ ಪ್ರಕರಣಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು. ನಮ್ಮ ಶಿಕ್ಷಣ ಸಂಸ್ಥೆಗಳು ಎಲ್ಲಿ ತಪ್ಪುತ್ತಿದೆ ? ಯಾವುದರಿಂದ ನಮ್ಮ ವಿದ್ಯಾರ್ಥಿಗಳ ಮೇಲೆ ಆತ್ಮಹತ್ಯೆ ಮಾಡಿಕೊಳ್ಳುವ ಅನಿವಾರ್ಯತೆ ಬರುತ್ತಿದೆ ಎಂಬ ಪ್ರಶ್ನೆ ಅವರು ಉಪಸ್ಥಿತಗೊಳಿಸಿದ್ದರು.
ಸಂಪಾದಕೀಯ ನಿಲುವುವಿಧ್ಯಾರ್ಥಿ ಇರುವಾಗಲೇ ಸಾಧನೆ ಕಲಿಸದಿರುವುದು ಇದು ಸ್ವಾತಂತ್ರ್ಯ ಬಂದ ನಂತರ ಇಲ್ಲಿಯವರೆಗಿನ ಎಲ್ಲಾ ಪಕ್ಷದ ಸರಕಾರವೇ ಹೊಣೆ ! ವಿದ್ಯಾರ್ಥಿಗಳಿಗೆ ಬಾಲ್ಯದಿಂದಲೇ ಸಾಧನೆ ಕಲಿಸಿದ್ದರೆ, ಅವರಲ್ಲಿ ವೈಫಲ್ಯ ಸಹಿಸುವ ಸಾಮರ್ಥ್ಯ ನಿರ್ಮಾಣವಾಗುತ್ತಿತ್ತು ಮತ್ತು ವೈಫಲ್ಯವನ್ನು ಎದುರಿಸಲು ಹೇಗೆ ಪ್ರಯತ್ನ ಮಾಡಬೇಕೆಂದು ಪ್ರೇರಣೆ ದೊರೆಯುತ್ತಿತ್ತು ! |