ಬದ್ರಿನಾಥ ಮತ್ತು ಕೇದಾರನಾಥ ದೇವಾಲಯಗಳ ಕೆಲಸದಲ್ಲಿ ಹಿಂದೂಯೇತರನ್ನು ಸೇರಿಸಕೊಳ್ಳಬಾರದು ! – ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ

ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ

ಹರಿದ್ವಾರ (ಉತ್ತರಾಖಂಡ) – ಬದ್ರಿನಾಥ-ಕೇದಾರನಾಥ ದೇವಾಲಯ ಸಮಿತಿ ಕಾಯ್ದೆಯ ಪ್ರಕಾರ, ದೇವಾಲಯಗಳ ನಿರ್ಮಾಣ, ಸೌಂದರ್ಯ ಮತ್ತು ವಿಸ್ತರಣೆಯಂತಹ ಕೆಲಸಗಳಲ್ಲಿ ಹಿಂದೂಯೇತರರು ತೊಡಗಿಸಿಕೊಳ್ಳಬಾರದು ಎಂದು ಜ್ಯೋತಿಷ ಪೀಠದ ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ಇವರು ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡುವಾಗ ಹೇಳಿದರು.

ಶಂಕರಾಚಾರ್ಯರು ಮಾತನ್ನು ಮುಂದುವರೆಸುತ್ತಾ, ಈ ಕಾಯ್ದೆಯನ್ನು ೧೯೩೯ ರಲ್ಲಿ ರಚಿಸಲಾಗಿದೆ. ಇದರಲ್ಲಿ ಹಲವಾರು ಬಾರಿ ತಿದ್ದುಪಡಿ ಮಾಡಲಾಗಿದೆ. ಈ ಕಾಯ್ದೆಯ ಮೂಲಕ ಬದ್ರಿನಾಥ ಮತ್ತು ಕೇದಾರನಾಥ ದೇವಾಲಯಗಳನ್ನು ನಿರ್ವಹಿಸಲಾಗುತ್ತದೆ. ‘ಈ ದೇವಸ್ಥಾನಗಳ ಯಾವುದೇ ಕಾರ್ಯಕ್ರಮಗಳಲ್ಲಿ ಹಿಂದೂಯೇತರರು ಭಾಗವಹಿಸುವಂತಿಲ್ಲ’ ಎಂದು ಬರೆಯಲಾಗಿದ್ದು, ಗಮನ ಹರಿಸಬೇಕು. ದೇವಸ್ಥಾನದ ಕೆಲಸಗಳನ್ನು ಹಿಂದೂಯೇತರು ಮಾಡಬಾರದು ಎಂದು ಹೇಳಿದರು.