ಬಿಶಪ್ ನ ಸಭೆಯಲ್ಲಿ ಮಹಿಳೆಯರಿಗೆ ಮತದಾನದ ಅಧಿಕಾರ ! – ಪೋಪ್ ಫ್ರಾನ್ಸಿಸ್ ಇವರ ನಿರ್ಣಯ

ಕ್ರೈಸ್ತರ ಎರಡು ಸಾವಿರ ವರ್ಷದ ಇತಿಹಾಸದಲ್ಲಿನ ಮೊದಲ ಘಟನೆ !

(ಬಿಶಪ್ ಎಂದರೆ ಚರ್ಚ್ ನಲ್ಲಿ ಉನ್ನತಮಟ್ಟದಲ್ಲಿರುವ ಪಾದ್ರಿ)

ಪೋಪ್ ಫ್ರಾನ್ಸಿಸ್

ವ್ಯಾಟಿಕನ್ ಸಿಟಿ – ಕ್ರೈಸ್ತರ ಸರ್ವೋಚ್ಛ ಧರ್ಮಗುರು ಪೋಪ್ ಫ್ರಾನ್ಸಿಸ್ ಇವರು ಅಕ್ಟೋಬರ್ ತಿಂಗಳಲ್ಲಿ ನಡೆಯುವ ಬಿಶಪ್ ನ ಮುಂದಿನ ಸಭೆಯಲ್ಲಿ ಮಹಿಳೆಯರಿಗೆ ಮತದಾನದ ಅಧಿಕಾರ ನೀಡುವ ನಿರ್ಣಯ ತೆಗೆದುಕೊಂಡಿದ್ದಾರೆ. ಈ ನಿರ್ಣಯ ಐತಿಹಾಸಿಕವಾಗಿರುವುದು ಎಂದು ಹೇಳಲಾಗುತ್ತಿದೆ. ಈ ಸಭೆಯಲ್ಲಿ ಜಗತ್ತಿನಾದ್ಯಂತದ ಪಾದ್ರಿ ಸಹಭಾಗಿರುತ್ತಾರೆ. ಈ ರೀತಿಯ ಅಧಿಕಾರ ನೀಡುವ ಆಗ್ರಹ ಅನೇಕ ವರ್ಷಗಳಿಂದ ಮಾಡಲಾಗುತ್ತಿತ್ತು. ಮಹಿಳೆಯರಿಗೆ ದ್ವಿತೀಯ ಸ್ಥಾನ ನೀಡಲಾಗುತ್ತಿದೆ ಎಂದು ಕೂಡ ಟೀಕಿಸಲಾಗುತ್ತಿತ್ತು.