ಬಂಗಾಲದಲ್ಲಿ ರಾಮನವಮಿಯ ಸಮಯದಲ್ಲಿ ನಡೆದ ಹಿಂಸಾಚಾರದ ಪ್ರಕರಣ

ಹಿಂಸಾಚಾರದ ತನಿಖೆಯನ್ನು ಎನ್.ಐ.ಎ.ಗೆ ಒಪ್ಪಿಸಲು ಕೊಲಕಾತಾ ಉಚ್ಚ ನ್ಯಾಯಾಲಯದ ಆದೇಶ !

ಕೊಲಕಾತಾ ಉಚ್ಚ ನ್ಯಾಯಾಲಯ

ಕೊಲಕಾತಾ (ಬಂಗಾಳ) – ಈ ವರ್ಷ ಬಂಗಾಳದಲ್ಲಿ ರಾಮನವಮಿ ಮೆರವಣಿಗೆಗಳ ಮೇಲೆ ಕೆಲವು ಸ್ಥಳಗಳಲ್ಲಿ ಮುಸ್ಲಿಂ ಮತಾಂಧರು ನಡೆಸಿದ ದಾಳಿಗೆ ಸಂಬಂಧಿಸಿದಂತೆ ಸಲ್ಲಿಸಲಾದ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ಕೊಲಕಾತಾ ಉಚ್ಚ ನ್ಯಾಯಾಲಯ ಎಲ್ಲಾ ಹಿಂಸಾಚಾರದ ಬಗ್ಗೆ ರಾಷ್ಟ್ರೀಯ ತನಿಖಾ ದಳ (ಎನ್.ಐ.ಎ) ತನಿಖೆಗೆ ಆದೇಶಿಸಿದೆ. ಭಾಜಪದ ನಾಯಕ ಮತ್ತು ವಿರೋಧ ಪಕ್ಷದ ಮುಖಂಡ ಶುಭೇಂದು ಅಧಿಕಾರಿ ಈ ಅರ್ಜಿ ಸಲ್ಲಿಸಿದ್ದಾರೆ. ರಾಮನವಮಿ ಸಮಯದಲ್ಲಿ ನಡೆದ ಹಿಂಸಾಚಾರದ ಸಂದರ್ಭದಲ್ಲಿ ಬಾಂಬ್ ಸ್ಫೋಟಗಳು ನಡೆದಿದ್ದರಿಂದ, ಎನ್.ಐ.ಎ. ದಿಂದ ತನಿಖೆ ನಡೆಸುವಂತೆ ಕೇಳಲಾಗಿತ್ತು. ನ್ಯಾಯಾಲಯವು ಈ ಹಿಂಸಾಚಾರಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಗಳು ಮತ್ತು ಸಿಸಿಟಿವಿ ದೃಶ್ಯಗಳನ್ನು ಮುಂದಿನ ಎರಡು ವಾರಗಳಲ್ಲಿ ಎನ್.ಐ.ಎ. ಗೆ ಹಸ್ತಾಂತರಿಸುವಂತೆ ಬಂಗಾಲ ಪೊಲೀಸರಿಗೆ ಆದೇಶಿಸಿದೆ.

 

ಸಂಪಾದಕರ ನಿಲುವು

ಕೊಲಕಾತಾದ ಶ್ಲಾಘನೀಯ ನಿರ್ಣಯ ! ಈಗ ಹಿಂಸಾಚಾರದ ವಿಷಯದಲ್ಲಿ ತೃಣಮೂಲ ಕಾಂಗ್ರೆಸ್ ಮತಾಂಧ ಮುಸ್ಲಿಮರನ್ನು ಹೇಗೆ ಬೆಂಬಲಿಸಿತು ಎಂಬುದನು ಎನ್.ಐ.ಎ ಯು ಸಾಕ್ಷ್ಯಾಧಾರಗಳೊಂದಿಗೆ ಸಾರ್ವಜನಿಕರ ಮುಂದೆ ತರಬೇಕು ಎಂದು ಹಿಂದೂಗಳು ನಿರೀಕ್ಷಿಸುತ್ತಾರೆ !